ದ್ವೇಷ ಭಾಷಣ ಪ್ರಕರಣ; ಅಜೆಂಡಾಗಳು ಸಮಾಜವನ್ನು ವಿಭಜಿಸುತ್ತದೆ: ಟಿವಿ ಚಾನೆಲ್‌ಗಳಿಗೆ 'ಸುಪ್ರೀಂ' ಛೀಮಾರಿ

ದ್ವೇಷ ಭಾಷಣ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಇಂದು ಟಿವಿ ಚಾನೆಲ್ ಗಳಿಗೆ ಛೀಮಾರಿ ಹಾಕಿದೆ. ಟಿವಿ ಚಾನೆಲ್ ಗಳು ಸಮಾಜದಲ್ಲಿ ಒಡಕು ಮೂಡಿಸುತ್ತಿವೆ. ಟಿವಿ ಚಾನೆಲ್‌ಗಳು ಅಜೆಂಡಾ-ಚಾಲಿತವಾಗಿದ್ದು, ಇದು ಸಮಾಜವನ್ನು ವಿಭಜಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Updated on

ನವದೆಹಲಿ: ದ್ವೇಷ ಭಾಷಣ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಇಂದು ಟಿವಿ ಚಾನೆಲ್ ಗಳಿಗೆ ಛೀಮಾರಿ ಹಾಕಿದೆ. ಟಿವಿ ಚಾನೆಲ್ ಗಳು ಸಮಾಜದಲ್ಲಿ ಒಡಕು ಮೂಡಿಸುತ್ತಿವೆ. ಟಿವಿ ಚಾನೆಲ್‌ಗಳು ಅಜೆಂಡಾ-ಚಾಲಿತವಾಗಿದ್ದು, ಇದು ಸಮಾಜವನ್ನು ವಿಭಜಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

ದ್ವೇಷ ಭಾಷಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಮತ್ತು ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರ ಪೀಠವು ಟಿವಿ ಚಾನೆಲ್‌ಗಳು ಸಂವೇದನಾಶೀಲ ಸುದ್ದಿಗಳಿಗಾಗಿ ಪೈಪೋಟಿ ನಡೆಸುತ್ತವೆ. ತಮ್ಮ ಮಾಲೀಕರ ಆದೇಶದಂತೆ ಕಾರ್ಯನಿರ್ವಹಿಸುತ್ತವೆ ಎಂದು ಜವಾಬ್ದಾರಿಯುತ ಸಂಸ್ಥೆಗಳನ್ನು ನ್ಯಾಯಾಲಯ ಪ್ರಶ್ನಿಸಿದೆ.

ಇಂತಹ ಪ್ರಸಾರಗಳನ್ನು ಹೇಗೆ ನಿಯಂತ್ರಿಸಬಹುದು ಎಂದು ವಾರ್ತಾ ಪ್ರಸಾರ ಗುಣಮಟ್ಟ ಪ್ರಾಧಿಕಾರ(ಎನ್‌ಬಿಎಸ್‌ಎ) ಮತ್ತು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ನ್ಯಾಯಮೂರ್ತಿ ಜೋಸೆಫ್ ಅವರು, 'ಚಾನೆಲ್‌ಗಳು ಮೊದಲಿಗೆ ಪರಸ್ಪರ ಪೈಪೋಟಿ ನಡೆಸುತ್ತಿವೆ. ಅವರು ಅದನ್ನು ಸಂವೇದನೆಗೊಳಿಸುತ್ತಾರೆ. ನೀವು (ಕೇಂದ್ರ ಸರ್ಕಾರ ಮತ್ತು ಎನ್‌ಬಿಎಸ್‌ಎ) ಅದನ್ನು ಹೇಗೆ ನಿಯಂತ್ರಿಸುತ್ತೀರಿ? ಭಾಷೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯ. ಈ ಮೂಲಕ ಕಾರ್ಯಸೂಚಿ ಪೂರೈಸಲಾಗುತ್ತಿದೆ ಎಂದರು. ಯಾರು ಹಣ ಹೂಡಿಕೆ ಮಾಡುತ್ತಾರೆ ಎಂಬುದನ್ನೂ ಅವರು ನಿರ್ಧರಿಸುತ್ತಾರೆ ಎಂದು ಅವರು ಹೇಳಿದರು.

ಸುದ್ದಿ ನಿರೂಪಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸಲಹೆ
ಇಂತಹ ವಾಹಿನಿಗಳು ಸಮಾಜದಲ್ಲಿ ಒಡಕು ಮೂಡಿಸುತ್ತಿವೆ ಎಂದು ಪೀಠ ಹೇಳಿದೆ. ನ್ಯಾಯಮೂರ್ತಿ ಜೋಸೆಫ್, 'ನೀವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸುವಾಗ, ನಿಮಗೆ ಅರ್ಹವಾದದ್ದನ್ನು ನೀವು ಮಾಡಬೇಕು' ಎಂದು ಟೀಕಿಸಿದರು. ಇದರೊಂದಿಗೆ, ದ್ವೇಷದ ಭಾಷಣವನ್ನು ಉತ್ತೇಜಿಸುವ ಅಥವಾ ತೊಡಗಿಸಿಕೊಳ್ಳುವ ಸುದ್ದಿ ನಿರೂಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ.

ಸಿಆರ್‌ಪಿಸಿಗೆ ತಿದ್ದುಪಡಿ
ಆ್ಯಂಕರ್ ಗಳಿಗೆ ದಂಡ ವಿಧಿಸಿದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದು ಗೊತ್ತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದೇ ಸಮಯದಲ್ಲಿ, ದ್ವೇಷದ ಭಾಷಣವನ್ನು ಎದುರಿಸಲು ಅಪರಾಧ ಪ್ರಕ್ರಿಯಾ ಸಂಹಿತೆಗೆ (ಸಿಆರ್‌ಪಿಸಿ) ಸಮಗ್ರ ತಿದ್ದುಪಡಿಗಳನ್ನು ಮಾಡಲು ಯೋಜಿಸುತ್ತಿದೆ ಎಂದು ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ. ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ ನಟರಾಜ್ ಅವರು, 'ಅಪರಾಧ ಪ್ರಕ್ರಿಯಾ ಸಂಹಿತೆಗೆ ತಿದ್ದುಪಡಿ ತರಲು ಚಿಂತನೆ ನಡೆಸಿದ್ದೇವೆ' ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com