2023ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ: ಎಸ್ ಎಂ ಕೃಷ್ಣಗೆ ಪದ್ಮವಿಭೂಷಣ, ಭೈರಪ್ಪ, ಸುಧಾ ನಾರಾಯಣಮೂರ್ತಿಗೆ ಪದ್ಮ ಭೂಷಣ

2023ನೇ ಸಾಲಿನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ.
ಎಸ್ ಎಂ ಕೃಷ್ಣ, ಎಸ್ ಎಲ್ ಭೈರಪ್ಪ, ಸುಧಾ ನಾರಾಯಣಮೂರ್ತಿ
ಎಸ್ ಎಂ ಕೃಷ್ಣ, ಎಸ್ ಎಲ್ ಭೈರಪ್ಪ, ಸುಧಾ ನಾರಾಯಣಮೂರ್ತಿ

ನವದೆಹಲಿ: 2023ನೇ ಸಾಲಿನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ.

ಮಾಜಿ ವಿದೇಶಾಂಗ ಸಚಿವ, ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ, ಮಹಾರಾಷ್ಟ್ರದ ಕಲಾವಿದ ಜಾಕೀರ್ ಹುಸೇನ್, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ (ಮರಣೋತ್ತರ)  ಸೇರಿ 6 ಸಾಧಕರಿಗೆ ಪದ್ಮವಿಭೂಷಣ ಹಾಗೂ ಸಾಹಿತಿ ಎಸ್​ಎಲ್ ಭೈರಪ್ಪ, ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ, ಗಾಯಕಿ ವಾಣಿ ಜಯರಾಂ, ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾಮೂರ್ತಿ ಸೇರಿದಂತೆ 9 ಮಂದಿಗೆ ಪದ್ಮಭೂಷಣ ಸಿಕ್ಕಿದೆ.

ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ, ಬಾಲಿವುಡ್ ನಟಿ ರವೀನಾ ಟಂಡನ್ ಸೇರಿದಂತೆ  91 ಸಾಧಕರಿಗೆ ಪದ್ಮ ಶ್ರೀ ಪ್ರಶಸ್ತಿ ಲಭಿಸಿದೆ.  ಈ ಪೈಕಿ ಕರ್ನಾಟಕದ ಐವರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ. 

ಕೊಡಗಿನ ಉಮ್ಮತ್ತಾಟ್ ಜಾನಪದ ನೃತ್ಯ ಕಲೆ ಕಲಾವಿದೆ ರಾಣಿ ಮಾಚಯ್ಯ,  ಖಾದರ್ ವಲ್ಲಿ ದೂದೇಕುಲ ( ವಿಜ್ಞಾನ ಮತ್ತು ಇಂಜಿನಿಯರಿಂಗ್ ) ನಾಡೋಜ ಪಿಂಡಿ ಪಾಪನಹಳ್ಳಿ ಮುನಿವೆಂಕಟಪ್ಪ (ಕಲೆ) ಷಾ ರಶೀದ್ ಅಹ್ಮದ್ ಖಾದ್ರಿ (ಕಲೆ) ಶ್ರೀ ಸುಬ್ಬರಾಮನ್ (ಪುರಾತತ್ವ ಶಾಸ್ತ್ರ)  ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಈ ಮೂಲಕ ಕರ್ನಾಟಕದ ಒಟ್ಟು 8 ಸಾಧಕರು ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಓಆರ್ ಎಸ್ ಸಂಶೋಧಕ ದಿಲೀಪ್ ಮಹಲನಾಬಿಸ್ (ಮರಣೋತ್ತರ) ಪದ್ಮ ವಿಭೂಷಣ, ಜನುಮ್ ಸಿಂಗ್ ಸೋಯ್, ಧನಿರಾಮ್ ಟೊಟೊ, ನೆಕ್ರಮ್ ಶರ್ಮಾ, ಬಿ ರಾಮಕೃಷ್ಣ ರೆಡ್ಡಿ, ರತನ್ ಚಂದ್ರಕರ್ , ಹಿರಾ ಬಾಯಿ ಲುಬಿ, ಚಂದರ್ ದಾವರ್, ಚಂದ್ರಶೇಖರ್ ಅವರಿಗೆ ಪದ್ಮಶ್ರೀ ಲಭಿಸಿದೆ. ಈ ಮೂಲಕ ಒಟ್ಟು 106 ಸಾಧಕರಿಗೆ ಪದ್ಮ ಪ್ರಶಸ್ತಿ ಲಭಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com