ಬಿಜೆಪಿ ಜಾತ್ಯತೀತ ಪಕ್ಷವಲ್ಲ, ಉಗ್ರಗಾಮಿ ಧಾರ್ಮಿಕ ಪಕ್ಷ: ಟಿಎಂಸಿ ನಾಯಕ ಜೈಪ್ರಕಾಶ್ ಮಜುಂದಾರ್

ತೃಣಮೂಲ ಕಾಂಗ್ರೆಸ್ ನಾಯಕ ಜೈಪ್ರಕಾಶ್ ಮಜುಂದಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಎಎನ್ಐ ಸುದ್ದಿಸಂಸ್ಥೆ ಪ್ರತಿನಿಧಿ ಜೊತೆಗೆ ಮಾತನಾಡಿದ ಅವರು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಆರ್ ಎಸ್ ಎಸ್ ನ್ನು ಯಾವತ್ತಿಗೂ ಇಷ್ಟಪಡುತ್ತಿರಲಿಲ್ಲ. ಆರ್ ಎಸ್ ಎಸ್ ಗೆ ಕೂಡ ನೇತಾಜಿಯವರನ್ನು ಕಂಡರೆ ಆಗುತ್ತಿರಲಿಲ್ಲ ಎಂದಿದ್ದಾರೆ. 
ಜೈಪ್ರಕಾಶ್ ಮಜುಂದಾರ್
ಜೈಪ್ರಕಾಶ್ ಮಜುಂದಾರ್

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ನಾಯಕ ಜೈಪ್ರಕಾಶ್ ಮಜುಂದಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಎಎನ್ಐ ಸುದ್ದಿಸಂಸ್ಥೆ ಪ್ರತಿನಿಧಿ ಜೊತೆಗೆ ಮಾತನಾಡಿದ ಅವರು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಆರ್ ಎಸ್ ಎಸ್ ನ್ನು ಯಾವತ್ತಿಗೂ ಇಷ್ಟಪಡುತ್ತಿರಲಿಲ್ಲ. ಆರ್ ಎಸ್ ಎಸ್ ಗೆ ಕೂಡ ನೇತಾಜಿಯವರನ್ನು ಕಂಡರೆ ಆಗುತ್ತಿರಲಿಲ್ಲ ಎಂದಿದ್ದಾರೆ. 

ಬಿಜೆಪಿ ನಾಯಕರು ಪಶ್ಚಿಮ ಬಂಗಾಳಕ್ಕೆ ಬಂದಾಗ ನೇತಾಜಿ ಬಗ್ಗೆ ಮಾತನಾಡುವುದು ಕೇವಲ ತೋರಿಕೆಗಷ್ಟೆ, ಅವರಿಗೆ ನೇತಾಜಿ ಬಗ್ಗೆ ನಿಜವಾದ ಪ್ರೀತಿ, ಗೌರವವಿಲ್ಲ ಎಂದಿದ್ದಾರೆ. 

ಬಿಜೆಪಿ ಉಗ್ರಗಾಮಿ ಧಾರ್ಮಿಕ ಪಕ್ಷ: ಬಿಜೆಪಿ ಒಂದು ಜಾತ್ಯತೀಯ ಪಕ್ಷವಲ್ಲ, ಅದು ಉಗ್ರಗಾಮಿ ಧಾರ್ಮಿಕ ಪಕ್ಷ. ಪಶ್ಚಿಮ ಬಂಗಾಳ ಜನತೆ ಬಿಜೆಪಿ ಪರವಾಗಿಯೂ ಇಲ್ಲ, ರಾಷ್ಟ್ರೀಯ ಸ್ವಯಂಸೇವಕ ಸಂಸ್ಥೆ ಪರವಾಗಿ ಕೂಡ ಇಲ್ಲ. 2024ರ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಫಲಿತಾಂಶದಿಂದ ಮೋದಿಯವರು ಪ್ರಧಾನಿಯಾಗುತ್ತಾರೆಯೇ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com