ಸ್ವತಃ ಸಿಎಂ ನಿತೀಶ್ ಕುಮಾರ್ ಹೇಳಿದರೂ ಪಕ್ಷ ಬಿಡುವುದಿಲ್ಲ: ಜೆಡಿಯು ಮುಖಂಡ ಉಪೇಂದ್ರ ಕುಶ್ವಾಹ
: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಜೆಡಿಯು ಪಕ್ಷದ ಸಂಸದೀಯ ಮಂಡಳಿ ಅಧ್ಯಕ್ಷ ಉಪೇಂದ್ರ ಕುಶ್ವಾಹ ನಡುವಿನ ವಾಗ್ಯುದ್ಧ ಮುಂದುವರಿದಿದೆ.
Published: 28th January 2023 12:23 PM | Last Updated: 28th January 2023 04:08 PM | A+A A-

ಉಪೇಂದ್ರ ಕುಶ್ವಾಹ
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಜೆಡಿಯು ಪಕ್ಷದ ಸಂಸದೀಯ ಮಂಡಳಿ ಅಧ್ಯಕ್ಷ ಉಪೇಂದ್ರ ಕುಶ್ವಾಹ ನಡುವಿನ ವಾಗ್ಯುದ್ಧ ಮುಂದುವರಿದಿದೆ.
ಶುಕ್ರವಾರ ತಮ್ಮ ದಾಳಿಯನ್ನು ಮುಂದುವರಿಸಿರುವ ಉಪೇಂದ್ರ ಕುಶ್ವಾಹ, ನಿತೀಶ್ ಅಥವಾ ಯಾವುದೇ ಪಕ್ಷದ ಹಿರಿಯ ನಾಯಕರು ಜೆಡಿಯು ತೊರೆಯುವಂತೆ ಕೇಳಿಕೊಂಡರೂ ತಾನು ಪಕ್ಷ ತೊರೆಯುವುದಿಲ್ಲ ಎಂದು ಕುಶ್ವಾಹ ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ಸಿಎಂ ನಿತೀಶ್ ಕುಮಾರ್, ಕುಶ್ವಾಹ ಅವರ ಸಮಸ್ಯೆ ನಿವಾರಿಸಲು ಚರ್ಚೆಗೆ ಆಹ್ವಾನಿಸಿದರು. ತಮ್ಮ ಮತ್ತು ಇತರ ಪಕ್ಷದ ನಾಯಕರ ವಿರುದ್ಧ ಕುಶ್ವಾಹ ಅವರ ಹೇಳಿಕೆಗೂ ಜೆಡಿಯುಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದರು.
ಜೆಡಿಯು ದುರ್ಬಲವಾಗುತ್ತಿದೆ ಎಂಬ ಕುಶ್ವಾಹಾ ಅವರ ಹೇಳಿಕೆಯನ್ನು ಅವರು ತಳ್ಳಿಹಾಕಿದರು. "ಯಾರು ಬರುತ್ತಾರೆ ಮತ್ತು ಯಾರು ಹೊರಗೆ ಹೋಗುತ್ತಾರೆ ಎಂಬುದು ಪಕ್ಷಕ್ಕೆ ಅಷ್ಟೇನೂ ಮುಖ್ಯವಲ್ಲ" ಎಂದು ನಿತೀಶ್ ಹೇಳಿದರು.
30 ದಿನಗಳಲ್ಲಿ 29 ದಿನಗಳ ಕಾಲ ಪಕ್ಷದ ಕೆಲವು ನಾಯಕರು ಸುತ್ತುವರಿದಿದ್ದರೂ ಪಕ್ಷದ ಸಮಸ್ಯೆಗಳ ಬಗ್ಗೆ ಚರ್ಚೆಗೆ ನಿತೀಶ್ ಕುಮಾರ್ ಐದು ನಿಮಿಷಗಳ ಕಾಲ ತಮ್ಮನ್ನು ಕರೆದಿಲ್ಲ ಎಂದು ಕುಶ್ವಾಹಾ ಆರೋಪಿಸಿದ್ದಾರೆ. “ನಾನು ಸುಳ್ಳು ಹೇಳಿದರೆ ಯಾವುದೇ ಕ್ರಮವನ್ನು ಎದುರಿಸಲು ನಾನು ಸಿದ್ಧನಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಮೈತ್ರಿಯಲ್ಲಿ ಬಿರುಕು? ನಿತೀಶ್ ಕುಮಾರ್ ದುರ್ಬಲಗೊಳಿಸಲು ಪಿತೂರಿ: ಜೆಡಿಯು ಹಿರಿಯ ನಾಯಕ ಉಪೇಂದ್ರ ಕುಶ್ವಾಹಾ ಆರೋಪ
"ವೋ ಬೇಟಾ ಕಿ ಕಸಮ್ ಖಾಕರ್ ಕಹ್ ದೇ ಕಿ ಹಮ್ ಝೂತ್ ಬೋಲ್ ರಹೆನ್ ಹೈಂ (ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಅವರ ಮಗನ ಹೆಸರಿನಲ್ಲಿ ಪ್ರಮಾಣ ಮಾಡಲು ಹೇಳಿ)" ಎಂದು ಅವರು ತಿಳಿಸಿದರು.
ಪಕ್ಷಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆಗಾಗಿ ನಿತೀಶ್ ಅವರನ್ನು ಭೇಟಿ ಮಾಡಲು ಸಿದ್ಧ ಎಂದು ಕುಶ್ವಾಹಾ ಹೇಳಿದರು. "ನಾನು ಯಾವುದೇ ದಿನ ಅವರನ್ನು ಭೇಟಿ ಮಾಡಲು ಸಿದ್ಧ" ಎಂದು ಕುಶ್ವಾಹಾ ತಿಳಿಸಿದ್ದಾರೆ.
ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಕೂಡಲೇ ಕರೆಯಬೇಕು, ಪಕ್ಷ ದುರ್ಬಲಗೊಂಡಿದೆ ಎಂಬುದನ್ನು ಅವರೇ ಹೇಳಬೇಕು ಎಂದು ಒತ್ತಾಯಿಸಿದರು. ಪಕ್ಷ ತೊರೆಯುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳ ಮೂಲಕ ಮೊದಲು ತಮ್ಮನ್ನು ಚರ್ಚೆಗೆ ಆಹ್ವಾನಿಸಿದ್ದು ನಿತೀಶ್ ಎಂದು ಕುಶ್ವಾಹ ಹೇಳಿಕೊಂಡಿದ್ದಾರೆ. ಆದರೆ ಈಗ ಅವರು ಪಕ್ಷದ ಸಮಸ್ಯೆಗಳನ್ನು ಮಾಧ್ಯಮಗಳಲ್ಲಿ ಪ್ರಸ್ತಾಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಜೆಡಿಯು ಹಿರಿಯ ನಾಯಕರಿಬ್ಬರೂ ತೀವ್ರ ಮಾತಿನ ಚಕಮಕಿ ನಡೆಸಿದ್ದು, ಸಿಎಂ ನಿತೀಶ್ ಅವರು ಕುಶ್ವಾಹಾ ಅವರನ್ನು ಪಕ್ಷ ತೊರೆಯುವಂತೆ ಕೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.