2022ರಲ್ಲಿ 63 ಪ್ರಯಾಣಿಕರು 'ನೋ ಫ್ಲೈ ಲಿಸ್ಟ್'ಗೆ ಸೇರ್ಪಡೆ: ವಿಮಾನಯಾನ ಸಚಿವಾಲಯ

ಈ ವರ್ಷ ಮೂವರು ಪ್ರಯಾಣಿಕರನ್ನು 'ನೊ ಫ್ಲೈ ಲಿಸ್ಟ್‌'ಗೆ ಸೇರಿಸಲಾಗಿದ್ದು, 2022ರಲ್ಲಿ ಒಟ್ಟು 63 ಪ್ರಯಾಣಿಕರನ್ನು ವಿಮಾನ ಪ್ರಯಾಣ ನಿಷೇಧ ಪಟ್ಟಿಗೆ ಸೇರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಈ ವರ್ಷ ಮೂವರು ಪ್ರಯಾಣಿಕರನ್ನು 'ನೋ ಫ್ಲೈ ಲಿಸ್ಟ್‌'ಗೆ ಸೇರಿಸಲಾಗಿದ್ದು, 2022ರಲ್ಲಿ ಒಟ್ಟು 63 ಪ್ರಯಾಣಿಕರನ್ನು ವಿಮಾನ ಪ್ರಯಾಣ ನಿಷೇಧ ಪಟ್ಟಿಗೆ ಸೇರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ ಹೇಳಿದೆ.

ವಿಮಾನಯಾನ ಸಚಿವಾಲಯ ಇಂದು ರಾಜ್ಯಸಭೆಗೆ ನೀಡಿದ ಅಂಕಿಅಂಶಗಳ ಪ್ರಕಾರ 2017 ರಿಂದ ಒಟ್ಟು 143 ಪ್ರಯಾಣಿಕರನ್ನು ನಿಷೇಧ ಪಟ್ಟಿಗೆ ಸೇರಿಸಲಾಗಿದೆ.

ಅಶಿಸ್ತು/ಅಡಚಣೆ ಉಂಟು ಮಾಡಿದ ಪ್ರಯಾಣಿಕರನ್ನು ವಿಮಾನಯಾನ ನಿಯಂತ್ರಕ ಡಿಜಿಸಿಎ ನಾಗರಿಕ ವಿಮಾನಯಾನ ಅಗತ್ಯತೆಗಳ(CAR) ಪ್ರಕಾರ ಏರ್‌ಲೈನ್ಸ್‌ನ ಆಂತರಿಕ ಸಮಿತಿ ಮಾಡುವ ಶಿಫಾರಸಿನ ಮೇಲೆ ಈ ಪ್ರಯಾಣಿಕರನ್ನು 'ನೋ ಫ್ಲೈ ಲಿಸ್ಟ್'ಗೆ ಸೇರಿಸಲಾಗುತ್ತದೆ.

"2017 ರಿಂದ ವಿಮಾನಯಾನ ಆಂತರಿಕ ಸಮಿತಿಯ ಶಿಫಾರಸಿನ ಮೇಲೆ ಇಲ್ಲಿಯವರೆಗೆ 143 ಪ್ರಯಾಣಿಕರನ್ನು ಒಂದು ನಿರ್ಧಿಷ್ಟ ಅವಧಿಗೆ 'ನೋ ಫ್ಲೈ ಲಿಸ್ಟ್'ಗೆ ಸೇರಿಸಲಾಗಿದೆ" ಎಂದು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ವಿ ಕೆ ಸಿಂಗ್ ರಾಜ್ಯಸಭೆಗೆ ಲಿಖಿತವಾಗಿ ತಿಳಿಸಿದ್ದಾರೆ. 

ಅಂಕಿಅಂಶಗಳ ಪ್ರಕಾರ, ಏರ್ ಇಂಡಿಯಾ 2023 ರಲ್ಲಿ ಮೂರು ಪ್ರಯಾಣಿಕರನ್ನು 'ನೊ ಫ್ಲೈ ಲಿಸ್ಟ್‌'ಗೆ ಸೇರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com