ಭಯೋತ್ಪಾದನೆ ಮಾಡಿದ್ರೆ, ಹಿಂದೂ ಯುವತಿಯರನ್ನು ಅಪಹರಿಸಿ ನಮಾಜ್ ಮಾಡಿದ್ರೆ ಎಲ್ಲಾ ಸರಿಹೋಗುತ್ತಾ?: ಬಾಬಾ ರಾಮದೇವ್
ಯೋಗ ಗುರು ಬಾಬಾ ರಾಮ್‌ದೇವ್ ಅವರು ಗುರುವಾರ ರಾಜಸ್ಥಾನದ ಬಾರ್ಮರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇತರ ಧರ್ಮಗಳ ಬಗ್ಗೆ ಗೇಲಿ ಮಾಡುವ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Published: 03rd February 2023 04:38 PM | Last Updated: 03rd February 2023 04:53 PM | A+A A-

ಬಾಬಾ ರಾಮದೇವ್
ಬಾರ್ಮೆರ್(ರಾಜಸ್ಥಾನ): ಯೋಗ ಗುರು ಬಾಬಾ ರಾಮ್‌ದೇವ್ ಅವರು ಗುರುವಾರ ರಾಜಸ್ಥಾನದ ಬಾರ್ಮರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇತರ ಧರ್ಮಗಳ ಬಗ್ಗೆ ಗೇಲಿ ಮಾಡುವ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಓರ್ವ ಮುಸಲ್ಮಾನ ಭಯೋತ್ಪಾದಕನಾಗಿದ್ದರೂ ಖಂಡಿತ ನಮಾಜ್ ಮಾಡುತ್ತಾನೆ. ನಮಾಜ್ ಮಾಡಿದ ನಂತರ ಅವರು ತಮಗೆ ಬೇಕಾದದ್ದನ್ನು ಮಾಡುತ್ತಾರೆ. ಹಿಂದೂ ಹೆಣ್ಣುಗಳನ್ನು ಅಪಹರಿಸುತ್ತೀರಾ. ಜಿಹಾದ್ ಹೆಸರಿನಲ್ಲಿ ಭಯೋತ್ಪಾದಕರಾಗುತ್ತೀರಾ. ಮತ್ತೊಬ್ಬರ ಜೀವವನ್ನು ತೆಗೆಯುತ್ತಾರೆ. ಆದರೆ ಹಿಂದೂ ಧರ್ಮ ಆಗಲ್ಲ. ಜಗಳ ಮತ್ತು ಪಾಪದಿಂದ ದೂರವಿರಬೇಕು ಎಂದು ಹಿಂದೂ ಧರ್ಮ ಕಲಿಸುತ್ತದೆ ಎಂದರು.
ಇದನ್ನೂ ಓದಿ: ಬಾಲ್ಯ ವಿವಾಹ ಪಿಡುಗು: ಹೇಳಿದಂತೆ ಮಾಡುತ್ತಿರುವ ಅಸ್ಸಾಂ ಸಿಎಂ; ಇದುವರೆಗೆ 1,800 ಜನರ ಬಂಧನ!
ನಮಾಜ್ ಮಾಡುವುದು ಅತೀ ಮುಖ್ಯ. ಆದರೆ ನಮಾಜ್ ಮಾಡಿದ ನಂತರ ಏನು ಮಾಡಿದರೂ ಅದು ಸಮರ್ಥನೀಯವಾಗಿದೆ. ಜಿಹಾದ್ ಹೆಸರಿನಲ್ಲಿ ಭಯೋತ್ಪಾದಕರಾಗಿ, ಹಿಂದೂ ಹುಡುಗಿಯರನ್ನು ಅಪಹರಿಸುವುದು ಅಥವಾ ನಿಮ್ಮ ಮನಸ್ಸಿಗೆ ಬಂದದ್ದನ್ನು ಮಾಡುವುದು. ಸನಾತನ ಧರ್ಮದ ಸಕಾರಾತ್ಮಕತೆ ಮತ್ತು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮ ಸೇರಿದಂತೆ ಇತರ ಧರ್ಮಗಳ 'ಕೊರತೆ'ಗಳನ್ನು ಪಟ್ಟಿ ಮಾಡುವಾಗ ಯೋಗ ಗುರು ಈ ಹೇಳಿಕೆಯನ್ನು ನೀಡಿದ್ದಾರೆ. ಮುಸಲ್ಮಾನರ ಉಡುಪಿನ ಮೇಲೆ ಅವರಿಗೆ ಸ್ವರ್ಗ ಎಂದರೆ ಪಾದದ ಮೇಲೆ ಪೈಜಾಮ ಹಾಕುವುದು, ಮೀಸೆ ಕತ್ತರಿಸಿ ಟೋಪಿ ತೋರಿಸುವುದಾ ಎಂದಿದ್ದರು.
ತಾವು ಯಾವುದೇ ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡಿಲ್ಲ ಅಥವಾ ಟೀಕಿಸುತ್ತಿಲ್ಲ ಎಂದು ಯೋಗಗುರು ಹೇಳಿದ್ದಾರೆ. ಆದರೆ ಸಮುದಾಯವು ಅನುಸರಿಸುತ್ತಿರುವ ತಪ್ಪು ಆಚರಣೆಗಳನ್ನು ಮಾತ್ರ ಹೇಳುತ್ತಿದ್ದೇನೆ. ಹೀಗಾಗಿ ಅವರ ಬಲೆಗೆ ಜನರು ಬೀಳಬಾರದು ಎಂದರು.