3 ಈಡಿಯಟ್ಸ್ ಸಿನಿಮಾದಿಂದ ಪ್ರೇರಣೆ: ವಾಟ್ಸ್ ಆಪ್ ಆಡಿಯೋ ಕರೆ ಮೂಲಕ ವೈದ್ಯರ ಮಾರ್ಗದರ್ಶನದಲ್ಲಿ ಮಹಿಳೆಗೆ ಹೆರಿಗೆ

ಕೆಲವೊಮ್ಮೆ ಸಿನಿಮಾದ ದೃಶ್ಯಗಳೂ ನಿಜ ಜೀವನದಲ್ಲಿ ನಡೆಯುವುದುಂಟು. ಅಂಥದ್ದೇ ಒಂದು ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ. 
ವಾಟ್ಸ್ ಆಪ್ ಆಡಿಯೋ ಕರೆ ಮೂಲಕ ವೈದ್ಯರ ಮಾರ್ಗದರ್ಶನದಲ್ಲಿ ಮಹಿಳೆಗೆ ಹೆರಿಗೆ
ವಾಟ್ಸ್ ಆಪ್ ಆಡಿಯೋ ಕರೆ ಮೂಲಕ ವೈದ್ಯರ ಮಾರ್ಗದರ್ಶನದಲ್ಲಿ ಮಹಿಳೆಗೆ ಹೆರಿಗೆ

ಶ್ರೀನಗರ: ಕೆಲವೊಮ್ಮೆ ಸಿನಿಮಾದ ದೃಶ್ಯಗಳೂ ನಿಜ ಜೀವನದಲ್ಲಿ ನಡೆಯುವುದುಂಟು. ಅಂಥದ್ದೇ ಒಂದು ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ.
 
ವಿಪರೀತ ಹಿಮಪಾತದ ಪರಿಣಾಮ ರಸ್ತೆ ಮೂಲಕ ಪ್ರಯಾಣಿಸಲು ಸಾಧ್ಯವಾಗದೇ, ಕೆಟ್ಟ ಹವಾಮಾನದ ಪರಿಣಾಮ ಏರ್ ಲಿಫ್ಟ್ ಮಾಡುವುದಕ್ಕೂ ಅವಕಾಶ ಸಿಗದೆ, ಎಲ್ಒ ಸಿ ಬಳಿ ಇರುವ ಕೆರಾನ್ ವಲಯದಲ್ಲಿ ವೈದ್ಯರು ಬಾಲಿವುಡ್ ಸಿನಿಮಾ '3 ಈಡಿಯಟ್ಸ್' ನಿಂದ ಪ್ರೇರಣೆ ಪಡೆದು ವಾಟ್ಸ್ ಆಪ್ ಆಡಿಯೋ ಕರೆ ಮೂಲಕ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಿದ್ದಾರೆ. 

ಕ್ರಲ್ಪೋರಾದ ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ. ಮಿರ್ ಶಫಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿ, ಕೆರಾನ್ ವಲಯದ ಕಲ್ಲಸ್ ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.

ಕೆರಾನ್ ನಲ್ಲಿ ಮೇಲ್ಭಾಗದಲ್ಲಿ ತೀವ್ರ ಹಿಮಪಾತವಾಗುತ್ತಿರುವುದರಿಂದ 45 ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸುವುದಕ್ಕೆ ಸಾಧ್ಯವಾಗಲಿಲ್ಲ. ಅದು ಆ ಮಹಿಳೆಗೆ 2ನೇ ಮಗುವಾಗಿದ್ದು, ಮೊದಲ ಮಗುವಿನ ಪ್ರಸವದ ವೇಳೆ ಮಹಿಳೆ ಬಹಳ ಸಮಸ್ಯೆ ಎದುರಿಸಿದ್ದರು.

ಮಹಿಳೆಯನ್ನು ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ಆಕೆಯ ರಕ್ತದ ಒತ್ತಡ ಹೆಚ್ಚಾಗಿತ್ತು ಇಂತಹ ಪರಿಸ್ಥಿತಿಯಲ್ಲಿ ಆಕೆಯನ್ನು ಹೆಚ್ಚಿನ ಸೌಲಭ್ಯವಿರುವ ಆಸ್ಪತ್ರೆಗೆ ಕಳಿಸುವುದು ಅಗತ್ಯವಾಗಿದ್ದು, ಪ್ರತಿಕೂಲ ಹವಾಮಾನದ ಪರಿಣಾಮ ಆಕೆಯನ್ನು ರಸ್ತೆ ಮೂಲಕವಾಗಲೀ ಅಥವಾ ಏರ್ ಲಿಫ್ಟ್ ಮಾಡುವುದಕ್ಕಾಗಲೀ ಸಾಧ್ಯವಿರಲಿಲ್ಲ.

ಆಗ ಬಿಎಂಒ, ಅಮೀರ್ ಖಾನ್ ಅವರ ಬಾಲಿವುಡ್ ಸಿನಿಮಾ '3 ಈಡಿಯಟ್ಸ್' ನ ದೃಶ್ಯದಿಂದ ಪ್ರೇರಣೆ ಪಡೆದು ಹೆರಿಗೆಗಾಗಿ ಪರ್ಯಾಯ ಸುರಕ್ಷತಾ ಮಾರ್ಗವನ್ನು ಅನುಸರಿಸಿದರು. ಮಾಹಿತಿ ತಂತ್ರಜ್ಞಾನ ಬಳಕೆ ಮಾಡಿ ಹೆರಿಗೆ ಮಾಡಿಸಬೇಕೆಂಬುದು ತೋಚಿತು ಎಂದಿರುವ ಬಿಎಂಒ, ಮಹಿಳೆಯನ್ನು ದಾಖಲಿಸಿದ್ದ ಆರೋಗ್ಯ ಸೌಲಭ್ಯ ಕೇಂದ್ರದಲ್ಲಿ VSAT ಲಭ್ಯವಿತ್ತು. ಅಲ್ಲಿನ ವೈದ್ಯರು ಅರೆವೈದ್ಯಕೀಯ ಸಿಬ್ಬಂದಿ ಡಾ.ಮಿರ್ ಅವರೊಂದಿಗೆ ಸಂಪರ್ಕದಲ್ಲಿದ್ದರು. ಅವರು ಕ್ರಲಾಪೋರಾದ ಉಪಜಿಲ್ಲಾ ಆಸ್ಪತ್ರೆ (ಎಸ್ ಡಿಹೆಚ್) ನ  ಪ್ರಸೂತಿ ತಜ್ಞರಾಗಿದ್ದ ಡಾ.ಪರ್ವೇಜ್ ಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿ ವಾಟ್ಸ್ ಆಪ್ ಕರೆ ಮೂಲಕ ಸಲಹೆ ನೀಡುವ ಮೂಲಕ ಹೆರಿಗೆ ಮಾಡಿಸಬೇಕೆಂದು ಹೇಳಿದರು. ಸಲಹೆ ಸೂಚನೆಗಳನ್ನು ಪಾಲಿಸುವ ಮೂಲಕ ಹೆರಿಗೆ ಯಶಸ್ವಿಯಾಗಿ ಆಯಿತು, ಹೆಣ್ಣು ಮಗುವೆ ಮಹಿಳೆ ಜನ್ಮ ನೀಡಿದ್ದಾರೆ ಎಂದು ಬಿಎಂಒ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com