'ವಿಮಾನ ಹೈಜಾಕ್ ಟ್ವೀಟ್' ಸ್ಪೈಸ್ ಜೆಟ್ ಪ್ರಯಾಣಿಕ ಜೈಲಿಗೆ!

ವಿಮಾನ ವಿಳಂಬದಿಂದ ಅಸಮಾಧಾನಗೊಂಡ 29 ವರ್ಷದ ಯುವಕನೊಬ್ಬ, ದುಬೈಯಿಂದ ಭಾರತಕ್ಕೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ಟ್ವೀಟರ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವಿಮಾನ ವಿಳಂಬದಿಂದ ಅಸಮಾಧಾನಗೊಂಡ 29 ವರ್ಷದ ಯುವಕನೊಬ್ಬ, ದುಬೈಯಿಂದ ಭಾರತಕ್ಕೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ಟ್ವೀಟರ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾನೆ.

ಆತ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಟ್ಯಾಗ್ ಕೂಡಾ ಮಾಡಿದ್ದಾನೆ. ಇದಾದ ಕೂಡಲೇ ಮಾಡಿದ ತಪ್ಪಿಗಾಗಿ ಪ್ರತಿಫಲ ಪಡೆದಿದ್ದಾನೆ.  ಸ್ಪಷ್ಟವಾಗಿ ಇಂಗ್ಲೀಷ್ ಬರೆಯುವಲ್ಲಿನ ಕೊರತೆಯಿಂದಾಗಿ ಈ ಪ್ರಮಾದ ಆಗಿದ್ದು, ಆತನನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. ನಂತರ ಪೊಲೀಸರು ಬಂಧಿಸಿದ್ದಾರೆ. 

ಯುವಕನನ್ನು ಮೋತಿ ಸಿಂಗ್ ರಾಥೋಡ್ ಎಂದು ಗುರುತಿಸಲಾಗಿದೆ. ಜನವರಿ 25 ರಂದು ಈ ಘಟನೆ ನಡೆದಿದೆ. ದುಬೈನಿಂದ ಜೈಪುರಕ್ಕೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ರಾಥೋಡ್ ಪ್ರಯಾಣಿಸುತ್ತಿದ್ದ.ಆದರೆ,  ಹವಾಮಾನ ವೈಪರೀತ್ಯದಿಂದಾಗಿ ವಿಮಾನ ದೆಹಲಿಯತ್ತ ಹೊರಟಿತ್ತು. 

ರಾಥೋಡ್ ಬುಧವಾರ ಬೆಳಗ್ಗೆ 9-45ರಲ್ಲಿ ಎಸ್ ಜಿ58 ವಿಮಾನದ ಮೂಲಕ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ್ದಾರೆ. ನಂತರ ಎಲ್ಲಾ ಕ್ಲಿಯರೆನ್ಸ್ ಮುಗಿದ ನಂತರ ವಿಮಾನ ಮಧ್ಯಾಹ್ನ 1-40ಕ್ಕೆ ಜೈಪುರಕ್ಕೆ ಹೊರಡಬೇಕಿತ್ತು. ಮಧ್ಯಾಹ್ನ 1.20 ರ ಸುಮಾರಿಗೆ ರಾಥೋಡ್ ಅವರು ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ ಎಂದು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಡಿಸಿಪಿ ರವಿಕುಮಾರ್ ಸಿಂಗ್ ತಿಳಿಸಿದ್ದಾರೆ. 

ದುಬೈನಿಂದ ಜೈಪುರಕ್ಕೆ ತೆರಳುತ್ತಿದ್ದ ಸ್ಪೈಸ್ ಜೆಟ್ ಎಸ್ ಜಿ 58 ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ರಾಥೋಡ್  ಟ್ವೀಟ್ ಮಾಡಿ, ಸಿಂಧಿಯಾ ಅವರಿಗೆ ಟ್ಯಾಗ್ ಮಾಡಿದ್ದ. ಸ್ಪೈಸ್ ಜೆಟ್ ಏರ್‌ಲೈನ್ಸ್ ಸಿಬ್ಬಂದಿಯೊಂದಿಗೆ ಕೆಲವು ಪ್ರಯಾಣಿಕರು ಜಗಳವಾಡುತ್ತಿರುವ ವೀಡಿಯೊವನ್ನು ರಾಥೋಡ್ ಫೋಸ್ಟ್ ಮಾಡಿದ್ದಾನೆ. ಕೊನೆಗೆ, ತಪ್ಪಿನ ಅರಿವಾಗಿದ್ದು, ಟ್ವೀಟರ್ ಮೂಲಕ ಕ್ಷಮೆಯಾಚಿಸಿದ್ದಾನೆ. ಇಂಗ್ಲೀಷ್ ನಲ್ಲಿ ಕೊರತೆಯಿದ್ದು, ವಿಮಾನ ವಿಳಂಬದಿಂದ ಆಕ್ರೋಶ ಹೊಂದಿದ್ದಾಗಿ ಆತ ತಿಳಿಸಿದ್ದಾನೆ. 

ಮುಂದಿನ ಕಾನೂನು ಕ್ರಮಕ್ಕಾಗಿ ರಾಥೋಡ್ ನನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು,ಆತನ ವಿರುದ್ಧ  ಐಪಿಸಿ ಸೆಕ್ಷನ್ 341 (ತಪ್ಪಾದ ಸಂಯಮ) 505 (1) (ಬಿ) (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಮತ್ತು 507 (ಅನಾಮಧೇಯ ಸಂವಹನದಿಂದ ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com