ಜನವರಿ 13 ರಂದು ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ಕ್ರೂಸ್ ಗೆ ಪ್ರಧಾನಿ ಮೋದಿ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 13 ರಂದು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ಕ್ರೂಸ್ 'ಗಂಗಾ ವಿಲಾಸ್'ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.
Published: 07th January 2023 07:24 PM | Last Updated: 07th January 2023 07:24 PM | A+A A-

ಪಿಎಂ ನರೇಂದ್ರ ಮೋದಿ ಸಂಗ್ರಹ ಚಿತ್ರ
ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 13 ರಂದು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ಕ್ರೂಸ್ 'ಗಂಗಾ ವಿಲಾಸ್'ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.
ಇದು ಉತ್ತರ ಪ್ರದೇಶದ ವಾರಣಾಸಿ ಮತ್ತು ಅಸ್ಸಾಂನ ದಿಬ್ರುಗಢ ನಡುವೆ ನದಿಯಲ್ಲಿ 50 ದಿನಗಳಲ್ಲಿ 3200 ಕಿ.ಮೀ. ಕ್ರಮಿಸಲಿದೆ.
ಇದನ್ನು ಓದಿ: ರಾಜ್‌ಕೋಟ್‌ನಲ್ಲಿರುವ ಡ್ಯಾಮ್‌ಗೆ ಪ್ರಧಾನಿ ಮೋದಿ ತಾಯಿ ಹೀರಾಬೆನ್ ಹೆಸರು
ಜನವರಿ 13 ರಂದು ರವಿದಾಸ್ ಘಾಟ್‌ನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಅವರು ಭಾಗವಹಿಸಲಿದ್ದಾರೆ.
ಉದ್ಘಾಟನೆಯ ನಂತರ, ಗಂಗಾ ವಿಲಾಸ್ ಕ್ರೂಸ್ ಸ್ವಿಟ್ಜರ್ಲೆಂಡ್‌ನ 32 ಮತ್ತು ಜರ್ಮನಿಯ ಒಬ್ಬ ಸೇರಿದಂತೆ 33 ಪ್ರವಾಸಿಗರೊಂದಿಗೆ ದಿಬ್ರುಗಢಕ್ಕೆ ಹೊರಡಲಿದೆ. 62.5 ಮೀ(ಉದ್ದ), 12.8 ಮೀ(ಅಗಲ) ಮತ್ತು 1.35 ಮೀ (ಡ್ರಾಫ್ಟ್) ಅಳತೆಯ ಈ ಹಡಗು ಭಾರತ ಮತ್ತು ಬಾಂಗ್ಲಾದೇಶದ 27 ನದಿಗಳನ್ನು ದಾಟುವ ಮೂಲಕ 3200 ಕಿಮೀ ದೂರವನ್ನು ಕ್ರಮಿಸಲಿದೆ.