ಜಿಡಿಪಿ ಬೆಳವಣಿಗೆ ಮುನ್ನೋಟ ಶೇ.7 ಕ್ಕೆ ಇಳಿಕೆ, ಕ್ಷೀಣಿಸಿದ ಜಾಗತಿಕ ಬೇಡಿಕೆ, ಹಣದುಬ್ಬರ ಅತಿ ದೊಡ್ಡ ಸವಾಲು!
ಮುಂಬೈ: ಭಾರತದ ಆರ್ಥಿಕ ಬೆಳವಣಿಗೆ ಈ ವರ್ಷ ಶೇ.7.0 ರಷ್ಟಿರಲಿದೆ ಎಂದು ಶುಕ್ರವಾರ (ಜ.06) ರಂದು ಬಿಡುಗಡೆಯಾದ ಅಂದಾಜಿನಲ್ಲಿ ತಿಳಿದುಬಂದಿದೆ.
ಜಾಗತಿಕವಾಗಿ ಕುಸಿದ ಬೇಡಿಕೆ ಹಾಗೂ ಹೆಚ್ಚು ಹಣದುಬ್ಬರಗಳು ವಿಶ್ವದ 5 ನೇ ಅತಿ ದೊಡ್ಡ ಆರ್ಥಿಕತೆಯಾಗಿರುವ ಭಾರತದ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮಾ.31ಕ್ಕೆ ಅಂತ್ಯಗೊಳ್ಳುವ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ರಾಷ್ಟ್ರೀಯ ಅಂಕಿ-ಅಂಶ ಮುನ್ನೋಟ ಬಿಡುಗಡೆಯಾಗಿದ್ದು, ಜಾಗತಿಕವಾಗಿ ಭಾರತವನ್ನು ಅತಿ ಹೆಚ್ಚು ಆರ್ಥಿಕ ಬೆಳವಣಿಗೆ ಸಾಮರ್ಥ್ಯ ಹೊಂದಿರುವ ರಾಷ್ಟ್ರ ಎಂದು ಹೇಳಿದೆ.
ಕೊರೋನಾ ಪ್ಯಾಂಡಮಿಕ್ ಬಳಿಕ ಭಾರತದ ಆರ್ಥಿಕತೆ ಬೇಗ ಪುಟಿದೆದ್ದಿದ್ದು, ಈಗ ಜಾಗತಿಕವಾಗಿ ಪರಿಣಾಮ ಉಂಟುಮಾಡುತ್ತಿರುವ ಅಂಶಗಳಿಂದ ಸೆಣೆಸುತ್ತಿದೆ.
ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ದೇಶದ 1.4 ಬಿಲಿಯನ್ ಮಂದಿಯ ಮೇಲೆ ಆಗಿದ್ದು, ಬೆಲೆ ಏರಿಕೆ, ಪೆಟ್ರೋಲ್ ಬೆಲೆ ಏರಿಕೆಯಿಂದ ಜನತೆ ಜರ್ಝರಿತರಾಗಿದ್ದಾರೆ. ಇನ್ನು ಆರ್ ಬಿಐ ಮೇ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ ರೆಪೋ ದರವನ್ನು ಶೇ.2.25 ರಷ್ಟಕ್ಕೆ ಏರಿಕೆ ಮಾಡಿದೆ.
ಬೇರೆಡೆಗೆ ಹೋಲಿಕೆ ಮಾಡಿದರೆ ಭಾರತ ಜಾಗತಿಕ ಆರ್ಥಿಕತೆಯಲ್ಲಿ ಆಶಾಕಿರಣವಾಗಿದೆ. ಜಿಡಿಪಿ ಬೆಳವಣಿಗೆ ಡೇಟಾ ಬಿಡುಗಡೆಗೆ ಮುನ್ನ ಭಾರತದ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಮುಂಬೈ ನಲ್ಲಿ ಶೇ.0.75 ರಷ್ಟು ಕಡಿಮೆಯಲ್ಲಿ ಅಂತ್ಯಗೊಂಡಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ