ಮುಸ್ಲಿಂ ವಿದ್ಯಾರ್ಥಿಗಳು ಗಡ್ಡ ಟ್ರಿಮ್, ಶೇವಿಂಗ್ ಮಾಡುವುದರ ವಿರುದ್ಧ ದರ್-ಉಲ್-ಉಲೂಮ್ ಫತ್ವಾ 

ದಿಯೋಬಂದ್ ನಲ್ಲಿರುವ ಏಷ್ಯಾದ ಅತಿ ದೊಡ್ಡ ಇಸ್ಲಾಮಿಕ್ ಸಂಘಟನೆ, ದರ್-ಉಲ್-ಉಲೂಮ್ ಮುಸ್ಲಿಮ್ ವಿದ್ಯಾರ್ಥಿಗಳು ಗಡ್ಡ ಟ್ರಿಮ್ ಮಾಡುವುದು, ಶೇವಿಂಗ್ ಮಾಡುವುದರ ವಿರುದ್ಧ ಫತ್ವ ಹೊರಡಿಸಿದೆ.
ಗಡ್ಡ (ಸಾಂಕೇತಿಕ ಚಿತ್ರ)
ಗಡ್ಡ (ಸಾಂಕೇತಿಕ ಚಿತ್ರ)

ಲಖನೌ: ದಿಯೋಬಂದ್ ನಲ್ಲಿರುವ ಏಷ್ಯಾದ ಅತಿ ದೊಡ್ಡ ಇಸ್ಲಾಮಿಕ್ ಸಂಘಟನೆ, ದರ್-ಉಲ್-ಉಲೂಮ್ ಮುಸ್ಲಿಮ್ ವಿದ್ಯಾರ್ಥಿಗಳು ಗಡ್ಡ ಟ್ರಿಮ್ ಮಾಡುವುದು, ಶೇವಿಂಗ್ ಮಾಡುವುದರ ವಿರುದ್ಧ ಫತ್ವ ಹೊರಡಿಸಿದೆ.

ಇಸ್ಲಾಮಿಕ್ ಸಂಸ್ಥೆ ಬಿಡುಗಡೆ ಮಾಡಿರುವ ನೋಟಿಸ್ ನಲ್ಲಿ ಫತ್ವಾ ಉಲ್ಲಂಘನೆ ಮಾಡಿದವರನ್ನು ಸಂಸ್ಥೆಯಿಂದ ಹೊರ ಹಾಕುವುದಾಗಿ ಎಚ್ಚರಿಕೆ ನೀಡಿದೆ.
 
ಮೂಲಗಳ ಪ್ರಕಾರ ನೋಟಿಸ್ ನ್ನು ಸಂಸ್ಥೆಯ ಶಿಕ್ಷಣ ವಿಭಾಗದ ಉಸ್ತುವಾರಿ ಮೌಲಾನಾ ಹುಸೇನ್ ಅಹ್ಮದ್ ಹರಿದ್ವಾರಿ ನೀಡಿದ್ದು, ಗಡ್ಡ ಟ್ರಿಮ್ ಮಾಡುವುದು, ತೆಗೆಯುವುದನ್ನು ಇಸ್ಲಾಮ್ ಗೆ ವಿರುದ್ಧ ಎಂದು ಹೇಳಿದ್ದು, ಈ ರೀತಿಯ ನಡೆಯನ್ನು ತಪ್ಪಿಸಬೇಕು ಅಥವಾ ಕ್ರಮ ಎದುರಿಸಲು ಸಿದ್ಧರಿರಬೇಕು ಎಂದು ನೊಟೀಸ್ ನಲ್ಲಿ ತಿಳಿಸಲಾಗಿದೆ.
 
ಗಡ್ಡ ತೆಗೆದು ವಿವಿ ಕ್ಯಾಂಪಸ್ ನ್ನು ಯಾರಾದರೂ ಪ್ರವೇಶಿಸಲು ಯತ್ನಿಸಿದರೆ, ಅಂತಹವರಿಗೆ ಪ್ರವೇಶ ನೀಡಲಾಗುವುದಿಲ್ಲ, ಅಶಿಸ್ತನ್ನು ಸಹಿಸುವುದಿಲ್ಲ ಎಂದು ಫತ್ವಾದಲ್ಲಿ ತಿಳಿಸಲಾಗಿದೆ.

ಗಡ್ಡ ತೆಗೆದದ್ದಕ್ಕೆ ಫೆ.06 ರಂದು ದರ್-ಉಲ್-ಉಲೂಮ್ ದಿಯೋಬಂದ್ ನ ಕೆಲವು ವಿದ್ಯಾರ್ಥಿಯೋರ್ವನನ್ನು ತೆಗೆದುಹಾಕಲಾಗಿತ್ತು, ಆ ಬಳಿಕ ಆತ ಕ್ಷಮೆ ಯಾಚಿಸಿದ್ದ ಎಂದು ಸಂಸ್ಥೆ ತಿಳಿಸಿದೆ.
 
ಫತ್ವಾವನ್ನು ಸ್ವಾಗತಿಸಿರುವ ಮಾಜಿ ವಿದ್ಯಾರ್ಥಿ, ಮೌಲಾನಾ ಮುಫ್ತಿ ಅಸಾದ್ ಕಾಸ್ಮಿ ಹಜರತ್ ಮೊಹಮ್ಮದ್ ಸಾಹೀಬ್ ಒಪ್ಪಿಕೊಂಡಿದ್ದೆಲ್ಲವೂ ಸುನ್ನತ್ ದೇ ಆಗಿದೆ. ಪ್ರತಿ ಮುಸ್ಲಿಮ್ ಸಹ ಸುನ್ನತ್ ಹಾಗೂ ಶರಿಯಾ ತತ್ವಗಳನ್ನು ಒಪ್ಪಿಕೊಳ್ಳುವ ಮೂಲಕ ಜೀವನ ನಡೆಸಲು ಪ್ರಾರಂಭಿಸಬೇಕು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com