ರಣಚಂಡಿ ಮಳೆಗೆ ದೆಹಲಿ ತತ್ತರ: ಮೂರು ನೀರು ಸಂಸ್ಕರಣಾ ಘಟಕ ಬಂದ್, ಕುಡಿಯುವ ನೀರಿಗೆ ತಾತ್ವಾರ!
ರಣಚಂಡಿ ಮಳೆಗೆ ರಾಷ್ಟ್ರ ರಾಜಧಾನಿ ತತ್ತರಿಸಿದೆ. ಯಮುನಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳದಿಂದಾಗಿ ಮೂರು ನೀರು ಸಂಸ್ಕರಣಾ ಘಟಕಗಳನ್ನು ಬಂದ್ ಮಾಡಿದ ನಂತರ ಸರ್ಕಾರ ಶೇ. 25 ರಷ್ಟು ನೀರಿನ ಪೂರೈಕೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದು, ಕುಡಿಯುವ ನೀರಿನ ಕೊರತೆ ಎದುರಾಗಿದೆ.
Published: 13th July 2023 08:43 PM | Last Updated: 13th July 2023 10:58 PM | A+A A-

ದೆಹಲಿ ಮೆಟ್ರೋ ಮಾರ್ಗದ ಚಿತ್ರ
ನವದೆಹಲಿ: ರಣಚಂಡಿ ಮಳೆಗೆ ರಾಷ್ಟ್ರ ರಾಜಧಾನಿ ತತ್ತರಿಸಿದೆ. ಯಮುನಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳದಿಂದಾಗಿ ಮೂರು ನೀರು ಸಂಸ್ಕರಣಾ ಘಟಕಗಳನ್ನು ಬಂದ್ ಮಾಡಿದ ನಂತರ ಸರ್ಕಾರ ಶೇ. 25 ರಷ್ಟು ನೀರಿನ ಪೂರೈಕೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದು, ಕುಡಿಯುವ ನೀರಿನ ಕೊರತೆ ಎದುರಾಗಿದೆ.
ವಜೀರಾಬಾದ್ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕುಡಿಯುವ ನೀರಿನ ತೀವ್ರ ಕೊರತೆ ಬಿಕ್ಕಟ್ಟು ಎದುರಿಸಲು ನೀರಿನ ಪೂರೈಕೆಯನ್ನು ಕಡಿತಗೊಳಿಸುವ ಎಚ್ಚರಿಕೆ ನೀಡಿದರು. ಯಮುನಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳದಿಂದಾಗಿ ಮೂರು ನೀರು ಸಂಸ್ಕರಣಾ ಘಟಕಗಳನ್ನು ಮುಚ್ಚಲಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ತಕ್ಷಣ ಮುಚ್ಚಲಾಗಿರುವ ನೀರಿನ ಸಂಸ್ಕರಣಾ ಘಟಕಗಳನ್ನು ಪುನರ್ ಆರಂಭಿಸಲಾಗುವುದು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಯಮುನಾ ನದಿ ಹರಿವು ಹೆಚ್ಚಳ: ದೆಹಲಿಯಲ್ಲಿ 12 ಎನ್ ಡಿಆರ್ ಎಫ್ ತಂಡ ನಿಯೋಜನೆ
ಇದಕ್ಕೂ ಮುನ್ನಾ ಟ್ವೀಟ್ ಮಾಡಿದ್ದ ಕೇಜ್ರಿವಾಲ್, ಯಮುನಾ ಮಟ್ಟ ಹೆಚ್ಚುತ್ತಿರುವ ಕಾರಣ ವಜೀರಾಬಾದ್, ಚಂದ್ರವಾಲ್ ಮತ್ತು ಓಖ್ಲಾ ನೀರಿನ ಸಂಸ್ಕರಣಾ ಘಟಕಗಳನ್ನು ಮುಚ್ಚುವುದಾಗಿ ಘೋಷಿಸಿದರು. ಯಮುನಾ ನದಿ ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣ ವಜೀರಾಬಾದ್, ಚಂದ್ರವಾಲ್ ಮತ್ತು ಓಖ್ಲಾದಲ್ಲಿನ ನೀರು ಸಂಸ್ಕರಣಾ ಘಟಕಗಳನ್ನು ಮುಚ್ಚಲಾಗುತ್ತಿದೆ ಇದರಿಂದಾಗಿ, ಕೆಲವು ಪ್ರದೇಶಗಳಲ್ಲಿ ನೀರಿನ ಪೂರೈಕೆಯ ಸಮಸ್ಯೆ ಉಂಟಾಗುತ್ತದೆ. ಯಮುನಾ ನೀರು ಕಡಿಮೆಯಾದ ತಕ್ಷಣ ಈ ಘಟಕಗಳು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಸಂಸ್ಕರಣಾ ಘಟಕಗಳನ್ನು ಸ್ಥಗಿತಗೊಳಿಸುವುದರಿಂದ ನಗರದ ಕೆಲವು ಭಾಗಗಳಲ್ಲಿ ನೀರು ಪೂರೈಕೆಗೆ ತೊಂದರೆಯಾಗಬಹುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಎಲ್ ಕೆ ಸಕ್ಸೇನಾ ನೇತೃತ್ವದಲ್ಲಿ ನಡೆದ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲೂ ಈ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಯಿತು. ಸಂಸ್ಕರಣಾ ಘಟಕಗಳು ಬಂದ್ ಆಗಿರುವ ಕಾರಣ ನೀರಿನ ಪೂರೈಕೆಯಲ್ಲಿ ಕಡಿತಗೊಳಿಸಲು ನಿರ್ಧರಿಸಲಾಯಿತು.
ಇದನ್ನೂ ಓದಿ: 3 ದಿನದಿಂದ ಮಳೆಯಿಲ್ಲ.. ಆದರೂ ಪ್ರವಾಹ; ಮೆಟ್ರೋಗೆ ಸ್ಪೀಡ್ ಲಿಮಿಟ್, ಅಗತ್ಯ ವಸ್ತುಗಳ ಟ್ರಕ್‌ಗಳಿಗೆ ಮಾತ್ರ ದೆಹಲಿಯಲ್ಲಿ ಅವಕಾಶ!!
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ನೀರಿನ ಕೊರತೆಯಾಗುವ ಸಾಧ್ಯತೆಯಿದೆ. ಮೂರು ಘಟಕಗಳಿಂದ ನೀರಿನ ಸಂಸ್ಕರಣ ಶೇ, 25 ರಷ್ಟು ಕಡಿತವಾಗಿದೆ. ಮುಂದಿನ ಒಂದೆರೆಡು ದಿನಗಳ ಕಾಲ ಜನರು ನೀರಿನ ಕೊರತೆ ಕಾಡಲಿದೆ ಎಂದು ತಿಳಿಸಿದರು.
यमुना में जलस्तर बढ़ने के बाद पैदा हुए हालात पर आज DDMA की बैठक हुई।
— Arvind Kejriwal (@ArvindKejriwal) July 13, 2023
दिल्ली में सभी स्कूल, कॉलेज और यूनिवर्सिटी को रविवार तक के लिए बंद किया जा रहा है।
सभी non-essential सरकारी दफतरों को work from home से किया जा रहा है। प्राइवेट ऑफ़िस को भी Work from home लागू करने की… pic.twitter.com/kiPVHsyXMW