ನಾಳೆ ಗ್ರಾಮಾಂತರ ಚುನಾವಣೆಗೆ ಮತದಾನ: ಬಂಗಾಳದಲ್ಲಿ ಮತ್ತಷ್ಟು ರಕ್ತಪಾತದ ಭೀತಿ ನಡುವೆ ಮೂರು ಶವಗಳು ಪತ್ತೆ

ನಾಳೆ ನಡೆಯಲಿರುವ ಮೂರು ಹಂತದ ಪಂಚಾಯತ್ ಚುನಾವಣೆಗಳು ಮುಂದಿನ ಐದು ವರ್ಷಗಳ ಕಾಲ ಬಂಗಾಳದ ಗ್ರಾಮೀಣ ರಾಜಕೀಯ ವ್ಯವಸ್ಥೆಯಲ್ಲಿ ಯಾರು ಪ್ರಾಬಲ್ಯ ಸಾಧಿಸಲಿದ್ದಾರೆ ಎಂಬುದನ್ನು ನಿರ್ಧರಿಸುವುದಲ್ಲದೆ, ಆದರೆ ರಾಜ್ಯದಲ್ಲಿ 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲ್ಕತ್ತಾ: ನಾಳೆ ನಡೆಯಲಿರುವ ಮೂರು ಹಂತದ ಪಂಚಾಯತ್ ಚುನಾವಣೆಗಳು ಮುಂದಿನ ಐದು ವರ್ಷಗಳ ಕಾಲ ಬಂಗಾಳದ ಗ್ರಾಮೀಣ ರಾಜಕೀಯ ವ್ಯವಸ್ಥೆಯಲ್ಲಿ ಯಾರು ಪ್ರಾಬಲ್ಯ ಸಾಧಿಸಲಿದ್ದಾರೆ ಎಂಬುದನ್ನು ನಿರ್ಧರಿಸುವುದಲ್ಲದೆ, ಆದರೆ ರಾಜ್ಯದಲ್ಲಿ 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ.

ಕಳೆದ ಒಂದು ತಿಂಗಳಿನಿಂದ ನಡೆದ ಹಿಂಸಾಚಾರ ಪ್ರಕರಣಗಳಲ್ಲಿ ಈಗಾಗಲೇ 19 ಜೀವಗಳನ್ನು ಬಲಿ ಪಡೆದಿದೆ. ಬಂಗಾಳವು ಚುನಾವಣಾ ರ್ಯಾಲಿಗಳ ಸಮಯದಲ್ಲಿ ಹೆಚ್ಚು ರಕ್ತಪಾತ ಸಂಭವಿಸಿತ್ತು. ಅದು ಸೂರ್ಯೋದಯದ ನಂತರ ಇಂತಹ ಕೃತ್ಯಗಳ ನಡೆದಿವೆ.

ಹಿಂಸಾಚಾರದ ನಿರೀಕ್ಷೆಗೆ ಪುಷ್ಠಿಕೊಡುವಂತೆ ಮುರ್ಷಿದಾಬಾದ್ ಮತ್ತು ಉತ್ತರ 24 ಪರಗಣ ಜಿಲ್ಲೆಗಳಿಂದ ಕಳೆದ 24 ಗಂಟೆಗಳಲ್ಲಿ ಮೂರು ಮೃತದೇಹಗಳು ಪತ್ತೆಯಾಗಿದೆ. ಅಲ್ಪಸಂಖ್ಯಾತರ ಪ್ರಾಬಲ್ಯದ ಜಿಲ್ಲೆಯಾದ ಮುರ್ಷಿದಾಬಾದ್‌ನಲ್ಲಿ ಎರಡು ಶವಗಳು ಪತ್ತೆಯಾಗಿದ್ದು, ಇತ್ತೀಚಿನ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಆಡಳಿತ ಪಕ್ಷದಿಂದ ಸಾಗರ್ದಿಘಿ ಅಸೆಂಬ್ಲಿ ಸ್ಥಾನವನ್ನು ಕಾಂಗ್ರೆಸ್ ಕಸಿದುಕೊಂಡಿತ್ತು.

ಶನಿವಾರ ಸುಮಾರು 5.67 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಗ್ರಾಮೀಣ ಚುನಾವಣೆಯ ಕಣದಲ್ಲಿ 2,06,295 ಸ್ಪರ್ಧಿಗಳಿದ್ದು ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಚುನಾವಣಾ ಕದನದಲ್ಲಿ 71,938 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅಲ್ಲದೆ ಟಿಎಂಸಿ ಅವಿರೋಧವಾಗಿ ಹಲವು ಸ್ಥಾನಗಳನ್ನು ಗೆದ್ದಿದೆ.

ಮುರ್ಷಿದಾಬಾದ್‌ನ ರಾಣಿನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಶವ ಪತ್ತೆಯಾಗಿದೆ. ಆತನನ್ನು ತೃಣಮೂಲ ಕಾಂಗ್ರೆಸ್ ಸದಸ್ಯರು ಹೊಡೆದು ಕೊಂದಿದ್ದಾರೆ ಎಂದು ಪಕ್ಷ ಆರೋಪಿಸಿದೆ. ಬೆಲ್ದಂಗದಲ್ಲಿ ಮತ್ತೊಂದು ಶವ ಪತ್ತೆಯಾಗಿದ್ದು, ಮೃತರು ರಾಜಕೀಯ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆಯೇ ಎಂಬುದನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ. ಉತ್ತರ 24 ಪರಗಣದ ಬೊಂಗಾವ್‌ನಲ್ಲಿ, ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದ 40 ವರ್ಷದ ವ್ಯಕ್ತಿಯ ದೇಹವು ಗುಂಡಿನ ಗಾಯಗಳೊಂದಿಗೆ ಪತ್ತೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com