ಮೇಘಾಲಯ: ಬಿಜೆಪಿಗೆ ಎಲ್ಲಾ ವೋಟ್, ಇವಿಎಂ ವಿಡಿಯೋ ಶೇರ್ ಮಾಡಿದ ವ್ಯಕ್ತಿಯ ಬಂಧನ
ವಿದ್ಯುನ್ಮಾನ ಮತ ಯಂತ್ರದ ಯಾವುದೇ ಬಟನ್ ಒತ್ತಿದ್ದರೂ ಬಿಜೆಪಿಗೆ ಮತ ಹೋಗುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಮೇಘಾಲಯದ ಪಶ್ಚಿಮ ಗಾರೊ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಎಫ್ ಆರ್ ಖಾರ್ಕೊಂಗಾರ್ ಶನಿವಾರ ಹೇಳಿದ್ದಾರೆ.
Published: 18th February 2023 09:50 PM | Last Updated: 18th February 2023 09:50 PM | A+A A-

ಸಾಂದರ್ಭಿಕ ಚಿತ್ರ
ಶಿಲ್ಲಾಂಗ್: ವಿದ್ಯುನ್ಮಾನ ಮತ ಯಂತ್ರದ ಯಾವುದೇ ಬಟನ್ ಒತ್ತಿದ್ದರೂ ಬಿಜೆಪಿಗೆ ಮತ ಹೋಗುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಮೇಘಾಲಯದ ಪಶ್ಚಿಮ ಗಾರೊ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಎಫ್ ಆರ್ ಖಾರ್ಕೊಂಗಾರ್ ಶನಿವಾರ ಹೇಳಿದ್ದಾರೆ.
ಬಂಧಿತ ವ್ಯಕ್ತಿಯನ್ನು ಬೊಲೊಂಗ್ ಆರ್ ಸಗ್ಮಾ ಎಂದು ಗುರುತಿಸಲಾಗಿದೆ. ಈತ ಇವಿಎಂ ತಿರುಚಿಸಲಾಗಿದೆ ಎಂದು ಆರೋಪಿಸಿ ಫೆಬ್ರವರಿ 16 ರಂದು ವಿಡಿಯೋವನ್ನು ಹಂಚಿಕೊಂಡಿದ್ದ.
ರೊಂಗ್ ಜಿಂಗ್ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಪೊಲೀಸ್ ದೂರು ದಾಖಲಿಸಿದ ನಂತರ ಸಗ್ಮಾನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಚುನಾವಣೆಗೆ ಸಂಬಂಧಿಸಿದ ಸುಳ್ಳು ಹೇಳಿಕೆಯೊಂದಿಗೆ ಐಪಿಸಿ ಸೆ7ನ್ 171 ಜಿ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
ಒಂದು ವೇಳೆ ಇವಿಎಂ ಅಥವಾ ವಿದ್ಯುನ್ಮಾನ ಮತಯಂತ್ರಗಳಿಗೆ ಪ್ರತಿ ಹಂತದಲ್ಲೂ ಹಲವಾರು ರಕ್ಷಣೋಪಾಯಗಳು ಇರುತ್ತವೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.