ಅಯೋಧ್ಯೆಗೆ ಮೊದಲ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ 'ಜೈ ಶ್ರೀ ರಾಮ್' ಘೋಷಣೆ ಮೊಳಗಿಸಿದ ಇಂಡಿಗೋ ಪೈಲಟ್!

ಶನಿವಾರ ದೆಹಲಿಯಿಂದ ಅಯೋಧ್ಯೆಗೆ ಮೊದಲ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ  ಇಂಡಿಗೋ ಪೈಲಟ್ ಅಶುತೋಷ್ ಶೇಖರ್ ಅವರು "ಜೈ ಶ್ರೀ ರಾಮ್" ಎಂದು ಘೋಷಣೆ ಮೊಳಗಿಸಿದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಅಯೋಧ್ಯೆ: ಶನಿವಾರ ದೆಹಲಿಯಿಂದ ಅಯೋಧ್ಯೆಗೆ ಮೊದಲ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ  ಇಂಡಿಗೋ ಪೈಲಟ್ ಅಶುತೋಷ್ ಶೇಖರ್ ಅವರು "ಜೈ ಶ್ರೀ ರಾಮ್" ಎಂದು ಘೋಷಣೆ ಮೊಳಗಿಸಿದರು.

ಪ್ರಯಾಣಿಕರನ್ನುದ್ದೇಶಿಸಿ ಮಾತನಾಡಿದ 43 ವರ್ಷದ ಶೇಖರ್, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ನಂತರ, ಅಲ್ಲಿಗೆ ಮೊದಲ ವಿಮಾನ ಹಾರಿಸುವ ಜವಾಬ್ದಾರಿಯನ್ನು ತಮ್ಮ ಕಂಪನಿ ವಹಿಸಿದ್ದು ನನ್ನ ಅದೃಷ್ಟ ಎಂದು ಹೇಳಿದರು.

ತಮ್ಮ ಸಹ-ಪೈಲಟ್ ನಿಖಿಲ್ ಬಕ್ಷಿ ಮತ್ತು ಕ್ಯಾಬಿನ್ ಇನ್‌ಚಾರ್ಜ್ ಕೀರ್ತಿ ಅವರನ್ನು ಪ್ರಯಾಣಿಕರಿಗೆ ಪರಿಚಯಿಸಿದರು. ಶೇಖರ್ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ಅವರ ಪತ್ನಿ ಶ್ವೇತಾ ರಂಜನ್ ಈ "ಸ್ಮರಣೀಯ" ಘಟನೆಯನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. "ಇದು ಜೀವಮಾನದ ಅನುಭವ" ಎಂದು ರಂಜನ್  ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. 

"ಪ್ರಯಾಣಿಕರು ದೆಹಲಿಯಿಂದ ಅಯೋಧ್ಯೆಗೆ ಸುಮಾರು ಒಂದು ಗಂಟೆ ಪ್ರಯಾಣದುದ್ದಕ್ಕೂ ಶ್ರೀರಾಮ ಘೋಷಣೆ, ಹನುಮಾನ್ ಚಾಲೀಸಾವನ್ನು ಪಠಿಸಿದರು. ಕ್ಯಾಬಿನ್‌ನಲ್ಲಿನ ಇಡೀ ವಾತಾವರಣವು ಆಧ್ಯಾತ್ಮಿಕವಾಗಿತ್ತು ಎಂದು ಅವರು ಹೇಳಿದರು.
ಪ್ರಯಾಣಿಕರ ಬಗ್ಗೆ ಮಾತನಾಡಿದ ರಂಜನ್, ಅವರು ಕೇಸರಿ ಬಣ್ಣದ ಬಟ್ಟೆ ಮತ್ತು ಕೇಸರಿ ಶಿರಸ್ತ್ರಾಣ ಧರಿಸಿದ್ದರು.  ಗಂಗಾಜಲ, ಅಗರಬತ್ತಿಗಳು, ಹೂವುಗಳು ಮತ್ತು ಸಿಹಿತಿಂಡಿಗಳನ್ನು ಹೊತೊಯ್ದರು. ಭಕ್ತರೊಂದಿಗೆ ವಿಮಾನ ಹಿಂತಿರುಗಿತು ಎಂದು ಅವರು ತಿಳಿಸಿದರು. 

ವಾಪಸ್ಸಾದ ವಿಮಾನದಲ್ಲಿ ಕೇಂದ್ರ ಸಚಿವ ವಿ ಕೆ ಸಿಂಗ್ ಕೂಡ ಪ್ರಯಾಣಿಸಿದರು. ಮೊದಲ ವಿಮಾನವು ಮಧ್ಯಾಹ್ನ 2:40 ಕ್ಕೆ ಟೇಕ್ ಆಫ್  ಆಗಿದ್ದು, ಸಂಜೆ 4 ಗಂಟೆಗೆ ಅಯೋಧ್ಯೆಗೆ ಬಂದಿಳಿಯಿತು. ಮತ್ತೆ ಸಂಜೆ 4:40 ಕ್ಕೆ ಹೊರಟು ಸಂಜೆ 5:55 ಕ್ಕೆ ದೆಹಲಿ ತಲುಪಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com