ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈಗೆ ಝಡ್ ಶ್ರೇಣಿಯ ಭದ್ರತೆ: 33 ಸಿಆರ್‌ಪಿಎಫ್ ಕಮಾಂಡೋಗಳಿಂದ ರಕ್ಷಣೆ

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಗೃಹ ಸಚಿವಾಲಯ ಅಣ್ಣಾಮಲೈ ಅವರಿಗೆ ಝಡ್ ಶ್ರೇಣಿಯ ಭದ್ರತೆ ನೀಡಿದೆ.
ಅಣ್ಣಾಮಲೈ
ಅಣ್ಣಾಮಲೈ

ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಗೃಹ ಸಚಿವಾಲಯ ಅಣ್ಣಾಮಲೈ ಅವರಿಗೆ ಝಡ್ ಶ್ರೇಣಿಯ ಭದ್ರತೆ ನೀಡಿದೆ.

ಅಣ್ಣಾಮಲೈ ಅವರಿಗೆ ಈ ಹಿಂದೆ ವೈ ಕೆಟಗರಿ ಭದ್ರತೆ ಇತ್ತು. ಸಿಆರ್​ಎಫ್‌ನ ಒಟ್ಟು 33 ಕಮಾಂಡೋಗಳು ಅವರಿಗೆ ಈ ಭದ್ರತೆಯನ್ನು ನೀಡಲಿದ್ದಾರೆ. ಅಣ್ಣಾಮಲೈ ಅವರಿಗೆ ಅಪಾಯ ಹೆಚ್ಚಾಗುವ ಆತಂಕದ ಹಿನ್ನೆಲೆಯಲ್ಲಿ ಅವರಿಗೆ ಈ ಭದ್ರತೆ ನೀಡಲಾಗಿದೆ.

ತಮಿಳುನಾಡು ಬಿಜೆಪಿ ಅಧ್ಯಕ್ಷರಿಗೆ ಬೆದರಿಕೆಯ ಆತಂಕದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು ಝಡ್ ವರ್ಗದ ಭದ್ರತೆಯನ್ನು ನೀಡಿದೆ. ಮಾಜಿ ಐಪಿಎಸ್ ಅಧಿಕಾರಿ ಮತ್ತು ತಮಿಳುನಾಡು ಬಿಜೆಪಿ ಮುಖ್ಯಸ್ಥರಿಗೆ ಮಾವೋವಾದಿಗಳು ಮತ್ತು ಧಾರ್ಮಿಕ ಉಗ್ರಗಾಮಿಗಳಿಂದ ಬೆದರಿಕೆಗಳು ಬಂದಿದ್ದವು.

ಅಣ್ಣಾಮಲೈ ಅವರಿಗೆ ಬೆದರಿಕೆ ಬಂದ ನಂತರ, ಇಂಟಲಿಜೆನ್ಸ್ ಬ್ಯೂರೋ (IB) ವರದಿಯು ಅವರಿಗೆ Z ಶ್ರೇಣಿ ಭದ್ರತೆಯನ್ನು ಒದಗಿಸುವಂತೆ ಶಿಫಾರಸು ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com