ಕೋವಿಡ್-19: ಜೆಎನ್.1 ರೂಪಾಂತರಿ, ಆತಂಕಪಡುವ ಅಗತ್ಯವಿಲ್ಲ- ಡಾ. ಎನ್.ಕೆ. ಆರೋರಾ

ಕೋವಿಡ್-19 ರೂಪಾಂತರಿ ಜೆಎನ್.1 ಬಗ್ಗೆ ಜನತೆ ಆತಂಕಪಡುವ ಅಗತ್ಯವಿಲ್ಲ ಎಂದು ಭಾರತೀಯ ಸಾರ್ಸ್-ಕೋವ್-2 ಜಿನೋಮ್ ಒಕ್ಕೂಟದ ( ಐಎನ್ ಎಸ್ ಎಸಿಒಜಿ) ಮುಖ್ಯಸ್ಥರಾದ ಡಾ.ಎನ್.ಕೆ. ಆರೋರಾ ಹೇಳಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್-19 ರೂಪಾಂತರಿ ಜೆಎನ್.1 ಬಗ್ಗೆ ಜನತೆ ಆತಂಕಪಡುವ ಅಗತ್ಯವಿಲ್ಲ ಎಂದು ಭಾರತೀಯ ಸಾರ್ಸ್-ಕೋವ್-2 ಜಿನೋಮ್ ಒಕ್ಕೂಟದ ( ಐಎನ್ ಎಸ್ ಎಸಿಒಜಿ) ಮುಖ್ಯಸ್ಥರಾದ ಡಾ.ಎನ್.ಕೆ. ಆರೋರಾ ಹೇಳಿದ್ದಾರೆ. 

ಕೇರಳದಲ್ಲಿ ಒಂದು ಸಾವಿನ ವರದಿಯ ಹೊರತಾಗಿಯೂ, ಆತನ ಸಾವು ಕೇವಲ ವೈರಸ್ ಸೋಂಕಿನಿಂದ ಆಗಿಲ್ಲ. ಆತನಿಗೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿದ್ದವು ಎಂದು ಅವರು ಹೇಳಿದ್ದಾರೆ.

ಮೃತನು ಹೃದಯ, ಶ್ವಾಸಕೋಶ ಮತ್ತು ಮೂತ್ರಪಿಂಡ ಕಾಯಿಲೆಗಳಿಂದ ಬಳಲುತ್ತದ್ದರು. ಈ ಕಾರಣದಿಂದ ಸಾವು ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಕೇವಲ ಜಿಎನ್.1 ಸೋಂಕಿನಿಂದ ಅಲ್ಲ ಎಂದು ಅರೋರಾ ತಿಳಿಸಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಜೀನೋಮ್ ಸೀಕ್ವೆನ್ಸಿಂಗ್ ನಡೆಯುತ್ತಿರುವುದರಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಮಾದರಿ ಸಂಖ್ಯೆಗಳು ಸೀಮಿತವಾಗಿದ್ದರೂ, ಅವುಗಳನ್ನು ರಾಷ್ಟ್ರವ್ಯಾಪಿ ಸಂಗ್ರಹಿಸಲಾಗುತ್ತಿದೆ ಎಂದು ಡಾ. ಅರೋರಾ ಒತ್ತಿ ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com