ರಾಜ್ಯಸಭೆ: ಕಡತದಿಂದ ಖರ್ಗೆ ಮಾತು ತೆಗೆದ ಸಭಾಪತಿ, ಕಾಂಗ್ರೆಸ್ ತೀವ್ರ ಆಕ್ಷೇಪ

ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಾತಿನ ಕೆಲ ಭಾಗವನ್ನು ಅಧಿಕೃತ ದಾಖಲೆಯಿಂದ ತೆಗೆದ ಸಭಾಪತಿ ಜಗದೀಪ್ ಧನ್ ಕರ್ ಅವರ ಕ್ರಮವನ್ನು ಪ್ರತಿಪಕ್ಷ ಕಾಂಗ್ರೆಸ್ ಗುರುವಾರ ಆಕ್ಷೇಪಿಸಿತು.
ರಾಜ್ಯಸಭಾ ಸಭಾಪತಿ ಜಗದೀಪ್ ಧನ್ ಕರ್
ರಾಜ್ಯಸಭಾ ಸಭಾಪತಿ ಜಗದೀಪ್ ಧನ್ ಕರ್

ನವದೆಹಲಿ: ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಾತಿನ ಕೆಲ ಭಾಗವನ್ನು ಅಧಿಕೃತ ದಾಖಲೆಯಿಂದ ತೆಗೆದ ಸಭಾಪತಿ ಜಗದೀಪ್ ಧನ್ ಕರ್ ಅವರ ಕ್ರಮವನ್ನು ಪ್ರತಿಪಕ್ಷ ಕಾಂಗ್ರೆಸ್ ಗುರುವಾರ ಆಕ್ಷೇಪಿಸಿತು. ಖರ್ಗೆ ಅವರು ಅಸಂಸದೀಯ ಪದ ಬಳಸಿಲ್ಲ , ಅವರು ಬಳಸಿರುವ ಪದವನ್ನು ಈ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡಾ ಬಳಸಿರುವುದಾಗಿ ಹೇಳಿತು. 

ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ, ಬುಧವಾರ ಖರ್ಗೆ ನೀಡಿದ್ದ ಹೇಳಿಕೆಯನ್ನು ಕಡತದಿಂದ ತೆಗೆದ ಸಭಾಪತಿಯ ಕ್ರಮವನ್ನು ಪ್ರಶ್ನಿಸಿದರು. ಈ ಹಿಂದೆ ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಮನ್ ಮೋಹನ್ ಸಿಂಗ್ ಕೂಡಾ ಈ ರೀತಿಯ ಹೇಳಿಕೆಯನ್ನು ಸದನದಲ್ಲಿ ನೀಡಿದ್ದು, ಅದು ಕಲಾಪದ ಭಾಗವಾಗಿ ಮುಂದುವರೆದಿದೆ ಎಂದರು. ಸದನದ ನಿಯಮಗಳಿಗೆ ವಿರುದ್ಧವಾಗಿ ಯಾವುದೇ ಅಸಂಸದೀಯ ಪದ ಅಥವಾ ಭಾಷೆಯನ್ನು ಬಳಸಿಲ್ಲ ಎಂದು ಖರ್ಗೆ ಹೇಳಿದರು.

ಅಸಂಸದೀಯ ಪದವನ್ನು ಸದನದಲ್ಲಿ ಬಳಸಬಾರದಿತ್ತು ಎಂದು ಧನಕರ್ ಖರ್ಗೆಗೆ ಹೇಳಿದರು. ಆದರೆ, ತಾವು ಬಳಸಿದ ಪದವನ್ನು ಈ ಹಿಂದೆ ಹಲವು ಬಾರಿ ಸದನದಲ್ಲಿ ಬಳಸಲಾಗಿದೆ. ವಾಜಪೇಯಿ, ಪಿ.ವಿ. ನರಸಿಂಹ ರಾವ್ ಕೂಡಾ ಬಳಸಿರುವುದಾಗಿ ಖರ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯ ವಿಪ್ ಜೈರಾಮ್ ರಮೇಶ್, ಮುಕುಲ್ ವಾಸ್ನಿಕ್, ಪ್ರಮೋದ್ ತಿವಾರಿ ಸೇರಿದಂತೆ ಹಲವು ಮಂದಿ ಈ ವಿಚಾರ ಕುರಿತು ಪ್ರಶ್ನಿಸಿದರು.  ಕಾಂಗ್ರೆಸ್ ಸಂಸದರ ಬೇಡಿಕೆಗೆ ಮಣಿಯದ ಧನಕರ್, ಈ ಸಂಬಂಧ ಈಗಾಗಲೇ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com