ಸಾಂದರ್ಭಿಕ ಚಿತ್ರ
ದೇಶ
ಮಣಿಪುರ: ಜನಾಂಗೀಯ ಘರ್ಷಣೆಯಲ್ಲಿ ಮೃತಪಟ್ಟ 8 ತಿಂಗಳ ಬಳಿಕ 19 ಸಂತ್ರಸ್ತರ ಅಂತ್ಯಕ್ರಿಯೆ!
ಮಣಿಪುರದಲ್ಲಿ ಜನಾಂಗೀಯ ಘರ್ಷಣೆಯಲ್ಲಿ ಮೃತಪಟ್ಟ 8 ತಿಂಗಳ ಬಳಿಕ 19 ಸಂತ್ರಸ್ತರ ಅಂತ್ಯಕ್ರಿಯೆ ನಡೆದಿದೆ. ಕುಕಿ ಝೋ ಸಮುದಾಯದ ಸಂತ್ರಸ್ತರು ಸಾವನ್ನಪ್ಪಿದ್ದರು.
ಮಣಿಪುರ: ಮಣಿಪುರದಲ್ಲಿ ಜನಾಂಗೀಯ ಘರ್ಷಣೆಯಲ್ಲಿ ಮೃತಪಟ್ಟ 8 ತಿಂಗಳ ಬಳಿಕ 19 ಸಂತ್ರಸ್ತರ ಅಂತ್ಯಕ್ರಿಯೆ ನಡೆದಿದೆ. ಕುಕಿ ಝೋ ಸಮುದಾಯದ ಸಂತ್ರಸ್ತರು ಸಾವನ್ನಪ್ಪಿದ್ದರು.
ಫೈಜಾಂಗ್ ಗ್ರಾಮದಲ್ಲಿ ಬುಡಕಟ್ಟು ಏಕತೆಯ ಸಮಿತಿಯು ಆಯೋಜಿಸಿದ್ದ ಸಾಮೂಹಿಕ ಅಂತ್ಯಕ್ರಿಯೆಯಲ್ಲಿ ಮೃತರ ಸ್ನೇಹಿತರು ಮತ್ತು ಸಂಬಂಧಿಕರು ಭಾಗವಹಿಸಿದ್ದರು.
ಬುಡಕಟ್ಟು ಸಮುದಾಯದ ಇತರ 87 ಸದಸ್ಯರ ಶವಗಳಿಗೆ ಡಿಸೆಂಬರ್ 20 ರಂದು ಚುರಾಚಂದ್‌ಪುರ ಜಿಲ್ಲೆಯಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಜಂಟಿ ಲೋಕೋಪಕಾರಿ ಸಂಸ್ಥೆಗಳ ಸಂಚಾಲಕ ಲಾಲ್‌ಡಾನ್ಲಿಯನ್ ವಾರ್ತೆ ತಿಳಿಸಿದ್ದಾರೆ.
19 ಸಂತ್ರಸ್ತರ ಅವಶೇಷಗಳನ್ನು ಇಂಫಾಲ್‌ನಲ್ಲಿ ಸುಮಾರು ಎಂಟು ತಿಂಗಳ ಕಾಲ ಶವಾಗಾರದಲ್ಲಿ ಇಡಲಾಗಿತ್ತು. ಆ ಶವಗಳಿಗೆ ಇಂದು ಅಂತ್ಯಕ್ರಿಯೆ ನಡೆಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ