1.04 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ ಶಿವರಾಜ್ ಸಿಂಗ್ ಚೌವ್ಹಾಣ್

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಅಧಿಕಾರ ಉಳಿಸಿಕೊಳ್ಳುವುದರ ಜೊತೆಗೆ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಶಿವರಾಜ್ ಸಿಂಗ್ ಚೌವ್ಹಾಣ್
ಶಿವರಾಜ್ ಸಿಂಗ್ ಚೌವ್ಹಾಣ್

ಭೋಪಾಲ್: ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಅಧಿಕಾರ ಉಳಿಸಿಕೊಳ್ಳುವುದರ ಜೊತೆಗೆ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಬುಧ್ನಿ ವಿಧಾನಸಭಾ ಕ್ಷೇತ್ರದಲ್ಲಿ ಸತತ 6 ನೇ ಬಾರಿ ಶಿವರಾಜ್ ಸಿಂಗ್ ಚೌವ್ಹಾಣ್, ವಿಕ್ರಮ್ ಮಸ್ತಾಲ್ ವಿರುದ್ಧ 1,04,974 ಮತಗಳಿಂದ ಗೆಲುವು ದಾಖಲಿಸಿದ್ದಾರೆ.  

ಮಧ್ಯಪ್ರದೇಶದ ದೀರ್ಘಾವಧಿಯ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚೌವ್ಹಾಣ್, 1990 ರಲ್ಲಿ ಮೊದಲ ಬಾರಿಗೆ ಬುಧ್ನಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಚೌವ್ಹಾಣ್ 1991, 1996, 1998, 1999, 2004 ರಲ್ಲಿ ವಿದಿಶಾ ಕ್ಷೇತ್ರದ ಸಂಸದರಾಗಿಯೂ ಆಯ್ಕೆಗೊಂಡಿದ್ದರು.

ಚೌವ್ಹಾಣ್ ಅವರ ಬೆಂಬಲಿಗರು ಅವರನ್ನು ಪ್ರೀತಿಯಿಂದ 'ಮಾಮಾ' ಎಂದು ಕರೆಯುತ್ತಾರೆ. ಚೌವ್ಹಾಣ್ ಅವರನ್ನು ಈ ಬಾರಿ ಪಕ್ಷದ ಮುಖ್ಯಮಂತ್ರಿಯಾಗಿ ಬಿಂಬಿಸಲಾಗಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com