ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಲೋಕಸಭೆಯಲ್ಲಿ ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿದರು. ಯಾತ್ರೆ ವೇಳೆಯಲ್ಲಿ ಜನರ ಧ್ವನಿಯನ್ನು ನಾವು ಆಲಿಸಿದ್ದೇವೆ, ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರೊಂದಿಗೆ ಮಾತನಾಡಿರುವುದಾಗಿ ತಿಳಿಸಿದರು.
ಯುವ ಜನರ ಉದ್ಯೋಗದ ಬಗ್ಗೆ ಕೇಳಿದಾಗ, ಅನೇಕರು ಉದ್ಯೋಗವಿಲ್ಲ ಎಂದು ಹೇಳಿದರು ಪ್ರಧಾನ ಮಂತ್ರಿ ಭೀಮಾ ಯೋಜನೆಯಡಿ ಯಾವುದೇ ಆರ್ಥಿಕ ನೆರವು ಪಡೆಯುತ್ತಿಲ್ಲ ಎಂದು ಉಬರ್ ಚಾಲಕರು,ಕೃಷಿ ಭೂಮಿಯನ್ನು ಕಿತ್ತುಕೊಳ್ಳಲಾಗಿದೆ ಎಂದು ರೈತರು ಹೇಳಿದರು. ಬುಡಕಟ್ಟು ಬಿಲ್ ಕುರಿತು ಬುಡಕಟ್ಟು ಜನಾಂಗದವರೊಂದಿಗೆ ಮಾತುಕತೆ ನಡೆಸಿರುವುದಾಗಿ ರಾಹುಲ್ ಗಾಂಧಿ ಹೇಳಿದರು.
ಜನರು ಅಗ್ನಿವೀರ್ ಯೋಜನೆ ಬಗ್ಗೆಯೂ ಮಾತನಾಡಿದರು ಆದರೆ, 4 ವರ್ಷಗಳ ನಂತರ ಕೆಲಸ ಬಿಡುವಂತೆ ಹೇಳುತ್ತಿರುವ ಬಗ್ಗೆಯೂ ದೇಶದ ಯುವ ಜನತೆ ತಿಳಿಸಿದ್ದಾರೆ. ಅಗ್ನಿವೀರ್ ಯೋಜನೆ ಆರ್ ಎಸ್ ಎಸ್ ನಿಂದ ಬಂದಿದ್ದು, ಗೃಹ ಸಚಿವಾಲಯ, ಸೇನೆಯಿಂದ ಬಂದಿಲ್ಲ. ಅಂತವರಿಗೆ ಶಸಾಸ್ತ್ರ ತರಬೇತಿ ನೀಡಿ, ಮತ್ತೆ ಸಮಾಜಕ್ಕೆ ಹಿಂತಿರುಗಿ ಎಂದು ಹೇಳಲಾಗುತ್ತಿದೆ. ಇದು ಹಿಂಸಾಚಾರಕ್ಕೆ ಕಾರಣವಾಗುತ್ತದೆ ಎಂದು ನಿವೃತ್ತ ಹಿರಿಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿರುವುದಾಗಿ ರಾಹುಲ್ ಸದನಕ್ಕೆ ವಿವರಿಸಿದರು.
"ಅಗ್ನಿವೀರ್ ಯೋಜನೆಯು ಸೇನೆಯಿಂದ ಬಂದಿಲ್ಲ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಈ ಯೋಜನೆಯನ್ನು ಸೇನೆಯ ಮೇಲೆ ಒತ್ತಾಯಪೂರ್ವಕವಾಗಿ ಹೇರಿದ್ದಾರೆ ಎಂಬುದು ನಿವೃತ್ತ ಅಧಿಕಾರಿಗಳ ಮನಸಿನಲ್ಲಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.
Advertisement