ನಮ್ಮ ಸಂಬಳ ಕೊಡಿ, ಕಾಶ್ಮೀರಕ್ಕೆ ಮರಳುವಂತೆ ಒತ್ತಾಯಿಸಬೇಡಿ: ಸರ್ಕಾರಕ್ಕೆ ಪಂಡಿತ ನೌಕರರ ಒತ್ತಾಯ

ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಬಾಕಿ ವೇತನ ಬಿಡುಗಡೆ ಮಾಡುವಂತೆ ಮುಷ್ಕರ ನಿರತ ಪಿಎಂ ಪ್ಯಾಕೇಜ್ ಕಾಶ್ಮೀರಿ ಪಂಡಿತ ನೌಕರರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಭದ್ರತೆಯ ದೃಷ್ಟಿಯಿಂದ ಕಾಶ್ಮೀರಕ್ಕೆ ಮರಳುವಂತೆ ಒತ್ತಾಯಿಸಬೇಡಿ ಎಂದೂ ಅವರು ಮನವಿ ಮಾಡಿದ್ದಾರೆ.
ಕಾಶ್ಮೀರಿ ಪಂಡಿತ ನೌಕರರ ಪ್ರತಿಭಟನೆ
ಕಾಶ್ಮೀರಿ ಪಂಡಿತ ನೌಕರರ ಪ್ರತಿಭಟನೆ

ಶ್ರೀನಗರ: ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಬಾಕಿ ವೇತನ ಬಿಡುಗಡೆ ಮಾಡುವಂತೆ ಮುಷ್ಕರ ನಿರತ ಪಿಎಂ ಪ್ಯಾಕೇಜ್ ಕಾಶ್ಮೀರಿ ಪಂಡಿತ ನೌಕರರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಭದ್ರತೆಯ ದೃಷ್ಟಿಯಿಂದ ಕಾಶ್ಮೀರಕ್ಕೆ ಮರಳುವಂತೆ ಒತ್ತಾಯಿಸಬೇಡಿ ಎಂದೂ ಅವರು ಮನವಿ ಮಾಡಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ನಮ್ಮ ಸಂಬಳವನ್ನು ನಿಲ್ಲಿಸಲಾಗಿದೆ. ಮಹಾ ಶಿವರಾತ್ರಿಯಂದು ನಮ್ಮ ಬಾಕಿ ಇರುವ ಸಂಬಳವನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಕಾಶ್ಮೀರದ ನೌಕರರ ಸಂಘದ ಅಧ್ಯಕ್ಷ ರೂಬೊನ್ ಸಪ್ರು ಹೇಳಿದ್ದಾರೆ.

ಕಣಿವೆಯಲ್ಲಿ ತಮ್ಮ ಕೆಲಸವನ್ನು ಪುನರಾರಂಭಿಸಿದ ಪಿಎಂ ಪ್ಯಾಕೇಜ್ ಪಂಡಿತ ನೌಕರರ ವೇತನವನ್ನು ಬಿಡುಗಡೆ ಮಾಡುವಂತೆ ಆಡಳಿತವು ಇತ್ತೀಚೆಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಅವರ ಬಾಕಿ ವೇತನ ಬಿಡುಗಡೆಗೆ ಸರ್ಕಾರ ಯಾವುದೇ ಷರತ್ತುಗಳನ್ನು ಹಾಕಬಾರದು ಎಂದು ಸಪ್ರು ಹೇಳಿದರು. "ಪ್ರಧಾನಿ ಪ್ಯಾಕೇಜ್‌ನ ಎಲ್ಲಾ ಉದ್ಯೋಗಿಗಳು ತಮ್ಮ ಸಂಬಳವನ್ನು ಪಡೆಯುವುದನ್ನು ಆಡಳಿತವು ಖಚಿತಪಡಿಸಿಕೊಳ್ಳಬೇಕು ಇದರಿಂದ ಅವರು ತಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಪ್ರದಾಯಗಳ ಪ್ರಕಾರ ಮಹಾಶಿವರಾತ್ರಿಯನ್ನು ಆಚರಿಸಬಹುದು ಎಂದು ಹೇಳಿದರು.

ಕಳೆದ ವರ್ಷ ಮೇ 12ರಂದು ಕಾಶ್ಮೀರದಲ್ಲಿ ಪಂಡಿತ್ ಉದ್ಯೋಗಿ ರಾಹುಲ್ ಭಟ್ ಅವರನ್ನು ಭಯೋತ್ಪಾದಕರು ಕೊಂದ ನಂತರ ಸುಮಾರು 5000 ಪಿಎಂ ಪ್ಯಾಕೇಜ್ ಪಂಡಿತ ನೌಕರರು ಮುಷ್ಕರ ನಡೆಸಿದರು. ಪಿಎಂ ಪ್ಯಾಕೇಜ್ ಉದ್ಯೋಗಿಗಳಲ್ಲಿ ಹೆಚ್ಚಿನವರು ಹತ್ಯೆಯ ನಂತರ ಕಣಿವೆಯನ್ನು ತೊರೆದಿದ್ದು  ಜಮ್ಮುವಿನಲ್ಲಿ ಪ್ರತಿದಿನ ಪ್ರತಿಭಟನೆ ನಡೆಸುತ್ತಿದ್ದಾರೆ. ಆದಾಗ್ಯೂ, ಅವರಲ್ಲಿ ಹಲವರು ತಮ್ಮ ಕರ್ತವ್ಯವನ್ನು ಪುನರಾರಂಭಿಸಲು ಕಣಿವೆಗೆ ಮರಳಿದ್ದಾರೆ.

ಪಂಡಿತ ನೌಕರರು ನಿನ್ನೆ ಜಮ್ಮುವಿನ ಪ್ರೆಸ್ ಕ್ಲಬ್‌ನಲ್ಲಿ ಪ್ರತಿಭಟನೆಗೆ ಯೋಜಿಸಿತ್ತು. ಆದರೆ ಆಡಳಿತವು ಪ್ರತಿಭಟನೆಯನ್ನು ತಡೆಯಲು ಪ್ರದೇಶದ ಸುತ್ತಲೂ ಸೆಕ್ಷನ್ 144 ಅನ್ನು ಜಾರಿಗೊಳಿಸಿತು. ನಂತರ ಪಂಡಿತ್ ಕಾರ್ಯಕರ್ತರು ಜಮ್ಮುವಿನ ಬಿಜೆಪಿ ಕಚೇರಿ ಬಳಿ ಧರಣಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com