2024ರ ಲೋಕಸಭೆ ಚುನಾವಣೆಯಲ್ಲಿ ಮಹಾ ಮೈತ್ರಿಯಿಂದ ಬಿಜೆಪಿಗೆ ಸೋಲು: ರಾಹುಲ್ ಗಾಂಧಿ
ಕಾಂಗ್ರೆಸ್ ಪಕ್ಷವು ಎಲ್ಲಾ ವಿರೋಧ ಪಕ್ಷಗಳೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದೆ. ಕೆಲವು ರಾಜ್ಯಗಳಲ್ಲಿ ಕೊಡುಕೊಳ್ಳುವಿಕೆಯ ನಿಲುವನ್ನು ಕಾಂಗ್ರೆಸ್ ಹೊಂದಲಿದೆ. ಮಾತುಕತೆಗಳ ನಂತರ ಮಹಾಒಕ್ಕೂಟ ರಚನೆಯಾಗಿದೆ.
Published: 02nd June 2023 10:14 AM | Last Updated: 02nd June 2023 10:14 AM | A+A A-

ರಾಹುಲ್ ಗಾಂಧಿ
ವಾಷಿಂಗ್ಟನ್: ಕಾಂಗ್ರೆಸ್ ಪಕ್ಷವು ಎಲ್ಲಾ ವಿರೋಧ ಪಕ್ಷಗಳೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದೆ. ಕೆಲವು ರಾಜ್ಯಗಳಲ್ಲಿ ಕೊಡುಕೊಳ್ಳುವಿಕೆಯ ನಿಲುವನ್ನು ಕಾಂಗ್ರೆಸ್ ಹೊಂದಲಿದೆ. ಮಾತುಕತೆಗಳ ನಂತರ ಮಹಾಒಕ್ಕೂಟ ರಚನೆಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಒಳ್ಳೇಯದೇ ಆಗುತ್ತದೆ ಎನ್ನುವ ನಂಬಿಕೆಯೂ ನನಗಿದೆ ಎಂದು ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ವಾಷಿಂಗ್ಟನ್‌ನ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಅವರು ಪತ್ರಕರ್ತರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಸಮಾಜದ ಕತ್ತು ಹಿಸುಕುತ್ತಿದ್ದಾರೆ, ಇದೆಲ್ಲವನ್ನೂ ಮೀರಿ 2024ರ ಚುನಾವಣೆಯಲ್ಲಿ ಪ್ರತಿಪಕ್ಷಗಳು ಬಿಜೆಪಿಯನ್ನು ಸೋಲಿಸಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಂಸದ ಸ್ಥಾನದಿಂದ ಅನರ್ಹತೆ ನನಗೆ ದೊಡ್ಡ ಅವಕಾಶ ನೀಡಿದೆ: ರಾಹುಲ್ ಗಾಂಧಿ
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಉತ್ತಮ ಸಾಧನೆ ಮಾಡುತ್ತದೆ ಎಂದು ನಾನು ನಂಬಿದ್ದೇನೆ. ಆಶ್ಚರ್ಯಕರ ರೀತಿಯಲ್ಲಿ ಪಕ್ಷ ಹೊರಹೊಮ್ಮಲಿದೆ. ನೋಡುತ್ತಿರಿ, ವಿರೋಧ ಪಕ್ಷಗಳ ಒಗ್ಗಟ್ಟು ಬಿಜೆಪಿಯನ್ನು ಸೋಲಿಸಲಿದೆ’ ಎಂದು ಅವರು ಹೇಳಿದರು.
‘ನರೇಂದ್ರ ಮೋದಿ ಅವರು ಭಾರತೀಯ ಸಮಾಜವನ್ನು ಧ್ರುವೀಕರಿಸುತ್ತಿದ್ದಾರೆ ಮತ್ತು ಒಡೆಯುತ್ತಿದ್ದಾರೆ. ಅವರ ಆಡಳಿತದಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ’ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: ಅಮೆರಿಕದಲ್ಲಿ ಕಾರ್ಯಕ್ರಮದ ಮಧ್ಯೆ ರಾಹುಲ್ ಗಾಂಧಿಯನ್ನು ಹೀಯಾಳಿಸಿದ ಖಲಿಸ್ತಾನಿ ಬೆಂಬಲಿಗರು, ವಿಡಿಯೋ!
‘140 ಕೋಟಿ ಜನರಿರುವ, ವಿವಿಧ ನಂಬಿಕೆಗಳ, ಜಾತ್ಯತೀತ ಸಂವಿಧಾನದ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಿಂದುತ್ವವನ್ನು ಪ್ರತಿಪಾದಿಸುತ್ತಿದೆ’ ಎಂದು ಅವರು ಆರೋಪಿಸಿದರು.
ಜೂನ್ 22 ರಂದು ಮೋದಿ ಅಮೆರಿಕ ಭೇಟಿ ಕೈಗೊಳ್ಳಲಿದ್ದಾರೆ. ಅವರ ಸ್ವಾಗತಕ್ಕೆ ಶ್ವೇತಭವನದಲ್ಲಿ ಭಾರಿ ಸಿದ್ಧತೆಗಳು ನಡೆಯುತ್ತಿರುವ ನಡುವೆಯೇ ರಾಹುಲ್ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ.