ಆರ್ ಆರ್ ಆರ್ ನಿಂದ ಮತ್ತೊಂದು ದಾಖಲೆ, ನಾಟು ನಾಟು ಹಾಡು ಆಸ್ಕರ್ ಗೆ ನಾಮನಿರ್ದೇಶನ

ಸಿನಿಮಾ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾ ಮತ್ತೊಂದು ದಾಖಲೆ ನಿರ್ಮಿಸಿದೆ.
ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು  ದೃಶ್ಯ
ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ದೃಶ್ಯ

ನವದೆಹಲಿ: ಸಿನಿಮಾ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾ ಮತ್ತೊಂದು ದಾಖಲೆ ನಿರ್ಮಿಸಿದೆ.

ಚಿತ್ರದ ಬಹುಜನಪ್ರಿಯ ಹಾಗೂ ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿರುವ ನಾಟು ನಾಟು ಹಾಡು ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಆಸ್ಕರ್ ಗೆ ನಾಮನಿರ್ದೇಶನಗೊಂಡಿದೆ. ಈ ವಿಭಾಗದಲ್ಲಿ ಈ ಸಿನಿಮಾ ಜೊತೆಗೆ ಟೆಲ್ ಇಟ್ ಲೈಕ್ ಎ ವುಮೆನ್ ಸಿನಿಮಾದಿಂದ ಅಪ್ಲೌಸ್ (Applause) ಎಂಬ ಹಾಡು, ಟಾಪ್ ಗನ್ ಸಿನಿಮಾದಿಂದ ಹೋಲ್ಡ್ ಮೈ ಹ್ಯಾಂಡ್, ಬ್ಲಾಕ್ ಪ್ಯಾಂಥರ್ ಸಿನಿಮಾದಿಂದ ಲಿಫ್ಟ್ ಮೀ ಅಪ್ ಹಾಡುಗಳು ನಾಮನಿರ್ದೇಶನಗೊಂಡಿವೆ.

ನಾವು ಇತಿಹಾಸ ಸೃಷ್ಟಿಸಿದ್ದೇವೆ. ನಾಟು ನಾಟು ಹಾಡು 95 ನೇ ಅಕಾಡೆಮಿ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ಮೂಲ ಹಾಡುಗಳ ವಿಭಾಗಕ್ಕೆ ನಾಮನಿರ್ದೇಶನಗೊಂಡಿದೆ ಎಂದು ಸಿನಿಮಾದ ಅಧಿಕೃತ ಟ್ವೀಟ್ ಪೇಜ್ ಟ್ವೀಟ್ ಮಾಡಿದೆ.

ನಾಟು ನಾಟು ಹಾಡಿಗೆ ಇದು ಮೂರನೇ ಅಂತಾರಾಷ್ಟ್ರೀಯ ಮನ್ನಣೆಯಾಗಿದ್ದು, ಎಂಎಂ ಕೀರವಾಣಿ ಸಂಯೋಜನೆ ಮಾಡಿದ್ದರೆ, ಕಾಲಭೈರವ ಹಾಗೂ ರಾಹುಲ್ ಸೊಪ್ಲಿಗಂಜ್ ಸಾಹಿತ್ಯ ಬರೆದಿದ್ದಾರೆ. ಇದಕ್ಕೂ ಮುನ್ನ ಇದೇ ಹಾಡಿಗೆ ಕೀರವಾಣಿ ಅವರಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಲಭಿಸಿತ್ತು.

ಇನ್ನು ಅತ್ಯುತ್ತಮ ವಿದೇಶಿ ಭಾಷೆ ಸಿನಿಮಾ ವಿಭಾಗದಲ್ಲಿ ವಿಮರ್ಶಕರ ಆಯ್ಕೆಯ ಪ್ರಶಸ್ತಿಗೂ ಸಿನಿಮಾ ಭಾಜನವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com