ಜ.30ರಂದು ಭಾರತ್ ಜೋಡೋ ಯಾತ್ರೆ ಸಮಾರೋಪ: 21 ವಿರೋಧ ಪಕ್ಷಗಳಿಗೆ ಆಹ್ವಾನ ನೀಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕೇಂದ್ರ ಎನ್ ಡಿಎ ಮೈತ್ರಿಸರ್ಕಾರಕ್ಕೆ ಪ್ರಬಲವಾದ ವಿರೋಧ ಪಕ್ಷ ಇಂದು ದೇಶದಲ್ಲಿ ಇಲ್ಲ, ಪ್ರಬಲ ವಿರೋಧ ಪಕ್ಷದ ಅಗತ್ಯವಿದೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಲೇ ಇವೆ. ಈ ಮಧ್ಯೆ ಕಾಂಗ್ರೆಸ್ ಗೆ ಹೊಸ ಸಾರಥಿ ಮಲ್ಲಿಕಾರ್ಜುನ ಖರ್ಗೆಯವರ ನೇಮಕವಾಗಿದೆ. 
ಫತೇಘರ್ ನಿನ್ನೆ ನಡೆದ ಪಕ್ಷದ ‘ಭಾರತ್ ಜೋಡೋ ಯಾತ್ರೆ’ಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೈನ ಸನ್ಯಾಸಿಗಳು ಮತ್ತು ಬೆಂಬಲಿಗರೊಂದಿಗೆ ನಡೆದರು
ಫತೇಘರ್ ನಿನ್ನೆ ನಡೆದ ಪಕ್ಷದ ‘ಭಾರತ್ ಜೋಡೋ ಯಾತ್ರೆ’ಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೈನ ಸನ್ಯಾಸಿಗಳು ಮತ್ತು ಬೆಂಬಲಿಗರೊಂದಿಗೆ ನಡೆದರು

ನವದೆಹಲಿ: ಕೇಂದ್ರ ಎನ್ ಡಿಎ ಮೈತ್ರಿಸರ್ಕಾರಕ್ಕೆ ಪ್ರಬಲವಾದ ವಿರೋಧ ಪಕ್ಷ ಇಂದು ದೇಶದಲ್ಲಿ ಇಲ್ಲ, ಪ್ರಬಲ ವಿರೋಧ ಪಕ್ಷದ ಅಗತ್ಯವಿದೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಲೇ ಇವೆ. ಈ ಮಧ್ಯೆ ಕಾಂಗ್ರೆಸ್ ಗೆ ಹೊಸ ಸಾರಥಿ ಮಲ್ಲಿಕಾರ್ಜುನ ಖರ್ಗೆಯವರ ನೇಮಕವಾಗಿದೆ. 

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಸಾಗುತ್ತಿದೆ. ಜನವರಿ 30ರಂದು ಯಾತ್ರೆ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಸಮಾಪ್ತಿಗೊಳ್ಳಲಿದೆ. ಈ ಸಂದರ್ಭದಲ್ಲಿ ವಿರೋಧಪಕ್ಷಗಳೆಲ್ಲರೂ ಬನ್ನಿ ಒಟ್ಟಾಗೇಣ, ಒಗ್ಗಟ್ಟು ಪ್ರದರ್ಶಿಸೋಣ ಎಂದು 21 ಸಮಾನಮನಸ್ಕ ಪಕ್ಷಗಳಿಗೆ ಕಾಂಗ್ರೆಸ್ ಆಹ್ವಾನ ನೀಡಿದೆ.

21 ವಿರೋಧ ಪಕ್ಷಗಳ ಮುಖ್ಯಸ್ಥರಿಗೆ ಪತ್ರ ಬರೆದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯಾತ್ರೆಯ ಆರಂಭದಿಂದಲೂ ಕಾಂಗ್ರೆಸ್ ಸಮಾನಮನಸ್ಕ ಪಕ್ಷಗಳಿಗೆ ಆಹ್ವಾನ ನೀಡುತ್ತಲೇ ಬಂದಿದೆ. ರಾಹುಲ್ ಗಾಂಧಿಯವರ ಆಹ್ವಾನ ಮೇರೆಗೆ ಹಲವು ಪಕ್ಷಗಳ ಸಂಸದರು ಯಾತ್ರೆಯ ಹಲವು ಹಂತಗಳಲ್ಲಿ ಸೇರ್ಪಡೆಯಾಗಿದ್ದಾರೆ.

ಜನವರಿ 30 ರಂದು ಮಧ್ಯಾಹ್ನ ಶ್ರೀನಗರದಲ್ಲಿ ನಡೆಯಲಿರುವ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ವೈಯಕ್ತಿಕವಾಗಿ ಪಾಲ್ಗೊಳ್ಳಲು ನಾನು ಈಗ ನಿಮ್ಮನ್ನು ಆಹ್ವಾನಿಸುತ್ತೇನೆ. ದ್ವೇಷ ಮತ್ತು ಹಿಂಸಾಚಾರದ ಸಿದ್ಧಾಂತದ ವಿರುದ್ಧ ದಣಿವರಿಯದ ಹೋರಾಟದಲ್ಲಿ ಜನವರಿ 30ರಂದು ಹುತಾತ್ಮರಾದ ಮಹಾತ್ಮಾ ಗಾಂಧೀಜಿಯವರ ಸ್ಮರಣಾರ್ಥ ಈ ಸಮಾರಂಭವನ್ನು ಸಮರ್ಪಿಸಲಾಗಿದೆ ಎಂದು ಖರ್ಗೆ ಪತ್ರದಲ್ಲಿ ತಿಳಿಸಿದ್ದಾರೆ.

ಕಳೆದ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾದ ಭಾರತ್ ಜೋಡೋ ಮೆರವಣಿಗೆ ಜನವರಿ 30 ರಂದು ಶ್ರೀನಗರದಲ್ಲಿ ರಾಹುಲ್ ಗಾಂಧಿ ರಾಷ್ಟ್ರಧ್ವಜಾರೋಹಣದೊಂದಿಗೆ ಮುಕ್ತಾಯಗೊಳ್ಳಲಿದೆ. ಇಲ್ಲಿಯವರೆಗೆ, ಮೆರವಣಿಗೆಯು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ 3,300 ಕಿಮೀ ಕ್ರಮಿಸಿದೆ. “ಪ್ರತಿದಿನ, ಯಾತ್ರಿಗಳು ಬಿಸಿಲು, ಚಳಿ ಮತ್ತು ಮಳೆಯ ಮೂಲಕ 20-25 ಕಿಮೀ ನಡೆಯುತ್ತಾರೆ. ಅವರು ಯಾತ್ರೆಯ ಸಂದೇಶವನ್ನು ಹತ್ತಾರು ಲಕ್ಷ ಜನರಿಗೆ ತಲುಪಿಸಿದ್ದಾರೆ ಎಂದು ಖರ್ಗೆ ಬರೆದಿದ್ದಾರೆ. ಪ್ರಸ್ತುತ, ಯಾತ್ರೆಯು ಪಂಜಾಬ್ ಮೂಲಕ ಪ್ರಯಾಣಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com