ಮಧ್ಯ ಪ್ರದೇಶ: ಶಾಲಾ ಸಮವಸ್ತ್ರ ವಿವಾದ, ಶಿಕ್ಷಣಾಧಿಕಾರಿ ಮೇಲೆ ಶಾಯಿ ಎರಚಿದ ಬಿಜೆಪಿ ಮುಖಂಡ!
ಶಾಲಾ ಸಮವಸ್ತ್ರ ವಿವಾದ ಹಿನ್ನೆಲೆಯಲ್ಲಿ ಶಿಕ್ಷಣಾಧಿಕಾರಿ ಮೇಲೆ ಕೆಲ ಬಿಜೆಪಿ ಮುಖಂಡರು ಶಾಯಿ ಎರಚಿರುವ ಘಟನೆ ಮಧ್ಯಪ್ರದೇಶದ ದಾಮೋಹ್ ನಲ್ಲಿ ಮಂಗಳವಾರ ನಡೆದಿದೆ. ಸಮವಸ್ತ್ರವಾಗಿ ಹೆಡ್ ಸ್ಕಾರ್ಫ್ ಬಳಸುತ್ತಿರುವ ಖಾಸಗಿ ಶಾಲೆಯೊಂದರ ಪರವಾಗಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಶಿಕ್ಷಣಾಧಿಕಾರಿಯ ಮೇಲೆ ಮಸಿ ಎರಚಲಾಗಿದೆ.
Published: 06th June 2023 11:47 PM | Last Updated: 07th June 2023 10:10 PM | A+A A-

ಶಿಕ್ಷಣಾಧಿಕಾರಿ ಎಸ್ ಕೆ ಮಿಶ್ರಾ
ದಾಮೋಹ್: ಶಾಲಾ ಸಮವಸ್ತ್ರ ವಿವಾದ ಹಿನ್ನೆಲೆಯಲ್ಲಿ ಶಿಕ್ಷಣಾಧಿಕಾರಿ ಮೇಲೆ ಕೆಲ ಬಿಜೆಪಿ ಮುಖಂಡರು ಶಾಯಿ ಎರಚಿರುವ ಘಟನೆ ಮಧ್ಯಪ್ರದೇಶದ ದಾಮೋಹ್ ನಲ್ಲಿ ಮಂಗಳವಾರ ನಡೆದಿದೆ. ಸಮವಸ್ತ್ರವಾಗಿ ಹೆಡ್ ಸ್ಕಾರ್ಫ್ ಬಳಸುತ್ತಿರುವ ಖಾಸಗಿ ಶಾಲೆಯೊಂದರ ಪರವಾಗಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಶಿಕ್ಷಣಾಧಿಕಾರಿಯ ಮೇಲೆ ಮಸಿ ಎರಚಲಾಗಿದೆ.
ಡಿಇಒ ಎಸ್‌ಕೆ ಮಿಶ್ರಾ ಅವರ ವಾಹನ ಮಧ್ಯಾಹ್ನ ಕಚೇರಿ ಆವರಣದಿಂದ ಹೊರಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬಿಜೆಪಿಯ ದಮೋಹ್ ಜಿಲ್ಲಾ ಉಪಾಧ್ಯಕ್ಷ ಅಮಿತ್ ಬಜಾಜ್ ಶಾಯಿ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಮಧ್ಯಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷ ವಿಡಿ ಶರ್ಮಾ ಘಟನೆಯನ್ನು ಖಂಡಿಸಿದ್ದಾರೆ.
ಹಿಂದೂ ವಿದ್ಯಾರ್ಥಿಗಳು ಸೇರಿದಂತೆ ಹುಡುಗಿಯರು ಸಮವಸ್ತ್ರವಾಗಿ ಹಿಜಾಬ್‌ನಂತೆ ಕಾಣುವ ಸ್ಕಾರ್ಫ್‌ಗಳನ್ನು ಧರಿಸಿರುವ ಪೋಸ್ಟರ್ ವಿವಾದದ ನಂತರ ರಾಜ್ಯ ಶಿಕ್ಷಣ ಇಲಾಖೆ ಕಳೆದ ವಾರ ಗಂಗಾ ಜಮುನಾ ಹೈಯರ್ ಸೆಕೆಂಡರಿ ಶಾಲೆಯ ಮಾನ್ಯತೆಯನ್ನು ಅಮಾನತುಗೊಳಿಸಿದೆ.
ಹಿಂದೂ ವಿದ್ಯಾರ್ಥಿಗಳನ್ನು ಹಿಜಾಬ್ ಧರಿಸಿ ನಮಾಜ್ ಮಾಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಶಾಲೆಯ ಒಂದೆರಡು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಆರಂಭದಲ್ಲಿ ಡಿಇಒ ಶಾಲೆಗೆ ಕ್ಲೀನ್ ಚಿಟ್ ನೀಡಿದ್ದರು ಆದರೆ ನಂತರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿ ತನಿಖಾ ಸಮಿತಿ ರಚಿಸಿದರು.
ಶಾಲೆಯಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ತಿಳಿದಿದ್ದರೂ ಡಿಇಒ ಸಮಸ್ಯೆಯನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ ಎಂದು ಮಸಿ ಎರಚಿದ ನಂತರ ಬಜಾಜ್ ಮಿಶ್ರಾ ತಿಳಿಸಿದರು.