ಬಂಗಾಳದ ಮಾಲ್ಡಾದಲ್ಲಿ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ: ಬಿಜೆಪಿ, ಟಿಎಂಸಿ ನಡುವೆ ವಾಗ್ವಾದ

ಬಂಗಾಳದಲ್ಲಿ ವಂದೇ ಭಾರತ್ ರೈಲಿಗೆ ಚಾಲನೆ ದೊರೆತ ಕೆಲವೇ ದಿನಗಳಲ್ಲಿ ಅದರ ಮೇಲೆ ಕಲ್ಲು ತೂರಾಟ ನಡೆದಿದೆ. 
ವಂದೇ ಭಾರತ್ ಎಕ್ಸ್ ಪ್ರೆಸ್
ವಂದೇ ಭಾರತ್ ಎಕ್ಸ್ ಪ್ರೆಸ್

ಕೋಲ್ಕತ್ತ: ಬಂಗಾಳದಲ್ಲಿ ವಂದೇ ಭಾರತ್ ರೈಲಿಗೆ ಚಾಲನೆ ದೊರೆತ ಕೆಲವೇ ದಿನಗಳಲ್ಲಿ ಅದರ ಮೇಲೆ ಕಲ್ಲು ತೂರಾಟ ನಡೆದಿದೆ. 

ಹೌರಾ- ನ್ಯೂ ಜಲ್ಪೈಗುರಿ ಮಾರ್ಗದಲ್ಲಿ ಈ ವಂದೇ ಭಾರತ್ ರೈಲು ಸಂಚರಿಸುತ್ತಿದ್ದು ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಕಲ್ಲು ತೂರಾಟ ನಡೆದಿದೆ.

ಈ ಘಟನೆ ಬಗ್ಗೆ ಬಿಜೆಪಿ-ಟಿಎಂಸಿ ಪರಸ್ಪರ ವಾಗ್ವಾದಕ್ಕೆ ಇಳಿದಿದ್ದು, ಬಿಜೆಪಿ ಈ ಘಟನೆ ಬಗ್ಗೆ ಎನ್ಐಎ ತನಿಖೆಗೆ ಆಗ್ರಹಿಸಿದೆ. ಟಿಎಂಸಿ ಈ ಘಟನೆಯನ್ನು ರಾಜ್ಯಕ್ಕೆ ಅವಮಾನ ಮಾಡಲು ನಡೆಸಿರುವ ಘಟನೆಯಾಗಿದೆ ಎಂದು ಆರೋಪಿಸಿದೆ. 

ಕಲ್ಲು ತೂರಾಟದ ಘಟನೆಯಲ್ಲಿ ಯಾರಿಗೂ ಹಾನಿಯುಂಟಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ 22303 ವಂದೇ ಭಾರತ್ ನ ಕೋಚ್ ನಂಬರ್ ಸಿ 13 ನ ಗಾಜು ಒಡೆದಿದ್ದು, ಘಟನೆಯ ಬಳಿಕ ರೈಲನ್ನು ನಿಲ್ಲಿಸಲಾಗಿಲ್ಲ. ನಿಗದಿಯಂತೆ ಮಾಲ್ಡಾದ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಆರ್ ಪಿಎಫ್ ಈ ಘಟನೆ ಬಗ್ಗೆ ತನಿಖೆ ನಡೆಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com