ಅಮಿತ್ ಶಾ ಎಚ್ಚರಿಕೆ ಬೆನ್ನಲ್ಲೇ ಮಣಿಪುರದಲ್ಲಿ 140ಕ್ಕೂ ಹೆಚ್ಚು ಕದ್ದ ಶಸ್ತ್ರಾಸ್ತ್ರಗಳ ಶರಣಾಗತಿ!

ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಕೆ ಪರಿಣಾಮವು ಒಂದು ದಿನದ ನಂತರ ಗೋಚರಿಸುತ್ತಿದ್ದು ಇಂದು ಮಣಿಪುರದ ವಿವಿಧೆಡೆ 140ಕ್ಕೂ ಹೆಚ್ಚು ಕದ್ದೊಯ್ದಿದ್ದ ಶಸ್ತ್ರಾಸ್ತ್ರಗಳನ್ನು ಶರಣಾಗಿಸಲಾಗಿದೆ ಎಂದು ಮಣಿಪುರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ತಿಳಿಸಿದ್ದಾರೆ. 
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ
Updated on

ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಕೆ ಪರಿಣಾಮವು ಒಂದು ದಿನದ ನಂತರ ಗೋಚರಿಸುತ್ತಿದ್ದು ಇಂದು ಮಣಿಪುರದ ವಿವಿಧೆಡೆ 140ಕ್ಕೂ ಹೆಚ್ಚು ಕದ್ದೊಯ್ದಿದ್ದ ಶಸ್ತ್ರಾಸ್ತ್ರಗಳನ್ನು ಶರಣಾಗಿಸಲಾಗಿದೆ ಎಂದು ಮಣಿಪುರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ತಿಳಿಸಿದ್ದಾರೆ. 

ಮಾಹಿತಿಯ ಪ್ರಕಾರ, ಶಸ್ತ್ರಾಸ್ತ್ರಗಳಲ್ಲಿ ಸ್ವಯಂ-ಲೋಡಿಂಗ್ ರೈಫಲ್‌ಗಳು, ಕಾರ್ಬೈನ್‌ಗಳು, ಎಕೆ ಮತ್ತು ಐಎನ್‌ಎಸ್‌ಎಎಸ್ ರೈಫಲ್‌ಗಳು, ಲೈಟ್ ಮೆಷಿನ್ ಗನ್‌ಗಳು, ಪಿಸ್ತೂಲ್‌ಗಳು, ಎಂ-16 ರೈಫಲ್‌ಗಳು, ಸ್ಮೋಕ್ ಗನ್‌ಗಳು/ಟಿಯರ್ ಗ್ಯಾಸ್, ಸ್ಟೆನ್ ಗನ್‌ಗಳು ಮತ್ತು ಗ್ರೆನೇಡ್ ಲಾಂಚರ್‌ಗಳು ಸೇರಿವೆ. ಮಣಿಪುರಕ್ಕೆ ತಮ್ಮ ಭೇಟಿಯ ಕೊನೆಯ ದಿನವಾದ ಗುರುವಾರ, ಶಾ ಜನರು ಕದ್ದಿದ್ದ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ಮತ್ತು ಆಡಳಿತಕ್ಕೆ ಹಸ್ತಾಂತರಿಸುವಂತೆ ಮನವಿ ಮಾಡಿದರು.

ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನ 10,000 ಸೈನಿಕರು ಈಶಾನ್ಯ ರಾಜ್ಯದಲ್ಲಿ ಸಹಜ ಸ್ಥಿತಿಗೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಇದಲ್ಲದೇ ಇತರ ಅರೆಸೇನಾ ಪಡೆಗಳ ಯೋಧರನ್ನೂ ನಿಯೋಜಿಸಲಾಗಿದೆ.

ಆದರೆ, ರಾಜ್ಯದಲ್ಲಿ ಶೀಘ್ರವೇ ಶೋಧ ಕಾರ್ಯ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಯಾರಿಗಾದರೂ ಆಯುಧ ಪತ್ತೆಯಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಣಿಪುರದ ಬಹುತೇಕ ಜಿಲ್ಲೆಗಳಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಶಾ ಹೇಳಿದ್ದರು. ಹಿಂಸಾಚಾರವನ್ನು ತಡೆಯಲು ಹಲವು ಭದ್ರತಾ ಏಜೆನ್ಸಿಗಳು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿರುವುದರಿಂದ ದುಷ್ಕರ್ಮಿಗಳು ಗುಂಡಿನ ದಾಳಿ ಅಥವಾ ಖಾಲಿ ಮನೆಗಳಿಗೆ ಬೆಂಕಿ ಹಚ್ಚುವ ಅಪರೂಪದ ಘಟನೆಗಳು ಕಂಡುಬರುತ್ತಿವೆ.

ಮಣಿಪುರ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ದೊಡ್ಡ ಘೋಷಣೆ ಮಾಡಿದೆ. ಈ ವೇಳೆ ಕೇಂದ್ರ ಮತ್ತು ಮಣಿಪುರ ಸರ್ಕಾರಗಳು ತಲಾ 10 ಲಕ್ಷ ರೂಪಾಯಿ ಹಾಗೂ ಸಂತ್ರಸ್ತ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ನಡುವೆ ಸೋಮವಾರ ನಡೆದ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಶಾ ಉಗ್ರಗಾಮಿ ಗುಂಪುಗಳಿಗೆ ಎಚ್ಚರಿಕೆ ನೀಡಿದ್ದರು
ಯಾವುದೇ ರೀತಿಯಲ್ಲಿ ಕಾರ್ಯಾಚರಣೆಗಳ ಅಮಾನತು (ಎಸ್‌ಒಒ) ಒಪ್ಪಂದವನ್ನು ಉಲ್ಲಂಘಿಸಿದರೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾ ಬಂಡಾಯ ಗುಂಪುಗಳಿಗೆ ಎಚ್ಚರಿಕೆ ನೀಡಿದ್ದರು. ಯಾವುದೇ ವಿಚಲನವನ್ನು ಕಟ್ಟುನಿಟ್ಟಾಗಿ ಗಣನೆಗೆ ತೆಗೆದುಕೊಳ್ಳಲಾಗುವುದು ಮತ್ತು ಅದನ್ನು ಒಪ್ಪಂದದ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com