ಸಾಂದರ್ಭಿಕ ಚಿತ್ರ
ದೇಶ
ಜಮ್ಮು-ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಎನ್ ಕೌಂಟರ್: ಇಬ್ಬರು ಉಗ್ರರ ಹತ್ಯೆ
ಕಣಿವೆ ಪ್ರದೇಶ ಜಮ್ಮು-ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.
ಜಮ್ಮು: ಕಣಿವೆ ಪ್ರದೇಶ ಜಮ್ಮು-ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.
ಹತ್ಯೆಗೀಡಾದ ಉಗ್ರರನ್ನು ಅರ್ಬಾಸ್ ಮಿರ್ ಮತ್ತು ಶಾಹಿದ್ ಶೇಖ್ ಎಂದು ಗುರುತಿಸಲಾಗಿದ್ದು ಇವರು ಪುಲ್ವಾಮದವರಾಗಿದ್ದು ಭಯೋತ್ಪಾದಕ ಸಂಘಟನೆ ಎಲ್ ಇಟಿ ಜೊತೆ ಸಂಪರ್ಕ ಹೊಂದಿದವರಾಗಿದ್ದಾರೆ.
ಇತ್ತೀಚೆಗೆ ಎನ್ ಕೌಂಟರ್ ನಲ್ಲಿ ಇಬ್ಬರೂ ತಪ್ಪಿಸಿಕೊಂಡಿದ್ದರು. ಇಂದು ಬುದ್ಗಾಮದಲ್ಲಿ ಸೇನೆಯ ಯೋಧರು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಶಂಕಿತ ವಾಹನವನ್ನು ನಿಲ್ಲಿಸಿದರು. ಬಳಿಕ ಗುಂಡಿನ ಚಕಮಕಿ ನಡೆಯಿತು. ಈ ಬಾರಿ ತಪ್ಪಿಸಿಕೊಳ್ಳಲಾಗದೆ ಹತರಾಗಿದ್ದಾರೆ. ಸೇನಾಪಡೆ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ