ಅಯೋಧ್ಯೆಯ ರಾಮಮಂದಿರಕ್ಕೆ ಹನುಮಾನ್ ಧ್ವಜ ಹೊಲಿದದ್ದು ಮುಸ್ಲಿಂ ಟೈಲರ್

ಅಯೋಧ್ಯೆಯ ರಾಮಮಂದಿರಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ರಾಮ ಮತ್ತು ಹನುಮಾನ್ ಧ್ವಜಗಳಿಗೆ ಭಾರಿ ಬೇಡಿಕೆ ಕಂಡು ಬಂದಿದೆ.
ರಾಮ ಮಂದಿರದ ಮಾದರಿ
ರಾಮ ಮಂದಿರದ ಮಾದರಿ

ಅಯೋಧ್ಯೆ: ಅಯೋಧ್ಯೆಯ ರಾಮಮಂದಿರಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ರಾಮ ಮತ್ತು ಹನುಮಾನ್ ಧ್ವಜಗಳಿಗೆ ಭಾರಿ ಬೇಡಿಕೆ ಕಂಡು ಬಂದಿದೆ.

ಇನ್ನು 40 ಅಡಿ ಉದ್ದ ಮತ್ತು 42 ಅಡಿ ಅಗಲದ ಹನುಮಾನ್ ಧ್ವಜವನ್ನು ಮುಸ್ಲಿಂ ಟೈಲರ್ ಗುಲಾಮ್ ಜಿಲಾನಿ(55) ಅವರು ಹೊಲಿದಿದ್ದಾರೆ.

ಈ ಭವ್ಯವಾದ ಧ್ವಜ ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದ ಮೇಲೆ ಹಾರಿಸಲು ಸಿದ್ಧವಾಗಿದೆ. ಜಿಲಾನಿ ಮೂರನೇ ತಲೆಮಾರಿನ ಟೈಲರ್ ಆಗಿದ್ದು, ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ಧಾರ್ಮಿಕ 'ಮಹಾವೀರಿ' ಧ್ವಜಗಳನ್ನು ತಯಾರಿಸುವಲ್ಲಿ ಪರಿಣತಿ ಪಡೆದಿದ್ದಾರೆ.

"100 ಕೋಟಿಗೂ ಹೆಚ್ಚು ಜನರು ಕನಸು ಕಾಣುತ್ತಿರುವ ಐತಿಹಾಸಿಕ ರಾಮ ಮಂದಿರವನ್ನು ನಾನೇ ಹೊಲಿದ ಧ್ವಜ ಅಲಂಕರಿಸುತ್ತಿದೆ ಎಂಬ ಹೆಮ್ಮೆ ನನಗೆ ಇದೆ. ನನಗೆ ಅವಕಾಶ ಸಿಕ್ಕರೆ, ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಖಂಡಿತವಾಗಿಯೂ ಅಯೋಧ್ಯೆಗೆ ಹೋಗುತ್ತೇನೆ" ಎಂದು ಜಿಲಾನಿ ಪಿಟಿಐಗೆ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22 ರಂದು ರಾಮ ಮಂದಿರದಲ್ಲಿ 'ಪ್ರಾಣ ಪ್ರತಿಷ್ಠಾಪನೆ' ಅಥವಾ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ತಮ್ಮ ತಂದೆ ದಿ. ಅಬ್ದುಲ್ ಶಕುರ್ ಅವರಿಂದ ತಾನು ಹೊಲಿಗೆ ಕಲಿತಿರುವುದಾಗಿ ಜಿಲಾನಿ ಅವರು ಹೇಳಿದ್ದಾರೆ.

"ನಾನು ನನ್ನ ತಂದೆಯೊಂದಿಗೆ ವೀರ್ ವಸ್ತ್ರಾಲಯದ ಮುಂಭಾಗದಲ್ಲಿರುವ ಫತೇ ಲಾಲ್ ಅಗರ್ವಾಲ್ ಒಡೆತನದ ಭೋಲಾ ವಸ್ತ್ರಾಲಯದಲ್ಲಿ ಕೆಲಸ ಮಾಡುತ್ತಿದ್ದೆ, ಅಲ್ಲಿ ನಾನು ಪ್ರಸ್ತುತ ಉದ್ಯೋಗದಲ್ಲಿದ್ದೇನೆ" ಎಂದು ಅವರು ತಿಳಿಸಿದ್ದಾರೆ.

40 ಅಡಿಯ ಹನಮಾನ್ ಧ್ವಜದಲ್ಲಿ ಒಂದು ಬದಿಯಲ್ಲಿ ಹನುಮಾನ್ ಮತ್ತು ಇನ್ನೊಂದು ಬದಿಯಲ್ಲಿ ಹನುಮಂತನ ಭುಜದ ಮೇಲೆ ರಾಮ ಮತ್ತು ಲಕ್ಷ್ಮಣನ ಚಿತ್ರಗಳನ್ನು ಹೊಂದಿದೆ ಎಂದು ವೀರ್ ವಸ್ತ್ರಾಲಯದ ಮಾಲೀಕ ದೇವೇಂದ್ರ ಜೈನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com