ಭಾರತ್ ಜೋಡೋಗೆ ಶಿವಸೇನೆ ಬೆಂಬಲ; ಯಾತ್ರೆಯಲ್ಲಿ ಜಮ್ಮು-ಕಾಶ್ಮೀರದ ಶಿವಸೇನೆ ಭಾಗಿ

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ಶಿವಸೇನೆ ಬೆಂಬಲ ಘೋಷಿಸಿದ್ದು, ಮುಂದಿನ ವಾರ ಜಮ್ಮು-ಕಾಶ್ಮೀರದಲ್ಲಿ ನಡೆಯಲಿರುವ ಯಾತ್ರೆಯಲ್ಲಿ ಅಲ್ಲಿನ ಸ್ಥಳೀಯ ನಾಯಕರು ಭಾಗಿಯಾಗಲಿದ್ದಾರೆ ಎಂದು ಪಕ್ಷ ಘೋಷಿಸಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ- ಪ್ರಿಯಾಂಕಾ ಗಾಂಧಿ ವಾದ್ರಾ
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ- ಪ್ರಿಯಾಂಕಾ ಗಾಂಧಿ ವಾದ್ರಾ

ಶ್ರೀನಗರ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ಶಿವಸೇನೆ ಬೆಂಬಲ ಘೋಷಿಸಿದ್ದು, ಮುಂದಿನ ವಾರ ಜಮ್ಮು-ಕಾಶ್ಮೀರದಲ್ಲಿ ನಡೆಯಲಿರುವ ಯಾತ್ರೆಯಲ್ಲಿ ಅಲ್ಲಿನ ಸ್ಥಳೀಯ ನಾಯಕರು ಭಾಗಿಯಾಗಲಿದ್ದಾರೆ ಎಂದು ಪಕ್ಷ ಘೋಷಿಸಿದೆ.
 
ಶಿವಸೇನೆ ನಾಯಕ ಮನೀಷ್ ಸಹ್ನಿ ಈ ಬಗ್ಗೆ ಘೋಷಣೆ ಮಾಡಿದ್ದು, ಭಾರತ್ ಜೋಡೋ ನಡಿಗೆಯಲ್ಲಿ ಜಮ್ಮು -ಕಾಶ್ಮೀರದಲ್ಲಿ ಶಿವಸೇನೆ ಭಾಗವಹಿಸಲಿದೆ ಎಂದು ಹೇಳಿದ್ದಾರೆ.

ಮನೀಷ್ ಸಹ್ನಿ ಜಮ್ಮು-ಕಾಶ್ಮೀರದ ಶಿವಸೇನೆ (ಉದ್ಧವ್ ಬಣ) ಅಧ್ಯಕ್ಷರಾಗಿದ್ದು, ಧರ್ಮ ಹಾಗೂ ದ್ವೇಷವನ್ನೇ ಬಂಡವಾಳವಾಗಿಟ್ಟುಕೊಂಡು ರಾಜಕಾರಣ ನಡೆಸುತ್ತಿರುವವರಿಗೆ ರಾಹುಲ್ ಗಾಂಧಿ ಭಾರತ್ ಜೋಡೋ ಮೂಲಕ ತಕ್ಕ ಉತ್ತರ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ

ಭಾರತ್ ಜೋಡೋ ಯಾತ್ರೆ ನಗರಕ್ಕೆ ಪ್ರವೇಶಿಸುತ್ತಿದ್ದಂತೆಯೇ ನಾವು ಯಾತ್ರೆಯಲ್ಲಿ ಭಾಗವಹಿಸಲಿದ್ದೇವೆ. ಯಾತ್ರೆಯಲ್ಲಿ ಭಾಗವಹಿಸುವುದರ ಸಂಬಂಧ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಎಂಪಿ ಅನಿಲ್ ದೇಸಾಯಿ ಸೂಚನೆ ನೀಡಿದ್ದಾರೆ. ಭ್ರಾತೃತ್ವದ ಸಂದೇಶ ರವಾನಿಸುವ ಹೊಂದಿರುವ ಈ ಯಾತ್ರೆ ಅತ್ಯಂತ ಅಗತ್ಯವಾಗಿದೆ ಪ್ರಮುಖವಾಗಿ ಜಮ್ಮು-ಕಾಶ್ಮೀರಕ್ಕೆ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com