ಚಂದ್ರಯಾನ-3 ಯಶಸ್ವಿ ಉಡಾವಣೆ: ಕ್ಯಾಮೆರಾ ವಿನ್ಯಾಸಕ ಅನುಜ್ ನಂದಿ ಕುಟುಂಬದಲ್ಲಿ ಕಳೆಕಟ್ಟಿದ ಸಂಭ್ರಮ!

ಚಂದ್ರಯಾನ 3ರ ಕ್ಯಾಮೆರಾವನ್ನು ವಿನ್ಯಾಸಗೊಳಿಸಿದ ಇಸ್ರೋ ವಿಜ್ಞಾನಿ ಅನುಜ್ ನಂದಿ ಅವರ ಕುಟುಂಬ ಸದಸ್ಯರು ಯಶಸ್ವಿ ಉಡಾವಣೆಯ ನಂತರವೂ ತಮ್ಮ ನೆರಹೊರೆಯವರೊಂದಿಗೆ ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ.
ಅನುಜ್ ನಂದಿ
ಅನುಜ್ ನಂದಿ
Updated on

ಕೋಲ್ಕತ್ತಾ: ಚಂದ್ರಯಾನ 3ರ ಕ್ಯಾಮೆರಾವನ್ನು ವಿನ್ಯಾಸಗೊಳಿಸಿದ ಇಸ್ರೋ ವಿಜ್ಞಾನಿ ಅನುಜ್ ನಂದಿ ಅವರ ಕುಟುಂಬ ಸದಸ್ಯರು ಯಶಸ್ವಿ ಉಡಾವಣೆಯ ನಂತರವೂ ತಮ್ಮ ನೆರಹೊರೆಯವರೊಂದಿಗೆ ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ. 

ಪಶ್ಚಿಮ ಬಂಗಾಳದ ಸಣ್ಣ ಪಟ್ಟಣವಾದ ಇಸ್ಲಾಂಪುರದಲ್ಲಿ ಅನುಜ್ ನಂದಿ ಕುಟುಂಬ ನೆಲೆಸಿದೆ. ಉಡಾವಣೆಯನ್ನು ವೀಕ್ಷಿಸಿದ ನಂದಿ ಅವರ 70 ವರ್ಷದ ತಾಯಿ ಈಗ ತಮ್ಮ ಮಗ ವಿನ್ಯಾಸಗೊಳಿಸಿದ ಉಪಕರಣಗಳು ಲ್ಯಾಂಡಿಂಗ್‌ನಲ್ಲಿ ದೋಷರಹಿತವಾಗಿ ಕಾರ್ಯನಿರ್ವಹಿಸಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಅನುಜ್ ಅವರ ಸೋದರ ಸಂಬಂಧಿಯ ಪತ್ನಿ ರಿಂಕು ನಂದಿ ಶುಕ್ರವಾರ ಉತ್ತರ ದಿನಾಜ್‌ಪುರ ಜಿಲ್ಲೆಯ ಇಸ್ಲಾಂಪುರದಲ್ಲಿರುವ ಸ್ಥಳೀಯ ಸಿದ್ದೇಶ್ವರಿ ಮಂದಿರದಲ್ಲಿ ಪೂಜೆ ಸಲ್ಲಿಸಿದರು.

'ನಾವು ಇಡೀ ಕಾರ್ಯಕ್ರಮವನ್ನು ದೂರದರ್ಶನದಲ್ಲಿ ವೀಕ್ಷಿಸಿದ್ದೇವೆ. ನಮ್ಮ ಕುಟುಂಬದ ಒಬ್ಬರು ಚಂದ್ರಯಾನ-3 ರ ತಂಡದ ಸದಸ್ಯರಾಗಿರುವುದು ನಮ್ಮ ಸಂತೋಷಕ್ಕೆ ಮತ್ತು ಹೆಮ್ಮೆ ಪಡುವುದಕ್ಕೆ ಕಾರಣವಾಗಿದೆ ಎಂದು ರಿಂಕು ನಂದಿ ಶನಿವಾರ ಫೋನ್ ಮೂಲಕ ಪಿಟಿಐಗೆ ತಿಳಿಸಿದರು.

ಅನುಜ್ ಅವರ ಕಿರಿಯ ಸೋದರಸಂಬಂಧಿ ಅನಿಮೇಶ್ ನಂದಿ ಅವರು ವಿಷಯ ಅಥವಾ ಬಾಹ್ಯಾಕಾಶ ಕಾರ್ಯಾಚರಣೆಯ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ, ಅವರ ಹಿರಿಯ ಸೋದರಸಂಬಂಧಿ 'ಏನೋ ದೊಡ್ಡದನ್ನು' ಸಾಧಿಸಿದ್ದಾರೆ ಎಂದು ಮಾತ್ರ ಅರ್ಥಮಾಡಿಕೊಳ್ಳಬಹುದು ಎಂದು ಹೇಳಿದರು.

ಇಸ್ಲಾಂಪುರ ಆಶ್ರಂಪಾರ ನಿವಾಸಿಯಾಗಿರುವ ಅನುಜ್ ನಂದಿ ಅವರು ಅಂಬಗಾನ್ ಪ್ರಾಥಮಿಕ ಶಾಲೆಗೆ ಹೋಗಿ ನಂತರ ಇಸ್ಲಾಂಪುರ ಪ್ರೌಢಶಾಲೆಯಲ್ಲಿ ಓದುತ್ತಿದ್ದರು ಎಂದು ಅನಿಮೇಶ್ ಹೇಳಿದರು.

ಅನುಜ್ ತಮ್ಮ ಪದವಿಯನ್ನು ರಾಯಗಂಜ್ ಜಿಲ್ಲಾ ಕೇಂದ್ರದಲ್ಲಿರುವ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ನಂತರ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಇಸ್ಲಾಂಪುರದಲ್ಲಿ ಮೆಡಿಕಲ್ ಸ್ಟೋರ್ ನಡೆಸುತ್ತಿರುವ ಅನಿಮೇಶ್, ತನ್ನ ಸೋದರಸಂಬಂಧಿಯನ್ನು ಈ ಹಿಂದೆ ಕೋಲ್ಕತ್ತಾದಲ್ಲಿ ನಿಯೋಜಿಸಲಾಗಿತ್ತು. ನಂತರ ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ವರ್ಗಾಯಿಸಲಾಯಿತು ಎಂದು ಹೇಳಿದರು.

"ಇಸ್ಲಾಂಪುರದಂತಹ ಚಿಕ್ಕ ಸ್ಥಳದ ಹುಡುಗನೊಬ್ಬ ಇಸ್ರೋಗೆ ಸೇರ್ಪಡೆಗೊಂಡು ಚಂದ್ರಯಾನ-3 ಯೋಜನೆಗೆ ಕೊಡುಗೆ ನೀಡಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com