ದೇಶ ವಿರೋಧಿ ಚಟುವಟಿಕೆ: ಕಾಶ್ಮೀರ ವಿವಿ ಪಿಆರ್ ಒ ಸೇರಿ ಮೂವರು ಸರ್ಕಾರಿ ನೌಕರರ ವಜಾ

ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಡಳಿತ, ಕಾಶ್ಮೀರ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ(ಪಿಆರ್‌ಒ) ಮತ್ತು ಓರ್ವ ಪೊಲೀಸ್ ಸೇರಿದಂತೆ ಮೂವರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಡಳಿತ, ಕಾಶ್ಮೀರ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ(ಪಿಆರ್‌ಒ) ಮತ್ತು ಓರ್ವ ಪೊಲೀಸ್ ಸೇರಿದಂತೆ ಮೂವರು ಸರ್ಕಾರಿ ನೌಕರರನ್ನು ಸೋಮವಾರ ವಜಾಗೊಳಿಸಿದ್ದಾರೆ.

ವಜಾಗೊಂಡ ಮೂವರು ಉದ್ಯೋಗಿಗಳನ್ನು ಕಾಶ್ಮೀರ ವಿಶ್ವವಿದ್ಯಾಲಯದ ಪಿಆರ್‌ಒ ಫಹೀಮ್ ಅಸ್ಲಾಂ, ಗ್ರಾಮೀಣಾಭಿವೃದ್ಧಿ ಇಲಾಖೆ ಉದ್ಯೋಗಿ ಮುರಾವತ್ ಹುಸೇನ್ ಮಿರ್ ಮತ್ತು ಕಾನ್‌ಸ್ಟೆಬಲ್ ಅರ್ಷಿದ್ ಅಹ್ಮದ್ ಥೋಕರ್ ಎಂದು ಗುರುತಿಸಲಾಗಿದೆ.

ಪ್ರತ್ಯೇಕತಾವಾದಿ ಅಜೆಂಡಾವನ್ನು ಮುಂದುವರಿಸಿದ ಆರೋಪದ ಮೇಲೆ ಈ ಮೂವರು ನೌಕರರ ವಿರುದ್ಧ ಸಂವಿಧಾನದ ಸೆಕ್ಷನ್311(2) ಅನ್ನು ಅನ್ವಯಿಸುವ ಮೂಲಕ ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗಿದೆ.

ವಿಶೇಷ ಕಾರ್ಯಪಡೆ(STF)ಯ ಶಿಫಾರಸಿನ ಮೇರೆಗೆ ಈ ಮೂವರು ನೌಕರರನ್ನು ವಜಾಗೊಳಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ತಿಳಿಸಿದೆ.

ಇದಕ್ಕೂ ಮೊದಲು, ಕಳೆದ ವರ್ಷ ಮೇ ತಿಂಗಳಲ್ಲಿ ಕಾಶ್ಮೀರ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಅಲ್ತಾಫ್ ಹುಸೇನ್ ಪಂಡಿತ್ ಅವರನ್ನು ಸಂವಿಧಾನದ ಸೆಕ್ಷನ್ 311 (2) ಅನ್ನು ಅನ್ವಯಿಸುವ ಮೂಲಕ ವಜಾಗೊಳಿಸಲಾಗಿತ್ತು.

ಭಾರತ ಸಂವಿಧಾನದ 311(2)ನೇ ವಿಧಿಯ ನಿಬಂಧನೆಗಳನ್ನು ಅನ್ವಯಿಸುವ ಮೂಲಕ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಆರೋಪದ ಮೇಲೆ ಕಾಶ್ಮೀರ ಸರ್ಕಾರವು ಇದುವರೆಗೆ 50ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com