ಧಾರ್ಮಿಕ ನೆಲೆಯಲ್ಲಿ ಭಾರತದ ವಿಭಜನೆಗೆ ಕಾರಣವಾದ ಜಿನ್ನಾ ಅವರ ಇಂಡಿಯನ್ ಮುಸ್ಲಿಂ ಲೀಗ್ ಹೇಗೆ ಜಾತ್ಯತೀತ ಪಕ್ಷ?

ಇಂಡಿಯನ್ ಮುಸ್ಲಿಂ ಲೀಗ್ (ಐಯುಎಂಎಲ್‌) ಒಂದು ಪರಿಪೂರ್ಣವಾದ ಜಾತ್ಯಾತೀತ ಪಕ್ಷ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ  ಹೇಳಿಕೆಗೆ ಕೇಂದ್ರ ಸಚಿವ ಕಿರಣ್ ರಿಜಿಜು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಇಂಡಿಯನ್ ಮುಸ್ಲಿಂ ಲೀಗ್ (ಐಯುಎಂಎಲ್‌) ಒಂದು ಪರಿಪೂರ್ಣವಾದ ಜಾತ್ಯಾತೀತ ಪಕ್ಷ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ  ಹೇಳಿಕೆಗೆ ಕೇಂದ್ರ ಸಚಿವ ಕಿರಣ್ ರಿಜಿಜು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಲೀಗ್ ಅನ್ನು ಬೆಂಬಲಿಸುವ ವ್ಯಕ್ತಿಯನ್ನು ಪರಿಗಣಿಸುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಕಿರಣ್ ಹೇಳಿದ್ದಾರೆ.  ಧಾರ್ಮಿಕ ನೆಲೆಯಲ್ಲಿ ಭಾರತದ ವಿಭಜನೆಗೆ "ಜವಾಬ್ದಾರರಾಗಿರುವ" ಮೊಹಮ್ಮದ್ ಅಲಿ ಜಿನ್ನಾ ಅವರ ಮುಸ್ಲಿಂ ಲೀಗ್ ಹೇಗೆ ಜಾತ್ಯತೀತ ಪಕ್ಷವಾಗಿದೆ ಎಂದು ರಿಜಿಜು ಪ್ರಶ್ನಿಸಿದ್ದಾರೆ.

ಜಿನ್ನಾರ ಮುಸ್ಲಿಂ ಲೀಗ್ ಜಾತ್ಯತೀತ ಪಕ್ಷವೇ? ಧಾರ್ಮಿಕ ನೆಲೆಯಲ್ಲಿ ಭಾರತದ ವಿಭಜನೆಗೆ ಕಾರಣವಾದ ಪಕ್ಷ ಜಾತ್ಯತೀತ ಪಕ್ಷವೇ? ಭಾರತದಲ್ಲಿ ಇನ್ನೂ ಕೆಲವರು ಮುಸ್ಲಿಂ ಲೀಗ್ ಅನ್ನು ಬೆಂಬಲಿಸುವ ವ್ಯಕ್ತಿಯನ್ನು ಸೆಕ್ಯುಲರ್ ಎಂದು ಪರಿಗಣಿಸುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ! ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ವಾಷಿಂಗ್ಟನ್‌ನ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಅವರು ಪತ್ರಕರ್ತರೊಂದಿಗೆ ನಡೆಸಿದ ಸಂವಾದದಲ್ಲಿ, ಕೇರಳದಲ್ಲಿ ಮುಸ್ಲಿಂ ಲೀಗ್‌ನೊಂದಿಗೆ ಕಾಂಗ್ರೆಸ್‌ ಪಕ್ಷದ ಮೈತ್ರಿ ಕುರಿತು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, ’ಮುಸ್ಲಿಂ ಲಿಗ್ ಪಕ್ಷದ ಬಗ್ಗೆ ಜಾತ್ಯತೀತ ಅಲ್ಲ ಎನ್ನುವಂತದ್ದು ಏನೂ ಇಲ್ಲ‘ ಎಂದು ಹೇಳಿದರು.

ಮುಸ್ಲಿಂ ಲೀಗ್ ಸಂಪೂರ್ಣವಾಗಿ ಜಾತ್ಯತೀತ ಪಕ್ಷವಾಗಿದೆ. ಅದರಲ್ಲಿ ಜಾತ್ಯತೀತವಲ್ಲದ ಯಾವ ವಿಚಾರವೂ ಇಲ್ಲ. ಆ ವ್ಯಕ್ತಿ (ವರದಿಗಾರ) ಮುಸ್ಲಿಂ ಲೀಗ್ ಅನ್ನು ಅಧ್ಯಯನ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಚೀನಾ ಇವರೆಗೂ ತನ್ನ ಒಂದಿಂಚು ಭೂಮಿಯನ್ನೂ ಕಳೆದುಕೊಂಡಿಲ್ಲ. ಆದರೆ ಈ ವಿಷಯ ಕುರಿತು ಪ್ರಧಾನಿ ಮಾತನಾಡುವುದನ್ನು ಬಿಟ್ಟು, ಬೇರೆ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ‘ ಎಂದು ಭಾರತ– ಚೀನಾ ಗಡಿ ವಿವಾದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com