ಯುಪಿ ಎಂಎಲ್‌ಸಿ ಚುನಾವಣೆ: ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು; ಒಂದು ಪಕ್ಷೇತರ ಅಭ್ಯರ್ಥಿಯ ಪಾಲು

ಆಡಳಿತಾರೂಢ ಬಿಜೆಪಿ ಉತ್ತರ ಪ್ರದೇಶ ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಯಲ್ಲಿ ಐದು ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡಿದೆ. ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಖನೌ: ಆಡಳಿತಾರೂಢ ಬಿಜೆಪಿ ಉತ್ತರ ಪ್ರದೇಶ ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಯಲ್ಲಿ ಐದು ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡಿದೆ. ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ.

ಪ್ರಮುಖ ಪ್ರತಿಪಕ್ಷ ಸಮಾಜವಾದಿ ಪಕ್ಷ ಈ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಪಡೆಯಲು ವಿಫಲವಾಗಿದೆ. ಜನವರಿ 30 ರಂದು ಮೂರು ಪದವೀಧರ ಕ್ಷೇತ್ರಕ್ಕೆ ಮತ್ತು ಎರಡು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. 

ಪದವೀಧರ ಕ್ಷೇತ್ರ
ಬಿಜೆಪಿಯ ಜೈಪಾಲ್ ಸಿಂಗ್(ಬರೇಲಿ-ಮೊರಾದಾಬಾದ್ ವಿಭಾಗ), ಅರುಣ್ ಪಾಠಕ್(ಉನ್ನಾವ್-ಕಾನ್ಪುರ್ ವಿಭಾಗ), ಮತ್ತು ದೇವೇಂದ್ರ ಪಾಠಕ್(ಗೋರಖ್‌ಪುರ-ಫೈಜಾಬಾದ್ ವಿಭಾಗ) ಗೆಲುವು ಸಾಧಿಸಿದ್ದಾರೆ.

ಜೈಪಾಲ್ ಸಿಂಗ್ ಅವರು ಸತತ ಮೂರನೇ ಅವಧಿಗೆ ಗೆಲುವು ಸಾಧಿಸುವ ಮೂಲಕ ಪದವೀಧರ ಸ್ಥಾನದ ಬರೇಲಿ-ಮೊರಾದಾಬಾದ್ ವಿಭಾಗದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ಆಡಳಿತ ಪಕ್ಷದ ಬಾಬುಲಾಲ್ ತಿವಾರಿ ಅವರು ಝಾನ್ಸಿ-ಅಲಹಾಬಾದ್ ವಿಭಾಗದ ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಕಾನ್ಪುರ ವಿಭಾಗದ ಶಿಕ್ಷಕರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ರಾಜ್ ಬಹದ್ದೂರ್ ಚಂದೇಲ್ ಅವರ ವಿರುದ್ಧ ಬಿಜೆಪಿ ಸೋಲು ಅನುಭವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com