ಲೋಕಸಭೆ
ದೇಶ
ಲೋಕಸಭೆಯಲ್ಲಿ 17 ಸದಸ್ಯರ ರಾಜೀನಾಮೆ, ಆದರೆ ಉಪ ಚುನಾವಣೆ ಇಲ್ಲ, ಏಕೆ?
11 ಸಂಸದರು ರಾಜೀನಾಮೆ ನೀಡಿದ ನಂತರ ಲೋಕಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯರ ಸಂಖ್ಯೆ 300 ರಿಂದ 289 ಕ್ಕೆ ಇಳಿದಿದೆ.
ನವದೆಹಲಿ: 11 ಸಂಸದರು ರಾಜೀನಾಮೆ ನೀಡಿದ ನಂತರ ಲೋಕಸಭೆಯಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯರ ಸಂಖ್ಯೆ 300 ರಿಂದ 289 ಕ್ಕೆ ಇಳಿದಿದೆ.
ತೆಲಂಗಾಣ ಸಿಎಂ ಆಗಲು ರೇವಂತ್ ರೆಡ್ಡಿ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್ ಸಂಖ್ಯೆ 51 ರಿಂದ 50 ಕ್ಕೆ ಇಳಿದಿದೆ. ಮಹುವಾ ಮೊಯಿತ್ರಾ ಉಚ್ಚಾಟನೆಯ ನಂತರ ತೃಣಮೂಲ ಕಾಂಗ್ರೆಸ್ ಸಂಸದರ ಸಂಖ್ಯೆ 23 ರಿಂದ 22 ಕ್ಕೆ ಇಳಿದಿದೆ.
17ನೇ ಲೋಕಸಭೆಯಲ್ಲಿ ಈಗ 17 ಸದಸ್ಯರ ಸ್ಥಾನಗಳು ಖಾಲಿ ಇವೆ. ಇನ್ನು ಲೋಕಸಭೆ ಚುನಾವಣೆಗೆ ಆರು ತಿಂಗಳಿಗಿಂತ ಕಡಿಮೆ ಸಮಯ ಇರುವುದರಿಂದ ಈ ಸ್ಥಾನಗಳಿಗೆ ಉಪಚುನಾವಣೆ ನಡೆಯುವುದಿಲ್ಲ. ಈ ಸ್ಥಾನಗಳು ದೇಶದ ಉಳಿದ ಭಾಗಗಳಂತೆ 2024ರಲ್ಲಿ ಚುನಾವಣೆ ಎದುರಿಸುತ್ತವೆ.

