ಶ್ರದ್ಧಾ ಕೊಲೆ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಸಿದ ದೆಹಲಿ ಪೊಲೀಸರು, ಹಲವರ ಜತೆ ಡೇಟಿಂಗ್ ನಡೆಸಿದ್ದ ಆರೋಪಿ
ತನ್ನ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಮುಂಬೈ ಮೂಲದ ಯುವತಿ ಶ್ರದ್ಧಾ ವಾಕರ್‌ನನ್ನು ಹತ್ಯೆ ಮಾಡಿದ ಆಫ್ತಾಬ್ ಪೂನಾವಾಲಾ ವಿರುದ್ಧ ದೆಹಲಿ ಪೊಲೀಸರು ಮಂಗಳವಾರ ಚಾರ್ಜ್‌ಶೀಟ್ ಸಲ್ಲಿಸಿದ್ದು, ಆರೋಪಿ ತನ್ನ ಪ್ರಿಯತಮೆಯ...
Published: 08th February 2023 01:09 AM | Last Updated: 08th February 2023 03:18 PM | A+A A-

ಶ್ರದ್ಧಾ ವಾಕರ್
ನವದೆಹಲಿ: ತನ್ನ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಮುಂಬೈ ಮೂಲದ ಯುವತಿ ಶ್ರದ್ಧಾ ವಾಕರ್‌ನನ್ನು ಹತ್ಯೆ ಮಾಡಿದ ಆಫ್ತಾಬ್ ಪೂನಾವಾಲಾ ವಿರುದ್ಧ ದೆಹಲಿ ಪೊಲೀಸರು ಮಂಗಳವಾರ ಚಾರ್ಜ್‌ಶೀಟ್ ಸಲ್ಲಿಸಿದ್ದು, ಆರೋಪಿ ತನ್ನ ಪ್ರಿಯತಮೆಯ ಶವವನ್ನು ಹೇಗೆ ವಿಲೇವಾರಿ ಮಾಡಿದ ಎಂಬ ವಿವರಗಳನ್ನು ಉಲ್ಲೇಖಿಸಲಾಗಿದೆ.
ದೆಹಲಿ ಪೊಲೀಸರು ಸಲ್ಲಿಸಿರುವ 6,636 ಪುಟಗಳ ಚಾರ್ಜ್‌ಶೀಟ್ ಪ್ರಕಾರ, ಪೂನಾವಾಲಾ ಶ್ರದ್ಧಾ ತಲೆ ಮತ್ತು ಮುಂಡವನ್ನು ಬ್ಲೋ ಟಾರ್ಚ್ ಬಳಸಿ ಸುಟ್ಟು ವಿರೂಪಗೊಳಿಸಿದ್ದಾನೆ. ಅಲ್ಲದೆ ಮಾರ್ಬಲ್ ಗ್ರೈಂಡರ್ ಬಳಸಿ ಆಕೆಯ ಮೂಳೆಗಳನ್ನು ಪುಡಿಪುಡಿ ಮಾಡಿದ್ದಾನೆ.
2022 ರ ನವೆಂಬರ್ 12 ರಂದು ಅಫ್ತಾಬ್ ನನ್ನು ಬಂಧಿಸಿದ 73 ದಿನಗಳ ನಂತರ ಇಂದು ಆರೋಪಪಟ್ಟಿ ಸಲ್ಲಿಸಲಾಗಿದ್ದು, ಆರೋಪಿ ಆ್ಯಪ್ ಮೂಲಕ ಹಲವು ಮಹಿಳೆಯರೊಂದಿಗೆ ಡೇಟಿಂಗ್ ನಡೆಸುತ್ತಿದ್ದ ಎಂದು ಹೇಳಲಾಗಿದೆ.
ಇದನ್ನು ಓದಿ: ಶ್ರದ್ಧಾ ಕೊಲೆ ಪ್ರಕರಣ: ಆರೋಪಿ ಅಫ್ತಾಬ್ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ
ಶ್ರದ್ಧಾಳ ದೇಹದ ಭಾಗಗಳು ಫ್ರಿಡ್ಜ್‌ನಲ್ಲಿರುವಾಗಲೇ ಮಹಿಳೆಯೊಬ್ಬರನ್ನು ಮನೆಗೆ ಕರೆತಂದಿದ್ದ ಆರೋಪಿ, ಆ ಭಾಗಗಳನ್ನು ಫ್ರಿಡ್ಜ್‌ನಿಂದ ತೆಗೆದು ಇತರ ಕಡೆ ಅಡಗಿಸಿಟ್ಟಿದ್ದ ಎಂದೂ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದಾರೆ.
ಇತರ ಮಹಿಳೆಯರೊಂದಿಗೆ ಸಂಬಂಧವಿರುವ ಬಗ್ಗೆ ಆಫ್ತಾಬ್‌ನನ್ನು ಶ್ರದ್ಧಾ ಪ್ರಶ್ನಿಸುತ್ತಿದ್ದಳು. ಇದರಿಂದ ಅವರಿಬ್ಬರ ಸಂಬಂಧ ಹಳಸಿತ್ತು. ಆಕೆಯ ಹತ್ಯೆ ಬಳಿಕ ಆಫ್ತಾಬ್ ‘ಬಂಬಲ್’ ಆ್ಯಪ್ ಮೂಲಕ ಹಲವು ಹುಡುಗಿಯರೊಂದಿಗೆ ಸಂಪರ್ಕಕ್ಕೆ ಬಂದಿದ್ದ. ಒಮ್ಮೆ ಮನೋರೋಗ ತಜ್ಞೆಯೊಬ್ಬರ ಸಂಪರ್ಕಕ್ಕೆ ಬಂದಿದ್ದ ಆತ, ಆಕೆಯನ್ನು ತನ್ನ ಫ್ಲ್ಯಾಟ್‌ಗೂ ಕರೆತಂದಿದ್ದ ಎಂದು ಹೇಳಲಾಗಿದೆ.