ಭಾರತೀಯ ಉದ್ಯೋಗಿಗಳಿಗೆ ಶೇ.15-30 ರಷ್ಟು ವೇತನ ಹೆಚ್ಚಳ ಸಾಧ್ಯತೆ; ಏಷ್ಯಾದಲ್ಲೇ ಗರಿಷ್ಠ

ಭಾರತೀಯ ಉದ್ಯೋಗಿಗಳು, ನೌಕರರು ಈ ವರ್ಷ ಶೇ.15-30 ರಷ್ಟು ವೇತನ ಹೆಚ್ಚಳವನ್ನು ಕಾಣಲಿದ್ದಾರೆ ಹಾಗೂ ಇದು ಏಷ್ಯಾದಲ್ಲೇ ಗರಿಷ್ಠ ವೇತನ ಹೆಚ್ಚಳ ಪ್ರಮಾಣವಾಗಿರಲಿದೆ ಎಂದು ಕಾರ್ನ್ ಫೆರ್ರಿ ಸಮೀಕ್ಷೆ ಹೇಳಿದೆ.
ವೇತನ ಹೆಚ್ಚಳ (ಸಂಗ್ರಹ ಚಿತ್ರ)
ವೇತನ ಹೆಚ್ಚಳ (ಸಂಗ್ರಹ ಚಿತ್ರ)

ನವದೆಹಲಿ: ಭಾರತೀಯ ಉದ್ಯೋಗಿಗಳು, ನೌಕರರು ಈ ವರ್ಷ ಶೇ.15-30 ರಷ್ಟು ವೇತನ ಹೆಚ್ಚಳವನ್ನು ಕಾಣಲಿದ್ದಾರೆ ಹಾಗೂ ಇದು ಏಷ್ಯಾದಲ್ಲೇ ಗರಿಷ್ಠ ವೇತನ ಹೆಚ್ಚಳ ಪ್ರಮಾಣವಾಗಿರಲಿದೆ ಎಂದು ಕಾರ್ನ್ ಫೆರ್ರಿ ಸಮೀಕ್ಷೆ ಹೇಳಿದೆ.
 
ಕಳೆದ ವರ್ಷ ಸರಾಸರಿ ಶೇ.9.4 ರಷ್ಟು ವೇತನ ಹೆಚ್ಚಳ ಕಂಡಿದ್ದ ಭಾರತ 2023 ರಲ್ಲಿ ಶೇ.9.8 ರಷ್ಟು ವೇತನ ಹೆಚ್ಚಳ ಕಾಣಲಿದೆ ಎಂದು ಸಮೀಕ್ಷೆ ವರದಿ ಹೇಳಿದೆ.

ಹೈಟೆಕ್ ಕೈಗಾರಿಕೆಗಳು, ಜೀವ ವಿಜ್ಞಾನ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಶೇ.10 ರಷ್ಟು ವೇತನ ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ. ಭಾರತ ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, ಪ್ರತಿ ವರ್ಷವೂ ಲಕ್ಷಾಂತರ ಮಂದಿ ಉದ್ಯೋಗಕ್ಕೆ ಬರುತ್ತಿದ್ದಾರೆ.  ಒಟ್ಟಾರೆ ನಿರುದ್ಯೋಗ ದರ ಅಧಿಕವಾಗಿದ್ದರೂ ಶಿಕ್ಷಣದಲ್ಲಿನ ಅಂತರ ಪ್ರತಿಭೆಗಳ ಹೋರಾಟವನ್ನು ತೀವ್ರಗೊಳಿಸುತ್ತದೆ ಎಂದು ಸಮೀಕ್ಷೆ ಹೇಳಿದೆ.
 
ಕಾರ್ನ್ ಫೆರ್ರಿ ಭಾರತದಲ್ಲಿ 800,000 ಸಿಬ್ಬಂದಿಗಳಿಗೆ ಉದ್ಯೋಗ ನೀಡಿರುವ 818 ಸಂಸ್ಥೆಗಳ ಸಮೀಕ್ಷೆ ನಡೆಸಿದ್ದು, ಶೇ.61 ರಷ್ಟು ಸಂಸ್ಥೆಗಳು ಪ್ರಮುಖ ವ್ಯಕ್ತಿಗಳಿಗೆ ಏಕಕಾಲಕ್ಕೆ ಹೆಚ್ಚಿನ ಪಾವತಿಗಳನ್ನು ನೀಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com