ಅದಾನಿ ಬಿಕ್ಕಟ್ಟು: ಬ್ಯಾಂಕಿಂಗ್ ಕ್ಷೇತ್ರ ಚೇತರಿಸಿಕೊಳ್ಳುತ್ತಿದೆ ಮತ್ತು ಸ್ಥಿರವಾಗಿದೆ- ಆರ್ ಬಿಐ ಸ್ಪಷ್ಟನೆ

ಅದಾನಿ ಸಮೂಹಕ್ಕೆ ಬ್ಯಾಂಕ್ ಗಳು ಸಾಲ ನೀಡಿರುವ ಬಗ್ಗೆ ಆತಂಕ ಮೂಡಿರುವ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ಭಾರತದ ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಆತಂಕ ಹೋಗಲಾಡಿಸುವ ನಿಟ್ಟನಲ್ಲಿ ಸ್ಪಷ್ಟನೆ ನೀಡಿದೆ.
ಆರ್ ಬಿ ಐ
ಆರ್ ಬಿ ಐ

ಮುಂಬೈ: ಅದಾನಿ ಸಮೂಹಕ್ಕೆ ಬ್ಯಾಂಕ್ ಗಳು ಸಾಲ ನೀಡಿರುವ ಬಗ್ಗೆ ಆತಂಕ ಮೂಡಿರುವ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ಭಾರತದ ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಆತಂಕ ಹೋಗಲಾಡಿಸುವ ನಿಟ್ಟನಲ್ಲಿ ಸ್ಪಷ್ಟನೆ ನೀಡಿದೆ.
 
ಬ್ಯಾಂಕಿಂಗ್ ಕ್ಷೇತ್ರ ಚೇತರಿಸಿಕೊಳ್ಳುತ್ತಿದೆ ಹಾಗೂ ಸ್ಥಿರವಾಗಿದೆ ಎಂದು ಆರ್ ಬಿಐ ಹೇಳಿದ್ದು, ಬ್ಯಾಂಕ್ ಗಳ ಬಗ್ಗೆ  ಕೇಂದ್ರ ಬ್ಯಾಂಕ್ ನಿರಂತರವಾಗಿ ಎಚ್ಚರಿಕೆಯಿಂದ ಇದೆ ಎಂದು ಹೇಳಿದೆ. 

ಷೇರು ಮಾರುಕಟ್ಟೆಯಲ್ಲಿ ಕುಸಿತ ಕಾಣುತ್ತಿರುವ ಉದ್ಯಮಿಯ ಸಮೂಹಕ್ಕೆ ಬ್ಯಾಂಕ್ ಗಳು ಸಾಲ ನೀಡಿರುವ ಹಿನ್ನೆಲೆಯಲ್ಲಿ ಆತಂಕ ಉಂಟಾಗಿರುವ ಬಗ್ಗೆ ವರದಿಗಳಿಗೆ ಪ್ರತಿಕ್ರಿಯೆ ನೀಡಿರುವ ಆರ್ ಬಿಐ, ತನ್ನ ಹೇಳಿಕೆಯಲ್ಲಿ ನಿರ್ದಿಷ್ಟವಾಗಿ ಅದಾನಿ ಸಮೂಹದ ಬಗ್ಗೆ ಉಲ್ಲೇಖಿಸಿಲ್ಲ. ಆದರೆ ಬ್ಯಾಂಕಿಂಗ್ ಕ್ಷೇತ್ರ ಚೇತರಿಸಿಕೊಳ್ಳುತ್ತಿದೆ ಹಾಗೂ ಸ್ಥಿರವಾಗಿದೆ ಬ್ಯಾಂಕ್ ಗಳ ಬಗ್ಗೆ  ಕೇಂದ್ರ ಬ್ಯಾಂಕ್ ನಿರಂತರವಾಗಿ ಎಚ್ಚರಿಕೆಯಿಂದ ಎಂದು ಹೇಳಿದೆ. 

ಅಮೇರಿಕಾದ ಹಿಂಡನ್ ಬರ್ಗ್ ಶಾರ್ಟ್ ಸೆಲ್ಲರ್ ನ ಸಂಶೋಧನಾ ವರದಿಯಲ್ಲಿ ಅದಾನಿ ಸಮೂಹ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಅಕ್ರಮಗಳಲ್ಲಿ ತೊಡಗಿದೆ ಎಂಬ ಆರೋಪ ಪ್ರಕಟವಾದ ಬೆನ್ನಲ್ಲೇ ಅದಾನಿ ಸಮೂಹದ ಸಂಸ್ಥೆಗಳ ಷೇರುಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com