ಶ್ರೀನಗರ: ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದರೆ ಎಲ್ಲಾ ಧರ್ಮಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಜಾದ್ ಅವರು ಶನಿವಾರ ಹೇಳಿದ್ದಾರೆ.
ಇಂದು ಶ್ರೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಸಿಸಿಯನ್ನು ಜಾರಿಗೊಳಿಸುವುದು "ಆರ್ಟಿಕಲ್ 370 ರದ್ದುಗೊಳಿಸದಂತೆ ಸುಲಭವಲ್ಲ" ಎಂದಿದ್ದಾರೆ.
"ಅದನ್ನು ಜಾರಿಗೊಳಿಸುವ(ಯುಸಿಸಿ) ಪ್ರಶ್ನೆಯೇ ಇಲ್ಲ. 370ನೇ ವಿಧಿಯನ್ನು ಹಿಂತೆಗೆದುಕೊಳ್ಳುವುದು ಸುಲಭವಲ್ಲ. ಎಲ್ಲಾ ಧರ್ಮಗಳು ಇದರಲ್ಲಿ ಭಾಗಿಯಾಗಿವೆ. ಮುಸ್ಲಿಮರು ಮಾತ್ರವಲ್ಲ, ಕ್ರಿಶ್ಚಿಯನ್ನರು ಮತ್ತು ಸಿಖ್ಖರು, ಆದಿವಾಸಿಗಳು, ಜೈನರು, ಪಾರ್ಸಿಗಳು ಸೇರಿದಂತೆ ಎಲ್ಲ ಜನರಿಗೂ ತೊಂದರೆಯಾಗಲಿದೆ. ಇದರಿಂದ ಯಾವುದೇ ಸರ್ಕಾರಕ್ಕೂ ಒಳ್ಳೆಯದಾಗುವುದಿಲ್ಲ ಎಂದು ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ ಅಧ್ಯಕ್ಷ ಗುಲಾಂ ನಬಿ ಆಜಾದ್ ಅವರು ಹೇಳಿದ್ದಾರೆ.
ದೇಶದಲ್ಲಿ ಯುಸಿಸಿ ಜಾರಿಗೊಳಿಸುವ ಬಗ್ಗೆ ಯೋಚಿಸಬೇಡಿ ಎಂದು ನಾನು ಈ ಸರ್ಕಾರಕ್ಕೆ ಸೂಚಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
Advertisement