ಸಚಿನ್ ಪೈಲಟ್ ರನ್ನು ಕೊರೋನಾಗೆ ಹೋಲಿಸಿದ್ರಾ ಗೆಹ್ಲೋಟ್? ವಿಡಿಯೋ ವೈರಲ್
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಅವರ ವಿರೋಧಿ ಬಣದ ನಾಯಕ ಸಚಿನ್ ಪೈಲಟ್ ನಡುವೆ ಶೀತಲ ಸಮರ ಮುಂದುವರೆದಿದ್ದು, ಸಾಂಕ್ರಾಮಿಕ ರೋಗದ ನಂತರ ಪಕ್ಷಕ್ಕೆ "ದೊಡ್ಡ ಕೊರೋನಾ" ಪ್ರವೇಶಿಸಿದೆ...
Published: 19th January 2023 11:45 PM | Last Updated: 27th January 2023 04:17 PM | A+A A-

ಗೆಹ್ಲೋಟ್-ಪೈಲಟ್
ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಅವರ ವಿರೋಧಿ ಬಣದ ನಾಯಕ ಸಚಿನ್ ಪೈಲಟ್ ನಡುವೆ ಶೀತಲ ಸಮರ ಮುಂದುವರೆದಿದ್ದು, ಸಾಂಕ್ರಾಮಿಕ ರೋಗದ ನಂತರ ಪಕ್ಷಕ್ಕೆ "ದೊಡ್ಡ ಕೊರೋನಾ" ಪ್ರವೇಶಿಸಿದೆ ಎಂದು ಮುಖ್ಯಮಂತ್ರಿ ಹೇಳುತ್ತಿರುವ ವೀಡಿಯೊ ವೈರಲ್ ಆಗಿದೆ.
ಅಶೋಕ್ ಗೆಹ್ಲೋಟ್ ಅವರು ಪೈಲಟ್ ರನ್ನು ಕೊರೋನಾ ವೈರಸ್‌ಗೆ ಹೋಲಿಸಿದ್ದಾರೆ ಎಂದು ನಂಬಲಾಗಿದೆ.
ಬುಧವಾರ ನೌಕರರ ಸಂಘದ ಪ್ರತಿನಿಧಿಗಳೊಂದಿಗೆ ಗೆಹ್ಲೋಟ್ ನಡೆಸಿದ ಬಜೆಟ್ ಪೂರ್ವ ಸಭೆಯ ವಿಡಿಯೋ ಇದಾಗಿದ್ದು, ಸಭೆಯಲ್ಲಿ ಭಾಗವಹಿಸಿದವರಲ್ಲಿ ಒಬ್ಬರಿಗೆ ಪ್ರತಿಕ್ರಿಯಿಸಿದ ಸಿಎಂ, ಯಾರ ಹೆಸರನ್ನೂ ಪ್ರಸ್ತಾಪಿಸದೆ, "ನಾನು ಭೇಟಿಯಾಗಲು ಪ್ರಾರಂಭಿಸಿದ್ದೇನೆ... ಮೊನ್ನೆ ಕೊರೋನಾ ಬಂದಿತ್ತು... ನಮ್ಮ ಪಕ್ಷಕ್ಕೆ ದೊಡ್ಡ ಕೊರೋನಾ ಕೂಡ ಪ್ರವೇಶಿಸಿದೆ" ಎಂದು ಹೇಳಿದರು.
ಇದನ್ನು ಓದಿ: ಕಾಂಗ್ರೆಸ್‌ಗೆ ಕಗ್ಗಂಟಾಗಿಯೇ ಉಳಿದ ಪೈಲಟ್-ಗೆಹ್ಲೋಟ್ ಸಮಸ್ಯೆ, ಪೇಪರ್ ಸೋರಿಕೆ ಕುರಿತು ಮುಖ್ಯಮಂತ್ರಿ ವಿರುದ್ಧ ಸಚಿನ್ ವಾಗ್ದಾಳಿ
ಬುಧವಾರ ನೌಕರರ ಸಂಘದ ಪ್ರತಿನಿಧಿಗಳೊಂದಿಗೆ ಗೆಹ್ಲೋಟ್ ನಡೆಸಿದ ಬಜೆಟ್ ಪೂರ್ವ ಸಭೆಯ ವಿಡಿಯೋ ಇದಾಗಿದ್ದು, ಸಭೆಯಲ್ಲಿ ಭಾಗವಹಿಸಿದವರಲ್ಲಿ ಒಬ್ಬರಿಗೆ ಪ್ರತಿಕ್ರಿಯಿಸಿದ ಸಿಎಂ, ಯಾರ ಹೆಸರನ್ನೂ ಪ್ರಸ್ತಾಪಿಸದೆ, "ನಾನು ಭೇಟಿಯಾಗಲು ಪ್ರಾರಂಭಿಸಿದ್ದೇನೆ... ಮೊನ್ನೆ ಕೊರೋನಾ ಬಂದಿತ್ತು... ನಮ್ಮ ಪಕ್ಷಕ್ಕೆ ದೊಡ್ಡ ಕೊರೋನಾ ಕೂಡ ಪ್ರವೇಶಿಸಿದೆ" ಎಂದು ಹೇಳಿದರು.
ಉಪಚುನಾವಣೆ ಅಥವಾ ರಾಜ್ಯಸಭಾ ಚುನಾವಣೆಯ ನಡುವೆಯೂ ಸರ್ಕಾರ ನೌಕರರ ಬೆಂಬಲದಿಂದ ಅತ್ಯುತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.