ಗಾಂಧಿ ಕುಟುಂಬವಿಲ್ಲದೆ ಮೊದಲ ಬಾರಿಗೆ ಕಾಂಗ್ರೆಸ್‌ ಮಹಾಧಿವೇಶನ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಸಂಪೂರ್ಣ ಸ್ವಾತಂತ್ರ್ಯ

ಛತ್ತೀಸ್‌ಗಡದ ರಾಯ್ಪುರದಲ್ಲಿ ಇಂದು ನಡೆಯುವ ಕಾಂಗ್ರೆಸ್ ನ ಹಾಥ್‌ ಸೇ ಹಾಥ್‌ ಜೋಡೋ ಅಧಿವೇಶನದ ಪ್ರಮುಖ ಸಭೆಗೆ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಗ ರಾಹುಲ್ ಗಾಂಧಿ ಮತ್ತು ಮಗಳು ಪ್ರಿಯಾಂಕಾ ಗಾಂಧಿ ಗೈರಾಗಲಿದ್ದಾರೆ.
ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜನ ಖರ್ಗೆ
ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜನ ಖರ್ಗೆ

ನವದೆಹಲಿ: ಛತ್ತೀಸ್‌ಗಡದ ರಾಯ್ಪುರದಲ್ಲಿ ಇಂದು ನಡೆಯುವ ಕಾಂಗ್ರೆಸ್ ನ ಹಾಥ್‌ ಸೇ ಹಾಥ್‌ ಜೋಡೋ ಅಧಿವೇಶನದ ಪ್ರಮುಖ ಸಭೆಗೆ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಗ ರಾಹುಲ್ ಗಾಂಧಿ ಮತ್ತು ಮಗಳು ಪ್ರಿಯಾಂಕಾ ಗಾಂಧಿ ಗೈರಾಗಲಿದ್ದಾರೆ ಎಂದು ವರದಿಯಾಗಿದೆ.

ಕಾಂಗ್ರೆಸ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಪೂರ್ಣ ಸ್ವಾತಂತ್ಯ ನೀಡುವ ಉದ್ದೇಶದಿಂದ ಗಾಂಧಿ ಕುಟುಂಬ ಈ ನಿರ್ಧಾರ ಮಾಡಿದೆ ಎನ್ನಲಾಗಿದೆ. ಆದಾಗ್ಯೂ ಸಮಾವೇಶದ ಉಳಿದ ಭಾಗಕ್ಕೆ ಹಾಜರಾಗುತ್ತಾರೆ. ಇದರಲ್ಲಿ ಮುಂದಿನ ವರ್ಷದ ಚುನಾವಣೆಗೆ ತಯಾರಿಯ ಬಗ್ಗೆ ಚರ್ಚೆ ಮಾಡಲಾಗುತ್ತದೆ.

ಮೂರು ದಿನಗಳ ಕಾಂಗ್ರೆಸ್‌ ಮಹಾಧಿವೇಶನ ಇಂದಿನಿಂದ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಆರಂಭವಾಗಲಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷದ ಕಾರ್ಯತಂತ್ರ ರೂಪಿಸುವ ಪ್ರಮುಖ ಸಭೆಯಾಗಿರುವ ಮಹಾಧಿವೇಶನದಲ್ಲಿ ಪಕ್ಷದ ಪ್ರಮುಖ ಕಾರ್ಯಕಾರಿ ಸಮಿತಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ.

ಮೂಲಗಳ ಪ್ರಕಾರ, ಕಾಂಗ್ರೆಸ್‌ನ ನೂತನ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಗಾಂಧಿ ಕುಟುಂಬ ಈ ತೀರ್ಮಾನ ಮಾಡಿದೆ ಎನ್ನಲಾಗಿದ್ದು, ಮೊದಲ ದಿನದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸುತ್ತಿಲ್ಲ.

2024ರ ಲೋಕಸಭೆ ಚುನಾವಣೆಯ ಸಿದ್ಧತೆಗಳು ಹೇಗೆ, ಪ್ರಕಾಚರ ಕಾರ್ಯಗಳು ಹೇಗಿರಬೇಕು ಎಎನ್ನುವ ಸಭೆಯಲ್ಲಿ ಕಾಂಧಿ ಕುಟುಂಬ ಭಾಗವಹಿಸಲಿದೆ ಎಂದು ಹೇಳಲಾಗಿದೆ. ಸತತ ಚುನಾವಣೆಗಳ ಸೋಲು, ಪಕ್ಷದಲ್ಲಿ ಮೂಲದಿಂದಲೇ ಬದಲಾವಣೆಯಾಗಬೇಕು ಎನ್ನುವ ಆಂತರಿಕ ಗುದ್ದಾಟ, ಹಿರಿಯ ಕಾಂಗ್ರೆಸ್‌ ನಾಯಕರು ಪಕ್ಷವನ್ನು ತೊರೆದ ಬಳಿಕ 137 ವರ್ಷಗಳ ಇತಿಹಾಸ ಹೊಂದಿರುವ ಪಕ್ಷದ ಅಧ್ಯಕ್ಷತೆಯನ್ನು ಕಳೆದ ಅಕ್ಟೋಬರ್‌ನಲ್ಲಿ ಪಕ್ಷ ನಿಷ್ಠ ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ ಹಸ್ತಾಂತರ ಮಾಡಿದ್ದರು. ಹಾಗಿದ್ದರೂ ವಿರೋಧ ಪಕ್ಷಗಳು ಮಾತ್ರ ಈಗಲೂ ಕಾಂಗ್ರೆಸ್‌ ಪಕ್ಷದ ಮೇಲೆ ಗಾಂಧಿ ಕುಟುಂಬದ ಹಿಡಿತ ಗಟ್ಟಿಯಾಗಿಯೇ ಇದೆ ಎಂದು ಆರೋಪಿಸಿವೆ.

ಗಾಂಧಿ ಕುಟುಂಬ ಹಾಜರಾಗದೇ ಇರುವ ಸ್ಟೀರಿಂಗ್ ಕಮಿಟಿ ಸಭೆಯಲ್ಲಿ, ಕಾಂಗ್ರೆಸ್ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವವನ್ನು ಅನುಮೋದಿಸುತ್ತಾರೆ ಮತ್ತು ಅವರ ನೇತೃತ್ವದ ಹೊಸ ಕಾರ್ಯಕಾರಿ ಸಮಿತಿಗೆ ದಾರಿ ಮಾಡಿಕೊಡುವ ನಿರೀಕ್ಷೆಯಿದೆ. ಅಂದಾಜು 15 ಸಾವಿರಕ್ಕೂ ಅಧಿಕ ಕಾಂಗ್ರೆಸ್‌ ಕಾರ್ಯಕರ್ತರು ಈ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ.  2024ರಲ್ಲಿ ಬಿಜೆಪಿ ವಿರುದ್ಧ ವಿಪಕ್ಷಗಳ ಒಕ್ಕೂಟವನ್ನು ರಚಿಸಿ ತಾನೇ ಮುನ್ನಡೆಸುವ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸಲಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com