ಜುಲೈನಲ್ಲಿ ಹೊಸ ರಾಷ್ಟ್ರೀಯ ಸಹಕಾರ ನೀತಿ ಜಾರಿಯಾಗುವ ಸಾಧ್ಯತೆ

ರಾಜ್ಯ ಸರಕಾರಗಳು, ಕೇಂದ್ರ ಸಚಿವಾಲಯಗಳು, ಇಲಾಖೆಗಳು ಹಾಗೂ ರಾಷ್ಟ್ರೀಯ ಸಹಕಾರಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರನ್ನು ಸಂಪರ್ಕಿಸಿದ ನಂತರ ಜುಲೈನಲ್ಲಿ ಹೊಸ ರಾಷ್ಟ್ರೀಯ ಸಹಕಾರ ನೀತಿಯನ್ನು ಜಾರಿಯಾಗುವ ನಿರೀಕ್ಷೆಯಿದೆ ಎಂದು ಸಹಕಾರ ಸಚಿವಾಲಯ ಸೋಮವಾರ ತಿಳಿಸಿದೆ
ಸಭೆಯಲ್ಲಿ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಮತ್ತಿತರ ಚಿತ್ರ
ಸಭೆಯಲ್ಲಿ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಮತ್ತಿತರ ಚಿತ್ರ

ನವದೆಹಲಿ: ರಾಜ್ಯ ಸರಕಾರಗಳು, ಕೇಂದ್ರ ಸಚಿವಾಲಯಗಳು, ಇಲಾಖೆಗಳು ಹಾಗೂ ರಾಷ್ಟ್ರೀಯ ಸಹಕಾರಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರನ್ನು ಸಂಪರ್ಕಿಸಿದ ನಂತರ ಜುಲೈನಲ್ಲಿ ಹೊಸ ರಾಷ್ಟ್ರೀಯ ಸಹಕಾರ ನೀತಿಯನ್ನು ಜಾರಿಯಾಗುವ ನಿರೀಕ್ಷೆಯಿದೆ ಎಂದು ಸಹಕಾರ ಸಚಿವಾಲಯ ಸೋಮವಾರ ತಿಳಿಸಿದೆ. ಕೇಂದ್ರ ಗೃಹ ಸಚಿವ ಹಾಗೂ ಸಹಕಾರ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ನಿರೀಕ್ಷಿತ ದಿನಾಂಕವನ್ನು ತಿಳಿಸಲಾಯಿತು. 

ಮಾಜಿ ಸಚಿವ ಸುರೇಶ್ ಪ್ರಭು ನೇತೃತ್ವದ 49 ಸದಸ್ಯರ ಸಮಿತಿ ಹೊಸ ರಾಷ್ಟ್ರೀಯ ಸಹಕಾರ ನೀತಿಯ ಕರಡನ್ನು ಪ್ರಮುಖ ಶಿಫಾರಸುಗಳೊಂದಿಗೆ ಸಹಕಾರ ಸಚಿವ ಅಮಿತ್ ಶಾ ಅವರಿಗೆ ಸಲ್ಲಿಸಿದೆ, ಅವರು ಪರಿಷ್ಕೃತ ಕರಡು ಸಿದ್ಧಪಡಿಸುವ ಆಧಾರದ ಮೇಲೆ ಹೆಚ್ಚಿನ ಮಾಹಿತಿ ಹಂಚಿಕೊಂಡಿದ್ದಾರೆ. 

ರಚನಾತ್ಮಕ ಸುಧಾರಣೆಗಳು ಮತ್ತು ಆಡಳಿತ, ಸಹಕಾರಿ ಸಂಸ್ಥೆಗಳ ಆರ್ಥಿಕ ಚೈತನ್ಯ, ಬಂಡವಾಳ ಮತ್ತು ನಿಧಿಯ ಮೂಲಗಳು ಸೇರಿದಂತೆ ವಿವಿಧ ವಲಯಗಳಲ್ಲಿನ ಪ್ರಮುಖ ಶಿಫಾರಸುಗಳ ಜೊತೆಗೆ ಆದ್ಯತೆಯ ವಿಭಾಗಗಳು, ತಂತ್ರಜ್ಞಾನದ ಬಳಕೆ, ಕೌಶಲ್ಯ ಮತ್ತು ತರಬೇತಿ, ಸುಸ್ಥಿರತೆ ಮತ್ತು ಅನುಷ್ಠಾನ ಯೋಜನೆ ಒಳಗೊಂಡಂತೆ  ಕರಡು ನೀತಿಯ ಉದ್ದೇಶಗಳು, ದೂರದೃಷ್ಟಿ ಮತ್ತು ಧ್ಯೇಯಗಳ ಬಗ್ಗೆ ಸಮಿತಿಯ ಸದಸ್ಯರು ಶಾ ಅವರಿಗೆ ವಿವರಿಸಿದ್ದಾರೆ.  

ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ  ಅವರ ‘ಸಹಕಾರ ದಿಂದ ಸಮೃದ್ಧಿ ದೂರದೃಷ್ಟಿಯನ್ನು ಹೇಗೆ ಸಾಕಾರಗೊಳಿಸಬೇಕು ಮತ್ತು ಹೊಸ ನೀತಿಯ ಮೂಲಕ ತಳಮಟ್ಟದಲ್ಲಿ ಸಹಕಾರ ಚಳವಳಿಯನ್ನು ಹೇಗೆ ಬಲಪಡಿಸಬೇಕು ಎಂಬುದರ ಕುರಿತು ಅಮಿತ್ ಶಾ ಮಾರ್ಗದರ್ಶನ ನೀಡಿದರು.

"ಸಹಕಾರ ಸಚಿವರಿಂದ ಪಡೆದ ಮಾರ್ಗದರ್ಶನದ ಪ್ರಕಾರ, ಸಮಿತಿಯು ಪರಿಷ್ಕೃತ ಕರಡನ್ನು ಸಿದ್ಧಪಡಿಸುತ್ತದೆ. ಹೊಸ ಸಹಕಾರ ನೀತಿಯನ್ನು ಜುಲೈ 2023 ರಲ್ಲಿ ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ಮತ್ತು ರಾಷ್ಟ್ರೀಯ ಸಹಕಾರಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರನ್ನು ಸಂಪರ್ಕಿಸಿದ ನಂತರ ಜಾರಿಗೊಳಿಸುವ ನಿರೀಕ್ಷೆಯಿದೆ ಎಂದು ಸಚಿವಾಲಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com