ಚುನಾವಣೆ ಎದುರಿಸುತ್ತಿರುವ ಈಶಾನ್ಯ ರಾಜ್ಯಗಳಲ್ಲಿ 148 ಕೋಟಿ ರೂಪಾಯಿ ವಶಕ್ಕೆ

ಚುನಾವಣೆ ಎದುರಿಸುತ್ತಿರುವ ಮೂರು ಈಶಾನ್ಯ ರಾಜ್ಯಗಳಲ್ಲಿ- ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯದಲ್ಲಿ ದಾಖಲೆಯ ಪ್ರಮಾಣದ ಅಕ್ರಮ ವಸ್ತು, ನಗದುಗಳನ್ನು ವಶಕ್ಕೆ ಪಡೆಯಲಾಗಿದೆ. 
ಮತದಾನ (ಸಂಗ್ರಹ ಚಿತ್ರ)
ಮತದಾನ (ಸಂಗ್ರಹ ಚಿತ್ರ)

ನವದೆಹಲಿ: ಚುನಾವಣೆ ಎದುರಿಸುತ್ತಿರುವ ಮೂರು ಈಶಾನ್ಯ ರಾಜ್ಯಗಳಲ್ಲಿ- ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯದಲ್ಲಿ ದಾಖಲೆಯ ಪ್ರಮಾಣದ ಅಕ್ರಮ ವಸ್ತು, ನಗದುಗಳನ್ನು ವಶಕ್ಕೆ ಪಡೆಯಲಾಗಿದೆ. 

ಸುಮಾರು 147.84 ಕೋಟಿ ರೂಪಾಯಿ ಮೌಲ್ಯದ ಮದ್ಯ, ಡ್ರಗ್ಸ್, ಅಮೂಲ್ಯ ಲೋಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾ ಆಯೋಗ ಗುರುವಾರ ತಿಳಿಸಿದೆ.

ಮೂರು ರಾಜ್ಯಗಳಲ್ಲಿ ಚುನಾವಣಾ ಖರ್ಚು ವೆಚ್ಚಗಳ ಮೇಲೆ ನಿಗಾ ಇಡಲಾಗಿದೆ. 2018 ರಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ವಶಕ್ಕೆ ಪಡೆಯಲಾಗಿದ್ದ ಮೊತ್ತಕ್ಕಿಂತ ಈ ಬಾರಿ ವಶಕ್ಕೆ ಪಡೆದ ಮೊತ್ತ 20 ಪಟ್ಟು ಹೆಚ್ಚಾಗಿದೆ ಎಂದು ಆಯೋಗ ಹೇಳಿದೆ.

ಧಲೈ ಜಿಲ್ಲೆಯಲ್ಲಿ 10.58 ಕೋಟಿ ರೂಪಾಯಿ ಮೌಲ್ಯದ 3.52 ಕೆ.ಜಿ ಹೆರಾಯಿನ್ ಇದ್ದು, ಮೇಘಾಲಯದ ಈಸ್ಟ್ ಖಸಿ ಹಿಲ್ಸ್ ಜಿಲ್ಲೆಯಲ್ಲಿ 2.447 ಕೆ.ಜಿ ಹೆರಾಯಿನ್ ನ್ನು ಹಾಗೂ ನಾಗಾಲ್ಯಾಂಡ್ ನ ಚುಮೌಕೆದಿಮಾ ಜಿಲ್ಲೆಯಲ್ಲಿ 2.27 ಕೆಜಿ ಹೆರಾಯಿನ್ ನ್ನು ವಶಕ್ಕೆ ಪಡೆಯಲಾಗಿದೆ.

ತ್ರಿಪುರಾದ ಮತದಾರರು ಇಂದು ಮತಚಲಾಯಿಸಿದ್ದು, ಮಾ.2 ರಂದು ಮತ ಎಣಿಕೆ ನಡೆಯಲಿದೆ. ಈ ವರ್ಷ ಚುನಾವಣೆ ಎದುರಿಸುತ್ತಿರುವ ಮೊದಲ ರಾಜ್ಯ ತ್ರಿಪುರಾ ಆಗಿದೆ. ಫೆ.27 ರಂದು ನಾಗಾಲ್ಯಾಂಡ್, ಮೇಘಾಲಯ ರಾಜ್ಯಗಳು ಚುನಾವಣೆ ಎದುರಿಸಲಿವೆ. ಈ ವರ್ಷ 5 ರಾಜ್ಯಗಳ ವಿಧಾನಸಭಾ ಚುನಾವಣೆ ಇದ್ದು, 2024 ಕ್ಕೆ ಲೋಕಸಭಾ ಚುನಾವಣೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com