ಸುಪ್ರೀಂಗೆ ದೊಡ್ಡ ಅಥವಾ ಸಣ್ಣ ಪ್ರಕರಣ ಅಂತ ಇಲ್ಲ, ಪ್ರತಿಯೊಂದು ಕೇಸ್ ಮುಖ್ಯ: ಸಿಜೆಐ ಚಂದ್ರಚೂಡ್
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಜಾಪ್ರಭುತ್ವಕ್ಕೆ ಸೇವೆ ಸಲ್ಲಿಸುತ್ತಿರುವ ಸುಪ್ರೀಂ ಕೋರ್ಟ್ ಗೆ ಯಾವುದೇ ದೊಡ್ಡ ಅಥವಾ ಸಣ್ಣ ಪ್ರಕರಣ ಅಂತ ಇಲ್ಲ. ಏಕೆಂದರೆ ಪ್ರತಿಯೊಂದು ಪ್ರಕರಣವೂ ಮುಖ್ಯವಾಗಿದೆ ಎಂದು...
Published: 04th February 2023 08:49 PM | Last Updated: 04th February 2023 08:49 PM | A+A A-

ಡಿವೈ ಚಂದ್ರಚೂಡ್
ನವದೆಹಲಿ: ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಜಾಪ್ರಭುತ್ವಕ್ಕೆ ಸೇವೆ ಸಲ್ಲಿಸುತ್ತಿರುವ ಸುಪ್ರೀಂ ಕೋರ್ಟ್ ಗೆ ಯಾವುದೇ ದೊಡ್ಡ ಅಥವಾ ಸಣ್ಣ ಪ್ರಕರಣ ಅಂತ ಇಲ್ಲ. ಏಕೆಂದರೆ ಪ್ರತಿಯೊಂದು ಪ್ರಕರಣವೂ ಮುಖ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಶನಿವಾರ ಹೇಳಿದ್ದಾರೆ.
ಭಾರತದ ಸುಪ್ರೀಂ ಕೋರ್ಟ್ ಸ್ಥಾಪನೆಯಾಗಿ 73 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ ಡಿವೈ ಚಂದ್ರಚೂಡ್, ಉನ್ನತ ನ್ಯಾಯಾಲಯವು ಸಾಂವಿಧಾನಿಕ ಕರ್ತವ್ಯಗಳು, ಕಟ್ಟುಪಾಡುಗಳು ಮತ್ತು ಕಾರ್ಯಗಳನ್ನು ನಿರ್ವಹಿಸುತ್ತದೆ ಎಂದು ಹೇಳಿದರು.
ಇದನ್ನು ಓದಿ: ಕೊಲಿಜಿಯಂ ಶಿಫಾರಸಿಗೆ ಕೇಂದ್ರ ಅಸ್ತು, ಸುಪ್ರೀಂ ಕೋರ್ಟ್‌ಗೆ ಐವರು ಹೊಸ ನ್ಯಾಯಾಧೀಶರ ನೇಮಕ
"ನ್ಯಾಯಾಲಯಕ್ಕೆ, ಯಾವುದೇ ದೊಡ್ಡ ಅಥವಾ ಸಣ್ಣ ಪ್ರಕರಣಗಳು ಅಂತ ಇಲ್ಲ. ಪ್ರತಿಯೊಂದು ಪ್ರಕರಣವೂ ಮುಖ್ಯವಾಗಿದೆ. ಏಕೆಂದರೆ ನಮ್ಮ ನಾಗರಿಕರನ್ನು ಒಳಗೊಂಡ ಸಣ್ಣ ಮತ್ತು ವಾಡಿಕೆಯ ವಿಷಯಗಳಲ್ಲಿ ಸಾಂವಿಧಾನಿಕ ಮತ್ತು ನ್ಯಾಯಶಾಸ್ತ್ರದ ಪ್ರಾಮುಖ್ಯತೆ ಇದೆ ಎಂದಿದ್ದಾರೆ.
ನಾಗರಿಕರ ಕುಂದುಕೊರತೆಗಳ ಬಗ್ಗೆ ವಿಚಾರಣೆ ನಡೆಸುವಾಗ ನ್ಯಾಯಾಲಯವು ಸರಳವಾದ ಸಾಂವಿಧಾನಿಕತೆಯನ್ನು ನಿರ್ವಹಿಸುತ್ತದೆ. ಸರಳ ಸಾಂವಿಧಾನಿಕ ಬಾಧ್ಯತೆ ಮತ್ತು ಸರಳ ಸಾಂವಿಧಾನಿಕ ಕಾರ್ಯವನ್ನು ಕೋರ್ಟ್ ನಿರ್ವಹಿಸುತ್ತದೆ ಎಂದು ಸಿಜೆಐ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಲಿಂಗ ಸಮಾನತೆಯ ಪ್ರಬಲ ಪ್ರತಿಪಾದಕನಾಗಿ ಹೊರಹೊಮ್ಮುತ್ತಿರುವುದು ಮಾತ್ರವಲ್ಲದೆ ಮಾನವ ಹಕ್ಕುಗಳ ಚೌಕಟ್ಟಿನೊಳಗೆ ಕ್ರಿಮಿನಲ್ ನ್ಯಾಯದ ಆಡಳಿತದ ಸಂಪರ್ಕವನ್ನು ಖಾತ್ರಿಪಡಿಸುತ್ತಿದೆ. ನಮ್ಮ ನ್ಯಾಯಾಲಯವು ಲಿಂಗ ಸಮಾನತೆಯ ಪ್ರಬಲ ಪ್ರತಿಪಾದಕನಾಗಿ ಹೊರಹೊಮ್ಮಿದೆ. ಉತ್ತರಾಧಿಕಾರದ ಕಾನೂನುಗಳ ವ್ಯಾಖ್ಯಾನ ಅಥವಾ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಪ್ರವೇಶವನ್ನು ಭದ್ರಪಡಿಸುವುದು. ಕ್ರಿಮಿನಲ್ ನ್ಯಾಯದ ಆಡಳಿತವು ಮಾನವ ಹಕ್ಕುಗಳ ಚೌಕಟ್ಟಿನಿಂದ ಬೇರ್ಪಟ್ಟಿಲ್ಲ ಎಂಬುದನ್ನು ನ್ಯಾಯಾಲಯ ಖಚಿತಪಡಿಸಿದೆ ಎಂದರು.