ಪೆನ್ನಾರ್‌ ಜಲ ವಿವಾದವನ್ನು ಕರ್ನಾಟಕ ಮಾತುಕತೆ ಮೂಲಕ ಬಗೆಹರಿಸಲು ಇಚ್ಛಿಸುತ್ತದೆ: ಡಿ.ಕೆ ಶಿವಕುಮಾರ್

ತಮಿಳುನಾಡಿನೊಂದಿಗೆ ಇರುವ ಪೆನ್ನಾರ್ ಜಲ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಕರ್ನಾಟಕ ಇಚ್ಛಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ತಮಿಳುನಾಡಿನೊಂದಿಗೆ ಇರುವ ಪೆನ್ನಾರ್ ಜಲ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಕರ್ನಾಟಕ ಇಚ್ಛಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಇದೇ ವೇಳೆ ಪೆನ್ನಾರ್ ನದಿ ನೀರು ಹಂಚಿಕೆಗಾಗಿ ಟ್ರಿಬ್ಯೂನಲ್ ನ್ನು ರಚಿಸದಂತೆ ಡಿಕೆ ಶಿವಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
 
ಕೇಂದ್ರ ಜಲಶಕ್ತಿ ಸಚಿವಾಲಯ ಅಂತರರಾಜ್ಯಗಳ ಜಲ ವಿವಾದಗಳ ಟ್ರಿಬ್ಯೂನಲ್ ನ್ನು ಜು.05 ರ ವೇಳೆಗೆ ರಚಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ಈ ಹೇಳಿಕೆ ನೀಡಿದ್ದಾರೆ.

ಪೆನ್ನಾರ್ ನದಿ ನೀರು ಹಂಚಿಕೆ ಸಂಬಂಧ ಟ್ರಿಬ್ಯೂನಲ್ ನ್ನು ಸ್ಥಾಪಿಸದಂತೆ ನಾನು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಮಾಡಿದ್ದೇನೆ, ಕರ್ನಾಟಕ ಈ ನದಿ ನೀರು ಹಂಚಿಕೆ ವಿವಾದವನ್ನು ಸೌಹಾರ್ದಯುತವಾಗಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಇಚ್ಛಿಸುತ್ತದೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಗುರುವಾರ ಡಿಕೆ ಶಿವಕುಮಾರ್ ಕೇಂದ್ರ ಸಚಿವರನ್ನು ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಭೇಟಿ ಮಾಡಿ ಚರ್ಚಿಸಿದ್ದರು.

ತಮಿಳುನಾಡು ಸರ್ಕಾರ ಟ್ರಿಬ್ಯೂನಲ್ ರಚಿಸುವಂತೆ ಸುಪ್ರೀಂ ಕೋರ್ಟ್ ಎದುರು ಮನವಿ ಮಾಡಿದೆ ಆದರೆ ಕರ್ನಾಟಕ ಅದನ್ನು ವಿರೋಧಿಸುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಈ ವಿಷಯವಾಗಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಜಲಶಕ್ತಿ ಸಚಿವಾಲಯವನ್ನು ಅದರ ನಿಲುವು ಪ್ರಕಟಿಸುವಂತೆ ಸೂಚಿಸಿತ್ತು. ಸುಪ್ರೀಂ ಕೋರ್ಟ್ ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಸಚಿವಾಲಯ ಜು.05 ರ ವೇಳೆಗೆ ಟ್ರಿಬ್ಯೂನಲ್ ರಚನೆ ಮಾಡುವುದಾಗಿ ಹೇಳಿತ್ತು.

ಕರ್ನಾಟಕ ಸರ್ಕಾರ ಕೋಲಾರ ಜಿಲ್ಲೆಯ ಯಾರ್ಗೋಲ್ ಗ್ರಾಮದ ಬಳಿ ಮಾರ್ಕಂಡೇಯ ನದಿಗೆ ಅಣೆಕಟ್ಟು ನಿರ್ಮಿಸಲು ಮುಂದಾಗುತ್ತಿದ್ದು, ಈ ಮೂಲಕ ಕೋಲಾರ ಜಿಲ್ಲೆ, ಮಾಲೂರು, ಬಂಗಾರಪೇಟೆ ತಾಲೂಕು ಸೇರಿದಂತೆ 40 ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಉದ್ದೇಶಿಸಿದೆ. 240 ಕೋಟಿ ರೂಪಾಯಿ ವೆಚ್ಚದಲ್ಲಿ ಅಣೆಕಟ್ಟು ನಿರ್ಮಿಸಲು ಎಲ್ಲಾ ಅನುಮತಿಗಳನ್ನು ಪಡೆದಿದೆ. 

ಆದರೆ ಮಾರ್ಕಂಡೇಯ ನದಿ ಪೆನ್ನಾರ್ ನದಿಯ ಉಪನದಿ, ಕರ್ನಾಟಕ ಅಣೆಕಟ್ಟು ನಿರ್ಮಿಸಿದರೆ ಪೆನ್ನಾರ್ ನದಿಯ ನೈಸರ್ಗಿಕ ಹರಿವಿಗೆ ಅಡ್ಡಿಯಾಗುತ್ತದೆ ಎಂದು ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com