ಸಂಸತ್ ಭದ್ರತಾ ಲೋಪ: ಮತ್ತೊಬ್ಬ ಆರೋಪಿಯನ್ನು ಬಂಧಿಸಿದ ದೆಹಲಿ ಪೊಲೀಸರು!

ಡಿ.13ರಂದು ಇಬ್ಬರು ಯುವಕರು ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು ಹೊಗೆ ಬಾಂಬ್ ಸಿಡಿಸಿ ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೇರಿದಂತೆ ಐವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಡಿ.13ರಂದು ಇಬ್ಬರು ಯುವಕರು ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು ಹೊಗೆ ಬಾಂಬ್ ಸಿಡಿಸಿ ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೇರಿದಂತೆ ಐವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. 

ಇದೀಗ ಜಲೌನ್‌ನ ನಿವಾಸಿ ಅತುಲ್ ಕುಲಶ್ರೇಷ್ಠ ಅಲಿಯಾಸ್ ಬಚಾ ಎಂಬಾತನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಓರೈ ತಲುಪಿದ ದೆಹಲಿಯ ವಿಶೇಷ ಸೆಲ್‌ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ದೆಹಲಿಗೆ ಕರೆದೊಯ್ದಿದ್ದಾರೆ. ಈ ಘಟನೆಯ ನಂತರ ಅತುಲ್ ಮನೆಯಲ್ಲಿ ಮೌನ ಆವರಿಸಿದೆ.

ಜಲೌನ್‌ನಲ್ಲಿ ದೆಹಲಿ ಪೊಲೀಸರು ಬಂಧಿಸಿರುವ ಅತುಲ್ ಕುಲಶ್ರೇಷ್ಠ ಬಚ್ಚಾ ಸಂಸತ್ತಿಗೆ ನುಗ್ಗಿದ ಆರೋಪಿಗಳೊಂದಿಗೆ ಫೇಸ್‌ಬುಕ್‌ನಲ್ಲಿ ಚಾಟ್ ಮಾಡಿದ ಭಗತ್ ಸಿಂಗ್ ಫ್ಯಾನ್ಸ್ ಕ್ಲಬ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಅತುಲ್ ಕುಲಶ್ರೇಷ್ಠ ಅವರು ತಮ್ಮ ವಿದ್ಯಾರ್ಥಿ ಜೀವನದಿಂದಲೂ ಶಹೀದ್ ಆಜಮ್ ಸರ್ದಾರ್ ಭಗತ್ ಸಿಂಗ್ ಅವರ ಸಿದ್ಧಾಂತದೊಂದಿಗೆ ಸಂಬಂಧ ಹೊಂದಿದ್ದಾರೆ. ಆತ ಅನೇಕ ಬಾರಿ ಸೆಮಿನಾರ್‌ಗಳು ಮತ್ತು ಸಭೆಗಳಲ್ಲಿ ಭಾಗವಹಿಸಿದ್ದನು. ಆದರೆ ಆತ ಯಾವುದೇ ಕ್ರಿಮಿನಲ್ ದಾಖಲೆಯನ್ನು ಹೊಂದಿಲ್ಲ. ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ.

ಸಂಸತ್ತಿಗೆ ನುಗ್ಗಿದ ಆರೋಪಿಗಳೊಂದಿಗೆ ಚಾಟ್ ಮಾಡಿದ್ದರಿಂದ ದೆಹಲಿ ಪೊಲೀಸರು ಅತುಲ್ ನನ್ನು ವಶಕ್ಕೆ ಪಡೆದಿದ್ದಾರೆ. ಬಂಧನದಿಂದಾಗಿ ಮನೆ ಮತ್ತು ನೆರೆಹೊರೆಯಲ್ಲಿ ನೀರವ ಮೌನ ಆವರಿಸಿದೆ. ಬಚ್ಚಾ ಕುಲಶ್ರೇಷ್ಠ ಬಂಧನ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ದೆಹಲಿ ಪೊಲೀಸರು ಬಂಧಿಸಿರುವ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಮಂಗಳವಾರ ಸಂಜೆ ದೆಹಲಿ ಪೊಲೀಸರು ಬಂದಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಮತ್ತು ಆತನ ಹೆಸರು ಅತುಲ್ ಕುಲಶ್ರೇಷ್ಠ ಎಂದು ಜಲೌನ್ ಎಸ್ಪಿ ಡಾ. ಇರಾಜ್ ರಾಜಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com