ಬಜೆಟ್ 2023: ಸ್ವಚ್ಛತೆ, ಸುರಕ್ಷತೆ ರೈಲ್ವೆ ಪ್ರಯಾಣಿಕರ ಬೇಡಿಕೆ; ಬೆಲೆ ಏರಿಕೆಗೆ ಪರಿಹಾರದ ನಿರೀಕ್ಷೆಯಲ್ಲಿ ಗೃಹಿಣಿಯರು

2023-24ನೇ ಸಾಲಿನ ಕೇಂದ್ರ ಬಜೆಟ್ ಗಾಗಿ ಕೌಂಟ್ ಡೌನ್ ಶುರುವಾಗಿದ್ದು, ಸಮಾಜದ ವಿವಿಧ ಕ್ಷೇತ್ರಗಳ ಜನರು ತಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ. ರೈಲ್ವೆ ಬಜೆಟ್ ಒಳಗೊಂಡಂತೆ ಕೇಂದ್ರ ಬಜೆಟ್ ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡನೆಯಾಗಲಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಟ್ನಾ: 2023-24ನೇ ಸಾಲಿನ ಕೇಂದ್ರ ಬಜೆಟ್ ಗಾಗಿ ಕೌಂಟ್ ಡೌನ್ ಶುರುವಾಗಿದ್ದು, ಸಮಾಜದ ವಿವಿಧ ಕ್ಷೇತ್ರಗಳ ಜನರು ತಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ. ರೈಲ್ವೆ ಬಜೆಟ್ ಒಳಗೊಂಡಂತೆ ಕೇಂದ್ರ ಬಜೆಟ್ ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡನೆಯಾಗಲಿದೆ. 

ಈ ಹಿಂದಿನ ಎರಡು ಕೇಂದ್ರ ಬಜೆಟ್ ಗಳಂತೆಯೇ ಈ ಬಾರಿಯೂ ಕಾಗದ ರಹಿತ ಮಾದರಿಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವ ಸಾಧ್ಯತೆಯಿದೆ. ರೈಲು ಪ್ರಯಾಣ ದರ ಹೆಚ್ಚಳವಾಗಬಾರದು, ಕಳೆದ ಕೆಲವು ವರ್ಷಗಳಲ್ಲಿ ಏರಿಕೆಯಾಗಿರುವ ದರವನ್ನು ಕಡಿಮೆ ಮಾಡಬೇಕು, ಪ್ಲಾಟ್ ಫಾರಂ ಟಿಕೆಗಳನ್ನು ಕಡಿಮೆಮ ಮಾಡಬೇಕು ಎಂದು ಪ್ರಯಾಣಿಕರೊಬ್ಬರು ಪಾಟ್ನಾ ರೈಲ್ವೆ ಜಂಕ್ಷನ್ ನಲ್ಲಿ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ವಂದೇ ಭಾರತ್ ಹಾಗೂ ಬುಲೆಟ್ ಟ್ರೈನ್ ರೈಲಿನಲ್ಲಿ ಮತ್ತಷ್ಟು ಉಲ್ಲಾಸದಾಯಕವನ್ನಾಗಿ ಮಾಡಬೇಕು, ದೇಶದ ಎಲ್ಲಾ ರಾಜ್ಯಗಳಲ್ಲಿ ವಂದೇ ಭಾರತ್ ರೈಲು ಸಂಚಾರಿಸಬೇಕು ಎಂದು ಪ್ರಯಾಣಿಕರು  ಒತ್ತಾಯಿಸಿದ್ದಾರೆ. ಸರ್ಕಾರ ಶೀಘ್ರದಲ್ಲೇ ಬುಲೆಟ್ ರೈಲು ಪರಿಚಯಿಸುವ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ ಮತ್ತೋರ್ವ ಪ್ರಯಾಣಿಕ, ರೈಲ್ಲಿನಲ್ಲಿ ಮತ್ತಷ್ಟು ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದರು. ದೇಶಾದ್ಯಂತ ರೈಲುಗಳು ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ನಿರಂತರವಾಗಿ ರೈಲಿನಲ್ಲಿ ಓಡಾಡುವ ಪ್ರಯಾಣಿಕರು ಹೇಳಿದರು.

ಹೊರಗಡೆಗಳಲ್ಲಿ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಪ್ರತ್ಯೇಕ ರೈಲಿಗೆ ವ್ಯವಸ್ಥೆ ಮಾಡಬೇಕು, ಇತರ ನಗರಗಳಿಗೆ ತೆರಳಿ ಪರೀಕ್ಷೆ ಬರೆಯುವವರಿಗೆ ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಇತರ ಪರೀಕ್ಷೆಗಳ ಅಧ್ಯಯನಕ್ಕೆ ಅನುಕೂಲವಾಗುಂತೆ ರೈಲ್ವೆ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು. ರೈಲಿನಲ್ಲಿ ಮತ್ತಷ್ಟು ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಮಹಿಳಾ ಪ್ರಯಾಣಿಕರು ತಿಳಿಸಿದರು. ಪ್ರಯಾಣಿಕರ ಸುರಕ್ಷತೆ, ಸ್ವಚ್ಛತೆಗೆ ಹೆಚ್ಚಿನ ಹಣ ಮೀಸಲಿಡಬೇಕು ಎಂದು ಮತ್ತೋರ್ವ ಪ್ರಯಾಣಿಕರು ತಿಳಿಸಿದರು.

ಈ ಮಧ್ಯೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ಕಷ್ಟಕರವಾಗಿದ್ದು, ಎಲ್ ಪಿಜಿ ಸಿಲಿಂಡರ್ ಮತ್ತಿತರ ವಸ್ತುಗಳ ಬೆಲೆಯನ್ನು ಸರ್ಕಾರ ಕಡಿಮೆಗೊಳಿಸಬೇಕು ಎಂದು ಗೃಹಿಣಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com