ಶ್ರದ್ಧಾ ಕೊಲೆ ಕೇಸ್: ಆರೋಪಿ ಅಫ್ತಾಬ್ ನ್ಯಾಯಾಂಗ ಬಂಧನ ಅವಧಿ ನಾಲ್ಕು ದಿನ ವಿಸ್ತರಣೆ

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾನ ನ್ಯಾಯಾಂಗ ಬಂಧನ ಅವಧಿಯನ್ನು ನಾಲ್ಕು ದಿನಗಳ ಕಾಲ ವಿಸ್ತರಿಸಿ ದೆಹಲಿಯ ಸಾಕೆತ್ ಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ.
ಅಫ್ತಾಬ್ ಪೂನಾವಾಲ
ಅಫ್ತಾಬ್ ಪೂನಾವಾಲ

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾನ ನ್ಯಾಯಾಂಗ ಬಂಧನ ಅವಧಿಯನ್ನು ನಾಲ್ಕು ದಿನಗಳ ಕಾಲ ವಿಸ್ತರಿಸಿ ದೆಹಲಿಯ ಸಾಕೆತ್ ಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ. ಜನವರಿ 10 ರಂದು ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. 

ಇದಕ್ಕೂ ಮುನ್ನ ಅಫ್ತಾಬ್ ನ ಡೆಬಿಟ್  ಮತ್ತು ಕಾರ್ಡ್ ಕೊಡಬೇಕೆಂದು ಕೋರಿ ಅಫ್ತಾಬ್ ಪರ ವಕೀಲ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪೂನಾವಾಲ ಜೈಲಿನಲ್ಲಿ ತೀವ್ರ ಚಳಿಯಿಂದ ನರಳುತ್ತಿದ್ದು, ಯಾವುದೇ ಸೂಕ್ತ ಬಟ್ಟೆಗಳಿಲ್ಲ. ಆದ್ದರಿಂದ ಬಟ್ಟೆಗಳು ಸೇರಿದಂತೆ ದಿನನಿತ್ಯದ ಅವಶ್ಯಕ ವಸ್ತುಗಳನ್ನು ಖರೀದಿಸಲು ಹಣದ ಅಗತ್ಯವಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಆರೋಪಿಯು ತನ್ನ ಬ್ಯಾಂಕ್ ಖಾತೆಗಳಲ್ಲಿ ಸ್ವಲ್ಪ ಹಣವನ್ನು ಹೊಂದಿದ್ದಾನೆ ಮತ್ತು ಆರೋಪಿಯ ಡೆಬಿಟ್ ಮತ್ತು  ಕ್ರೆಡಿಟ್ ಕಾರ್ಡ್‌ಗಳು ಪೊಲೀಸ್ ಅಧಿಕಾರಿಗಳ ಬಳಿಯಿದ್ದು, ಅವುಗಳನ್ನು ಕೊಡಬೇಕೆಂದು ಕೋರಿ ಅರ್ಜಿಯಲ್ಲಿ ತಿಳಿಸಲಾಗಿದೆ.

ತನ್ನ  ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಶ್ರದ್ಧಾ ವಾಕರ್ ಅವರ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿದ ಆರೋಪಿ ಅಫ್ತಾಬ್, ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ಮನೆಯಲ್ಲಿ  ಸುಮಾರು ಮೂರು ವಾರಗಳ ಕಾಲ ಫ್ರೀಡ್ಜ್ ನಲ್ಲಿಟ್ಟು, ಪ್ರತಿದಿನ ಒಂದೊಂದೆ ತುಂಡುಗಳನ್ನು ಅನೇಕ ದಿನಗಳ ಕಾಲ ನಗರದಾದ್ಯಂತ ಎಸೆದಿದ್ದ. ನಂತರ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆತನನ್ನು ಬಂಧಿಸಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com