'ಶಾರೂಕ್ ಖಾನ್ ನನಗೆ ಬೆಳಗಿನ ಜಾವ 2 ಗಂಟೆಗೆ ಕರೆ ಮಾಡಿ ಪಠಾಣ್ ಪ್ರತಿಭಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದರು': ಸಿಎಂ ಹಿಮಂತ್ ಬಿಸ್ವಾ ಶರ್ಮ

ಇಂದು ಭಾನುವಾರ ಮುಂಜಾನೆ ಬಾಲಿವುಡ್ ನಟ ಶಾರೂಕ್ ಖಾನ್ ತಮಗೆ ದೂರವಾಣಿ ಕರೆ ಮಾಡಿ, ಈ ವಾರ ತೆರೆಗೆ ಬರುತ್ತಿರುವ ಅವರ ಪಠಾಣ್ ಚಿತ್ರದ ಬಗ್ಗೆ ನಡೆಯುತ್ತಿರುವ, ಕೇಳಿಬರುತ್ತಿರುವ ಪ್ರತಿಭಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ

ಗುವಾಹಟಿ: ಇಂದು ಭಾನುವಾರ ಮುಂಜಾನೆ ಬಾಲಿವುಡ್ ನಟ ಶಾರೂಕ್ ಖಾನ್ ತಮಗೆ ದೂರವಾಣಿ ಕರೆ ಮಾಡಿ, ಈ ವಾರ ತೆರೆಗೆ ಬರುತ್ತಿರುವ ಅವರ ಪಠಾಣ್ ಚಿತ್ರದ ಬಗ್ಗೆ ನಡೆಯುತ್ತಿರುವ, ಕೇಳಿಬರುತ್ತಿರುವ ಪ್ರತಿಭಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಪಠಾಣ್ ಚಿತ್ರ ಪ್ರದರ್ಶನದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ತಮ್ಮ ಸರ್ಕಾರವು ವಿಚಾರಣೆ ನಡೆಸುತ್ತದೆ. "ಇಂತಹ ಅಹಿತಕರ ಘಟನೆಗಳು" ಮತ್ತೆ ಸಂಭವಿಸದಂತೆ ನೋಡಿಕೊಳ್ಳುತ್ತದೆ ಎಂದು ಭರವಸೆ ನೀಡಿರುವುದಾಗಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ. 

ಬಾಲಿವುಡ್ ನಟ ಶಾರೂಕ್ ಖಾನ್ ನನಗೆ ಇಂದು ಬೆಳಗಿನ ಜಾವ 2 ಗಂಟೆಗೆ ಕರೆ ಮಾಡಿ ಮಾತನಾಡಿದ್ದಾರೆ. ಅವರು ತಮ್ಮ ಚಿತ್ರದ ಪ್ರದರ್ಶನದ ಸಂದರ್ಭದಲ್ಲಿ ಗುವಾಹಟಿಯಲ್ಲಿ ನಡೆದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ. ನಾವು ವಿಚಾರಿಸುತ್ತೇವೆ. ಮತ್ತು ಅಂತಹ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಶರ್ಮಾ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಗುವಾಹಟಿ ಸೇರಿದಂತೆ ರಾಜ್ಯಾದ್ಯಂತ ಥಿಯೇಟರ್‌ಗೆ ನುಗ್ಗಿದ ಭಜರಂಗದಳದ ಕಾರ್ಯಕರ್ತರ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು.ಬಲಪಂಥೀಯ ಗುಂಪಿನ ಸ್ವಯಂಸೇವಕರು ಚಿತ್ರದ ಪೋಸ್ಟರ್‌ಗಳನ್ನು ಹರಿದು ಸುಟ್ಟು ಹಾಕಿ ತೀವ್ರ ಪ್ರತಿಭಟನೆ ನಡೆಸಿದ್ದರು. ಈ  ಬಗ್ಗೆ ಸುದ್ದಿಗಾರರು ನಿನ್ನೆ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರನ್ನು ಕೇಳಿದ್ದಾಗ, ಶಾರುಖ್ ಖಾನ್ ಯಾರು ಅವರ ಬಗ್ಗೆ ಅಥವಾ ಅವರ ಚಿತ್ರ ಪಠಾಣ್ ಬಗ್ಗೆ ನನಗೆ ಏನೂ ತಿಳಿದಿಲ್ಲ ಎಂದು ಹೇಳಿದ್ದರು. 

ನಿನ್ನೆ ಸಿಎಂ ಅವರು, ಶಾರೂಕ್ ಖಾನ್ ಯಾರು ಎಂದು ಕೇಳಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಂದು ಶಾರೂಕ್ ಖಾನ್ ನನಗೆ ಬೆಳಗಿನ ಜಾವ 2 ಗಂಟೆಗೆ ಕರೆ ಮಾಡಿದರು ಎಂದು ಟ್ವೀಟ್ ಮಾಡಿದ್ದು ಮತ್ತೆ ವೈರಲ್ ಆಗಿದ್ದು ನಿನ್ನೆ ಶಾರೂಕ್ ಯಾರು ಎಂದು ಕೇಳಿದವರು ಇಂದು ಶಾರೂಕ್ ಖಾನ್ ಕರೆ ಮಾಡಿದರು ಎನ್ನುತ್ತಿದ್ದಾರೆ ಎಂದು ಟೀಕಿಸುತ್ತಿದ್ದಾರೆ. ಯು ಟರ್ನ್ ಹೊಡೆದ ಸಿಎಂ ಎಂದು ಟ್ರೋಲ್ ಮಾಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com